ಹೊಳೆನರಸೀಪುರದಲ್ಲಿ ಜನಪದ ಗೀತೆ ಗಾಯನ ಸ್ಪರ್ಧೆ

KannadaprabhaNewsNetwork |  
Published : Sep 23, 2025, 01:03 AM IST
22ಎಚ್ಎಸ್ಎನ್13: ಪಟ್ಟಣದ ಶ್ರೀ ಮಹಾಗಣಪತಿ ಪೆಂಡಾಲಿನಲ್ಲಿ ಕನ್ನಡ ಸಾಹಿತ್ಯ ಪರಿ?ತ್ತಿನವತಿಯಿಂದ ಆಯೋಜಿಸಿದ್ದ ಜಾನಪದ ಗೀತೆಗಳ ಗಾಯನ ಸ್ಪರ್ಧೆಯ ವಿಜೇತ ಹೆಚ್.ಆರ್.ಗಣೇಶ್ ಹಾಗೂ ಇತರರಿಗೆ ಗಣ್ಯರು ಬಹುಮಾನ ವಿತರಿಸಿದರು.  | Kannada Prabha

ಸಾರಾಂಶ

ಶ್ರೀ ಮಹಾಗಣಪತಿ ಪೆಂಡಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಜಾನಪದ ಗೀತೆಗಳ ಗಾಯನ ಸ್ಪರ್ಧೆಯು ಪ್ರೇಕ್ಷಕರ ಮನ ಸೂರೆಗೊಂಡಿತು. ಸ್ಪರ್ಧೆಯಲ್ಲಿ ಪಟ್ಟಣದ ಅಂಚೆ ಕಚೇರಿಯ ನೌಕರ ಎಚ್.ಆರ್.ಗಣೇಶ್ ಪ್ರಥಮ, ಟಾಪರ್ ಕಾಲೇಜಿನ ವಿದ್ಯಾರ್ಥಿ ತರುಣ್ ಕುಮಾರ್(ಮೆಣಗನಹಳ್ಳಿ) ದ್ವಿತೀಯ, ಹರದನಹಳ್ಳಿ ಮೊರಾರ್ಜಿ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಬೃಂದ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದರು. ಕಡುವಿನ ಹೊಸಹಳ್ಳಿ ಸರ್ಕಾರಿ ಶಾಲೆಯ ೪ನೇ ತರಗತಿ ವಿದ್ಯಾರ್ಥಿನಿ ನಿಹಾರಿಕಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾಗಿ ಸಮಾಧಾನಕರ ಬಹುಮಾನ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಮಹಾಗಣಪತಿ ಪೆಂಡಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಜಾನಪದ ಗೀತೆಗಳ ಗಾಯನ ಸ್ಪರ್ಧೆಯು ಪ್ರೇಕ್ಷಕರ ಮನ ಸೂರೆಗೊಂಡಿತು.

ಸ್ಪರ್ಧೆಯಲ್ಲಿ ಪಟ್ಟಣದ ಅಂಚೆ ಕಚೇರಿಯ ನೌಕರ ಎಚ್.ಆರ್.ಗಣೇಶ್ ಪ್ರಥಮ, ಟಾಪರ್ ಕಾಲೇಜಿನ ವಿದ್ಯಾರ್ಥಿ ತರುಣ್ ಕುಮಾರ್(ಮೆಣಗನಹಳ್ಳಿ) ದ್ವಿತೀಯ, ಹರದನಹಳ್ಳಿ ಮೊರಾರ್ಜಿ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಬೃಂದ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದರು. ಕಡುವಿನ ಹೊಸಹಳ್ಳಿ ಸರ್ಕಾರಿ ಶಾಲೆಯ ೪ನೇ ತರಗತಿ ವಿದ್ಯಾರ್ಥಿನಿ ನಿಹಾರಿಕಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾಗಿ ಸಮಾಧಾನಕರ ಬಹುಮಾನ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದರು.

ಪುರಸಭೆಯ ಮುಖ್ಯಾಧಿಕಾರಿ ಶಿವಶಂಕರ್ ವಿಜೇತರಿಗೆ ಬಹುಮಾನ ವಿತರಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಗುಪ್ತ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಅಧ್ಯಕ್ಷ ಆರ್‌. ಬಿ.ಪುಟ್ಟೇಗೌಡ, ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಕುಮಾರಿ, ನಾಗಲಾಪುರದ ಜನಪದ ಗಾಯಕ ಪುಟ್ಟರಾಜು, ಸಮಿತಿಯ ವನಜಾರ್ ಲಕ್ಷಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ