ಎಸ್‌ಆರ್‌ಎಸ್‌ ಶಾಲೆಯಲ್ಲಿ ದಸರಾ ಬೊಂಬೆಗಳ ಉತ್ಸವ

KannadaprabhaNewsNetwork |  
Published : Sep 23, 2025, 01:03 AM IST
22ಎಚ್ಎಸ್ಎನ್18 :  | Kannada Prabha

ಸಾರಾಂಶ

ಇಂದಿನ ಮಕ್ಕಳಲ್ಲಿ ನಮ್ಮ ದೇಶೀಯ ಪರಂಪರೆ ಹಾಗೂ ದಸರಾ ಬೊಂಬೆಗಳ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಸೋಮವಾರ ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾ ಶಾಲೆಯಲ್ಲಿ ’ದಸರಾ ಬೊಂಬೆ ಸಂಭ್ರಮ - ೨೦೨೫’ ಅನ್ನು ಸಾಂಪ್ರದಾಯಿಕವಾಗಿ ಆಯೋಜಿಸಲಾಗಿತ್ತು. ಮಕ್ಕಳಿಗೆ ದಸರಾ ಬೊಂಬೆ ಸಂಭ್ರಮದ ಮಹತ್ವ, ಹಾಗೂ ಹತ್ತು ದಿನಗಳ ಕಾಲ ಅಂದಿನಿಂದಲು ದಸರಾ ಬೊಂಬೆಗಳ ಪ್ರದರ್ಶನ ನಡೆಸುತ್ತಿದ್ದ ಹಿಂದಿರುವ ಉದ್ದೇಶವೇನೆಂದು ಸವಿಸ್ತಾರವಾಗಿ ವಿವರಿಸಲಾಯಿತು. ಆ ಮೂಲಕ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ದಸರಾ ಹಬ್ಬದ ಇತಿಹಾಸವನ್ನು ಪರಿಚಯಿಸುವುದರೊಂದಿಗೆ ಸೆ.22 ರಿಂದ ಅಕ್ಟೋಬರ್‌ 1ರವರೆಗೆ ಹತ್ತು ದಿನಗಳ ಬೊಂಬೆಗಳನ್ನು ಇಡಲಾಗುವುದು.

ಹಾಸನ: ಇಂದಿನ ಮಕ್ಕಳಲ್ಲಿ ನಮ್ಮ ದೇಶೀಯ ಪರಂಪರೆ ಹಾಗೂ ದಸರಾ ಬೊಂಬೆಗಳ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಸೋಮವಾರ ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾ ಶಾಲೆಯಲ್ಲಿ ’ದಸರಾ ಬೊಂಬೆ ಸಂಭ್ರಮ - ೨೦೨೫’ ಅನ್ನು ಸಾಂಪ್ರದಾಯಿಕವಾಗಿ ಆಯೋಜಿಸಲಾಗಿತ್ತು.

ಶಾಲೆಯ ಎಲ್ಲಾ ಮಕ್ಕಳು ತಂದಿದ್ದ ಪಾರಂಪರಿಕ ಗೊಂಬೆಗಳಿಂದ ಹಿಡಿದು ಆಧುನಿಕ ಗೊಂಬೆಗಳವರೆಗೆ ವಿವಿಧ ಪ್ರಕಾರದ ನೂರಾರು ದಸರಾ ಬೊಂಬೆಗಳನ್ನು ಹಾಗೂ ಆಟಿಕೆಗಳನ್ನು ಶಿಕ್ಷಕರು ಅಲಂಕಾರಿಕವಾಗಿ ಮತ್ತು ಸೃಜನಾತ್ಮಕವಾಗಿ ಜೋಡಿಸಿ, ಮಕ್ಕಳಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಎಲ್ಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ವೀಕ್ಷಿಸಿ ಸಂತಸಗೊಂಡರು. ಇದಲ್ಲದೆ ಮಕ್ಕಳಿಗೆ ದಸರಾ ಬೊಂಬೆ ಸಂಭ್ರಮದ ಮಹತ್ವ, ಹಾಗೂ ಹತ್ತು ದಿನಗಳ ಕಾಲ ಅಂದಿನಿಂದಲು ದಸರಾ ಬೊಂಬೆಗಳ ಪ್ರದರ್ಶನ ನಡೆಸುತ್ತಿದ್ದ ಹಿಂದಿರುವ ಉದ್ದೇಶವೇನೆಂದು ಸವಿಸ್ತಾರವಾಗಿ ವಿವರಿಸಲಾಯಿತು. ಆ ಮೂಲಕ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ದಸರಾ ಹಬ್ಬದ ಇತಿಹಾಸವನ್ನು ಪರಿಚಯಿಸುವುದರೊಂದಿಗೆ ಸೆ.22 ರಿಂದ ಅಕ್ಟೋಬರ್‌ 1ರವರೆಗೆ ಹತ್ತು ದಿನಗಳ ಬೊಂಬೆಗಳನ್ನು ಇಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ