ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಾಂಖ್ಯಿಕ ತಜ್ಞರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಜನ್ಮ ದಿನ ಹಾಗೂ ಸಾಂಖ್ಯಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಹಣಕಾಸಿನ ಎಲ್ಲ ವ್ಯವಹಾರಗಳಿಗೆ ಹಾಗೂ ಪ್ರತಿ ಇಲಾಖೆಗಳ ಯೋಜನೆಗಳು ರೂಪುಗೊಳ್ಳುವುದಕ್ಕೆ ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳೇ ಆಧಾರ. ಆದ್ದರಿಂದ ಇದನ್ನು ಮೂಲ ಇಲಾಖೆ ಎಂದು ಕರೆಯಬಹುದು ಎಂದರು.
ಕೇವಲ ಸಾಂಪ್ರದಾಯಿಕ ಸಮೀಕ್ಷೆಗಳ ಮೇಲೆ ಅವಲಂಬಿತವಾಗದೆ, ಈಗಾಗಲೇ ಸರ್ಕಾರದ ಬಳಿ ಇರುವ ಬೃಹತ್ ಆಡಳಿತಾತ್ಮಕ ದತ್ತಾಂಶವನ್ನು ಸರಿಯಾಗಿ ವಿಶ್ಲೇಷಿಸಿದರೆ, ಜನರಿಗೆ ಅಗತ್ಯವಿರುವ ನೈಜ ಯೋಜನೆಗಳನ್ನು ರೂಪಿಸಬಹುದು ಎಂದು ಹೇಳಿದರು.ಹೊಸದಾಗಿ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸುವುದಕ್ಕೆ ಹೋಲಿಸಿದರೆ, ಲಭ್ಯವಿರುವ ದತ್ತಾಂಶವನ್ನು ಬಳಸುವುದು ಆರ್ಥಿಕವಾಗಿ ಮತ್ತು ಸಮಯದ ದೃಷ್ಟಿಯಿಂದ ಅತ್ಯಂತ ಲಾಭದಾಯವಾಗಿದ್ದು, ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಇಲ್ಲವೇ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಇದು ನೆರವಾಗುತ್ತದೆ ಎಂದರು.
ಇಲಾಖೆಯ ಪ್ರಜ್ಞಾ ಎನ್ ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ಇಲಾಖೆಯ ನೌಕರರಾದ ಪ್ರವೀಣ್, ಪ್ರೊ.ಪಿ.ಸಿ.ಮಹಾಲನೋಬಿಸ್ ರವರ ಜೀವನ ಚರಿತ್ರೆ ಹಾಗೂ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಂಎಡಿಬಿ ಉಪನಿರ್ದೇಶಕ ಶಿವಾನಂದ್ ಕುದರಿ, ನಿವೃತ್ತ ಸಾಂಖ್ಯಿಕ ಸಂಗ್ರಹಣಾಽಕಾರಿ ಬ್ರಿಜಿತ್ ವರ್ಗೀಸ್,ನಿವೃತ್ತ ಜಂಟಿ ನಿರ್ದೇಶಕ ಹನುಮಂತಪ್ಪ, ನಿವೃತ್ತ ಡಿಡಿ ಬಾಲರಾಜ್ ಸಾಂಖ್ಯಿಕ ಇಲಾಖೆ ಅಧಿಕಾರಿಗಳು, ನೌಕರರು, ನಿವೃತ್ತ ಅಧಿಕಾರಿಗಳು ಹಾಜರಿದ್ದರು.