ರಾಯಚೂರು ಜಿಲ್ಲಾದ್ಯಂತ ದಾಸಶ್ರೇಷ್ಠ ಕನಕದಾಸ ಜಯಂತಿ

KannadaprabhaNewsNetwork | Published : Nov 19, 2024 12:48 AM

ಸಾರಾಂಶ

ಸರ್ಕಾರಿ-ಅರೆ ಸರ್ಕಾರಿ, ಖಾಸಗಿ ಕಚೇರಿಗಳು, ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ವಿಶೇಷಪೂಜೆ, ಮಾಲಾರ್ಪಣೆ, ಭಾವಚಿತ್ರದ ಅದ್ದೂರಿ ಮೆರವಣಿಗೆ, ಮ್ಯಾರಥಾನ್‌ ಓಟ ಹಾಗೂ ಅವರ ಜೀವನ ಸಾಧನೆಯ ಮೆಲುಕನ್ನು ಹಾಕಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ನಗರ, ತಾಲೂಕು, ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಸೇರಿದಂತೆ ಜಿಲ್ಲೆಯಾದ್ಯಂತ ದಾಸಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ಸೋಮವಾರ ಅದ್ಧೂರಿಯಾಗಿ ಆಚರಿಸಲಾಯಿತು.

ಸರ್ಕಾರಿ-ಅರೆ ಸರ್ಕಾರಿ, ಖಾಸಗಿ ಕಚೇರಿಗಳು, ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ವಿಶೇಷಪೂಜೆ, ಮಾಲಾರ್ಪಣೆ, ಭಾವಚಿತ್ರದ ಅದ್ದೂರಿ ಮೆರವಣಿಗೆ, ಮ್ಯಾರಥಾನ್‌ ಓಟ ಹಾಗೂ ಅವರ ಜೀವನ ಸಾಧನೆಯ ಮೆಲಕನ್ನು ಹಾಕಲಾಯಿತು.

ಗಣ್ಯರಿಂದ ನಮನ: ಜಿಲ್ಲಾಡಳಿತ, ಜಿಪಂ, ರಾಯಚೂರು ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ನಗರದ ಗಂಜ್ ಸರ್ಕಲ್ ಹತ್ತಿರವಿರುವ ಶ್ರೀ ಕನಕದಾಸರ ಪುತ್ಥಳಿಗೆ ವಿವಿಧ ಗಣ್ಯರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.

ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆಯ ಅಧ್ಯಕ್ಷೆ ನರಸಮ್ಮ ಮಾಡ ಗಿರಿ, ಉಪಾಧ್ಯಕ್ಷ ಶಾಜೀದ್ ಸಮೀರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಎಸಿ ಗಜಾನನ ಬಾಳೆ, ತಹಶೀಲ್ದಾರ್ ಸುರೇಶ ವರ್ಮ, ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯಸ್ವಾಮಿ ಹಿರೇಮಠ, ಮಾಜಿ ಸಂಸದ ಬಿ.ವಿ.ನಾಯಕ, ಯುವ ಮುಖಂಡರಾದ ರವಿ ಬೋಸರಾಜು, ಜಿಲ್ಲಾ ಕುರುಬರ ಸಮಾಜದ ಅಧ್ಯಕ್ಷ ಕೆ.ಬಸವಂತಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ರಾಯಚೂರು ವಿವಿಯಲ್ಲಿ ಜಯಂತಿ: ಇಲ್ಲಿನ ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕನಕದಾಸರ 537ನೇ ಜಯಂತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ವೇಳೆ ವಿಶೇಷ ಉಪನ್ಯಾಸ ಕೊಟ್ಟ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ರವಿಕುಮಾರ ಮಾಳಿಗೇರ ಅವರು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದುತ್ತ ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಅವರ ಸಾಹಿತ್ಯ ಕೀರ್ತನೆಗಳು ಸಮಾಜದ ಯುವ ಪೀಳಿಗೆಗೆ ಮಾರ್ಗದರ್ಶನ. ಭಾರತೀಯ ಸಾಂಸ್ಕೃತಿಕ ಕ್ಷೇತ್ರವನ್ನು ಉಳಿಸಿ ಬೆಳೆಸಲು ಹಲವಾರು ದಾಸರು ಶರಣರು ಶ್ರಮಿಸಿದ್ದಾರೆ. ಅಂತಹ ಮಹನೀಯರ ಸಾಲಿನಲ್ಲಿ ಕನಕದಾಸರು ಒಬ್ಬರು. ವಿಶ್ವವಿದ್ಯಾಲಯದಲ್ಲಿ ಅನುಭವ ಮಂಟಪ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ರಾ.ವಿ.ವಿ. ಪ್ರಭಾರಿ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ ಅವರು ಉದ್ಘಾಟಸಿದರು. ಕುಲಸಚಿವ ಡಾ.ಶಂಕರ್.ವ್ಹಿ ಅಧ್ಯಕ್ಷತೆ ವಹಿಸಿದ್ದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಕೃಷಿ ವಿಜ್ಞಾನಗಳ ವಿವಿ : ಇಲ್ಲಿನ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ದಾಸಶ್ರೇಷ್ಟ ಭಕ್ತ ಕನಕದಾಸರ ಜಯಂತೋತ್ಸವವನ್ನು ಆಚರಿಸಲಾಯಿತು. ಈ ವೇಳೆ ವಿವಿ ಕುಲಸಚಿವ ಎಂ.ವೀರನ ಗೌಡ ಮಾತನಾಡಿ, ನಾಡಿನ ಎಲ್ಲ ಶರಣರು, ಸಂತರು, ದಾರ್ಶಿನಿಕರು ಮತ್ತು ಸಮಾಜ ಸುಧಾರಕರ ತತ್ವ ಸಿದ್ಧಾಂತ ಸಮಸಮಾಜ ಕಟ್ಟುವ, ಮಾನವೀಯ ಮೌಲ್ಯಗಳನ್ನು ವೃದ್ಧಿಸುವ ಸಂಗತಿಗಳನ್ನೇ ಒಳಗೊಂಡಿವೆ ಎಂದರು.

ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಮಲ್ಲೇಶ ಕೋಲಿಮಿ, ಉಪನ್ಯಾಸಕರಾದ ಬಸವಣ್ಣೆಪ್ಪ, ಗುರುರಾಜ ಸುಂಕದ,ಡಾ.ಮಚ್ಛೇಂದ್ರನಾಥ, ಡಾ.ಎಂ.ಮಹಾದೇವ ಸ್ವಾಮಿ, ಡಾ.ರಾಜಣ್ಣ ಸೇರಿ ಅನೇಕರು ಇದ್ದರು.

ನವಯುಗ ಶಿಕ್ಷಣ ಸಂಸ್ಥೆ: ನಗರದ ನವಯುಗ ಶಿಕ್ಷಣ ಸಂಸ್ಥೆಯ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಸಹಯೋಗದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು.

ಸಂಸ್ಥೆಯ ಆಡಳಿತ ಅಧಿಕಾರಿ ನರಸಿಂಹಲು ಮಾತನಾಡಿ, ಕನಕದಾಸರು ಜಾತಿ ಪದ್ಧತಿಯ ಹೋಗಲಾಡಿಸಲು ಧ್ವನಿ ಎತ್ತಿದ ಶ್ರೇಷ್ಠ ದಾಸರಾಗಿದ್ದರು. ಅವರ ಆದರ್ಶ ತತ್ವಗಳನ್ನು ಯುವಕರು ತಿಳಿದುಕೊಂಡು ದೇಶದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಮುಂದಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಈರಣ್ಣ ಪೂಜಾರಿ, ಪಪೂ ಕಾಲೇಜಿನ ಪ್ರಾಚಾರ್ಯ ರಮೇಶ ಉಪ್ರಾಳ್, ಉಪನ್ಯಾಸಕ ಭೀಮಣ್ಣ ಭಂಡಾರಿ, ಡಾ. ರವಿಕುಮಾರ, ಜಿ.ಹನುಮಂತು, ಅನ್ನಪೂರ್ಣ, ಶರಣಪ್ಪ, ಧನಂಜಯ ಮೂರ್ತಿ, ಅನಂತರೆಡ್ಡಿ,ಚಂದ್ರಶೇಖರ, ನುಸ್ರತ್ ಬೇಗಂ ಮತ್ತಿತರರು ಭಾಗವಹಿಸಿದ್ದರು.ಕನಕದಾಸರ ಚಿಂತನೆ ಸಾರ್ವಕಾಲಿಕ: ಶಾಸಕ ಹಂಪನಗೌಡ ಪ್ರತಿಪಾದನೆ

ಸಿಂಧನೂರು: ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ಕನಕದಾಸರ ತತ್ವಾದರ್ಶಗಳನ್ನು ಪತಿಯೊಬ್ಬರೂ ಪಾಲಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕಾಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ 537ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸರ್ವರೂ ಒಂದೇ ಎಂದು ಸಾರಿದ ಅವರ ವಿಚಾರಧಾರೆಗಳು, ನಡೆ-ನುಡಿಗಳು ಸಾರ್ವಕಾಲಿಕ ಎಂದರು.ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಅಂದಿನ ಕಾಲದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಒಂಟಿಯಾಗಿ ಹೋರಾಡಿದ ಕ್ರಾಂತಿಕಾರಿ. ಅವರು ಸಂತ, ಶರಣ, ದಾರ್ಶನಿಕ, ತತ್ವಜ್ಞಾನಿ ಹೀಗೆ ಎಲ್ಲವೂ ಆಗಿದ್ದರು ಎಂದು ಅಭಿಪ್ರಾಯಪಟ್ಟರು.

ಗಣ್ಯರಿಂದ ಮಾಲಾರ್ಪಣೆ: ನಗರದ ಕನಕದಾಸ ವೃತ್ತದಲ್ಲಿರುವ ಕನಕದಾಸರ ಕಂಚಿನ ಪುತ್ತಳಿಗೆ ತಾಲ್ಲೂಕಾಡಳಿತ, ಕುರುಬ ಸಮಾಜ, ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು.

ಕೆಓಎಫ್ ರಾಜ್ಯ ಘಟಕದ ಅಧ್ಯಕ್ಷ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದುರುಗಪ್ಪ ಡೊಳ್ಳಿನ್, ಸಂಚಾರಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವೆಂಕಟೇಶ ಚವ್ಹಾಣ್, ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಭೀಮಣ್ಣ ವಕೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್, ಮುಖಂಡರಾದ ಅಮರೇಶಪ್ಪ ಮೈಲಾರ, ಕರೇಗೌಡ ಕುರುಕುಂದಿ, ಕೆ.ರಾಜಶೇಖರ, ಈರೇಶ ಇಲ್ಲೂರು, ಸುರೇಶ ಹಚ್ಚೊಳ್ಳಿ, ಕೆ.ಹನುಮೇಶ ಇದ್ದರು.

ಕೀರ್ತನೆಗಳ ಮೂಲಕ ಸಮಾಜ ತಿದ್ದಿದ ಕವಿ ಕನಕದಾಸ: ಶ್ರೀಗಳುಸಿರವಾರ: ಅಸ್ಪೃಶ್ಯತೆ- ಜಾತಿ ವ್ಯವಸ್ಥೆ ವಿರೋಧಿಸಿ ಸಮಾಜವನ್ನು ತಿದ್ದಿ, ಕಾವ್ಯಗಳ, ಕೀರ್ತನೆಗಳ ಮೂಲಕ ಮನುಕುಲಕ್ಕೆ ದಾರಿ ದೀಪವಾದ ಮಹಾನ್ ಕವಿ ಕನಕದಾಸರು ಎಂದು ನವಲಕಲ್ ಬೃಹನ್ಮಠದ ಅಭಿನವ ಶ್ರೀಸೋಮನಾಥ ಶಿವಾಚಾರ್ಯರು ಅಭಿಪ್ರಾಯಪಟ್ಟರು.ತಾಲ್ಲೂಕಿನ ನವಲಕಲ್ ಗ್ರಾಮದಲ್ಲಿ ದಾಸಶ್ರೇಷ್ಠ ಸಂತ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಸೋಮವಾರ ಕನಕದಾಸರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರಗಳನ್ನು ರಚಿಸಿ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಕನಕದಾಸರು ಮಾಡಿದ್ದಾರೆ ಎಂದರು.

ಕೆ.ಬಸವರಾಜ, ಚನ್ನಬಸವ ಸ್ವಾಮಿ, ರಾಜೇಶ ನಾಯಕ, ಬಸವರಾಜ ಮಂತ್ರಿ, ಯಲ್ಲಪ್ಪ ಹರವಿ, ಸುರೇಶ ಮಂತ್ರಿ, ಮಾಳಿಂಗರಾಯ, ಶೇಖರಯ್ಯಸ್ವಾಮಿ, ದುರಗಪ್ಪ, ಶಿವರಾಜ, ತಿಮ್ಮಣ್ಣ ಬಾಗಲಿ, ಯಲ್ಲಪ್ಪ ಭಾಗಲಿ, ಗೌಡಪ್ಪ ನಾಯಕ ಭಾಗವಹಿಸಿದ್ದರು.ಆಧ್ಯಾತ್ಮಿಕವಾಗಿ ಭಗವಂತನ ಒಲಿಸಿಕೊಂಡ ದಾಸರು

ರಾಯಚೂರು: ಆಧ್ಯಾತ್ಮಿಕ ಚಿಂತನೆ, ಸಾಹಿತ್ಯದ ಮುಖಾಂತರ ಭಗವಂತನನ್ನು ಒಲಿಸಿಕೊಂಡ ಕನಕದಾಸರು, ನಮ್ಮೆಲ್ಲರಿಗೂ ಮುಕ್ತಿಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಎಂದು ಎಸ್ಟಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಉದ್ಘಾಟಿಸಿ ಸೋಮವಾರ ಮಾತನಾಡಿದ ಅವರು. ಮನುಕುಲದ ಉದ್ಧಾರಕ್ಕಾಗಿ ನಡೆಯಬೇಕಾದಂತಹ ಮಾರ್ಗವನ್ನು ಹಾಕಿಕೊಟ್ಟಿರುವ ಕನಕದಾಸರು ಭಗವಂತನನ್ನೇ ಒಲಿಸಿಕೊಂಡಿದ್ದರು ಎಂಬುವುದಕ್ಕೆ ಉಡುಪಿಯ ಶ್ರೀಕೃಷ್ಣ ದೇವಸ್ಥಾನದಲ್ಲಿನ ಕನಕನಕಿಂಡಿಯೇ ಸಾಕ್ಷಿಯಾಗಿದೆ ಎಂದರು.

ಕನಕದಾಸರ ಜೀವನ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಜೀವನ ಹಸನವಾಗಲಿದೆ. ಸಂತರು, ಶರಣ, ದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಅವರ ಸಂದೇಶಗಳು ಒಬ್ಬರಿಗೆ ಮಾತ್ರ ಅನ್ವಯಿಸಲು ಸಾಧ್ಯವಿಲ್ಲ. ಅಂಥ ಮಹಾನ್ ದಾರ್ಶ ನಿಕರ ಸಂದೇಶಗಳನ್ನು ನಾವು ಪಾಲಿಸಬೇಕಾಗಿದೆ.ಪ್ರತಿಯೊಬ್ಬರು ಮುಕ್ತಿ ಹೊಂದಲು ಭಕ್ತಿ ಅವಶ್ಯಕವಾಗಿದೆ,ಶ್ರೀಮಂತಿಕೆಯು ಜೀವನದ ಒಂದು ಭಾಗವಾಗಿದೆ ಎಂಬ ಸಂದೇಶವನ್ನು ದಾಸಶ್ರೇಷ್ಠ ಶ್ರೀಕನಕದಾಸರು ಸಾರಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಹಾಲುಮತ ಸಮಾಜವೆಂದರೆ ನಂಬಿಕೆಯ ಪ್ರತಿರೂಪವಾಗಿದೆ. ಎಲ್ಲ ಸಮುದಾಯಗಳ ಯಾವುದೇ ಶುಭ ಕಾರ್ಯ ಹಾಲುಮತದವರಿಂದಲೇ ಆರಂಭವಾದರೆ ಉತ್ತಮವಾಗಿರಲಿದೆ ಎಂಬ ನಂಬಿಕೆ,ವಿಶ್ವಾಸ ಹಿಂದಿನಿಳದಲೂ ಬಂದಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್ ಮಾತನಾಡಿದರು. ರಾವಿವಿ ಸಹ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಗಾಣದಾಳದ ಲಕ್ಷ್ಮಣ ತಾತಾ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಶೀರ್ ಆಹ್ಮದ್, ಎಸ್ಪಿ ಎಂ.ಪುಟ್ಟಮಾದಯ್ಯ, ತಹಸೀಲ್ದಾರ್ ಸುರೇಶ ವರ್ಮ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ತಾಲ್ಲೂಕು ಅಧ್ಯಕ್ಷ ಹನುಮಂತ ವಕೀಲ ತುರುಕನಡೋಣಿ, ನಾಗೇಂದ್ರಪ್ಪ ಮಟಮಾರಿ, ಮಹಾದೇವಪ್ಪ ಮಿರ್ಜಾಪೂರು,ನಗರಸಭೆ ಸದಸ್ಯ ಎನ್.ಕೆ.ನಾಗರಾಜ, ಬಿ.ಬಸವರಾಜ, ಹನುಮಂತಪ್ಪ ಜಾಲಿಬೆಂಚಿ ಹಾಗೂ ಮತ್ತಿತರರಿದ್ದರು.

Share this article