ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ೩೦ ವರ್ಷಗಳಿಂದ ದತ್ತಪೀಠದ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷದಿಂದ ಶ್ರೀರಾಮಸೇನೆ, ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಒಟ್ಟಿಗೆ ಸೇರಿ ಆ ಹೋರಾಟಕ್ಕೆ ಬಲ ಕೊಡಲಾಗಿದೆ. ಡಿಸೆಂಬರ್ ೨,೩ ಮತ್ತು ೪ರಂದು ದತ್ತಪೀಠದಲ್ಲಿ ದತ್ತ ಜಯಂತಿಯ ಕಾರ್ಯಕ್ರಮ ನಡೆಯುತ್ತದೆ. ಇಡೀ ರಾಜ್ಯದಿಂದ ಶ್ರೀರಾಮ ಸಂಘಟನೆಯಿಂದ ಸುಮಾರು ೫ ಸಾವಿರ ಜನ ಕಾರ್ಯಕರ್ತರು ಈ ಸಲ ಜೊತೆಗೆ ಭಾಗವಹಿಸಿ ಅವರ ಹೋರಾಟಕ್ಕೆ ಬೆಂಬಲ ತುಂಬಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಸುಪ್ರಿಂಕೋರ್ಟ್ ತನಕ ಹೋಗಿ ಕೋರ್ಟಿನ ರಾಜ್ಯ ಸರಕಾರದ ಕಡೆ ಅದನ್ನ ಬಗೆಹರಿಸಲು ಸೂಚಿಸಿದೆ. ಒಂದು ಕುಟುಂಬದ ಜೊತೆಗೆ ಇಷ್ಟು ದೊಡ್ಡ ಹೋರಾಟ ನಡೆಸುತ್ತಿದೆ. ಮುಸ್ಲಿಂ ವಿರುದ್ಧ ಅಲ್ಲ, ಒಂದು ಶಾಕಾದ್ರಿ ಎನ್ನುವ ಒಂದು ಕುಟುಂಬದ ತಮ್ಮ ಆಸ್ತಿ ಸ್ವಂತ ಆಸ್ತಿ ಹಾಗೆ ನಡೆದುಕೊಂಡು ಬಂದಿದ್ದರು. ಅದರ ವಿರುದ್ಧ ಹೋರಾಟವನ್ನು ಮಾಡಿ ದಾಖಲೆ ಸಮೇತ ಸುಪ್ರಿಂಕೋರ್ಟ್ ಹೇಳಿದ್ದು, ಇದು ದತ್ತಾತ್ರೆಯ ಪೀಠ, ಮುಜರಾಯಿ ಇಲಾಖೆಗೆ ಸೇರಬೇಕಾಗಿತ್ತು ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಮುಜರಾಯಿ ಎಂದರೇ ಇದು ಹಿಂದೂಗಳ ದೇವಸ್ಥಾನಕ್ಕೆ ಸಂಬಂಧಪಟ್ಟಿರುವುದು ಎನ್ನುವುದು. ಇದರಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಇತರೆ ಬೇರೆ ಯಾರಿಗೂ ಅದು ಸಂಬಂಧಪಡುವುದಿಲ್ಲ. ಆದರೂ ಕೂಡ ಬೇಡವಾದ ವಿಚಾರದಲ್ಲಿ ಗೊಂದಲ ಸೃಷ್ಠಿಮಾಡಿ ಸರಕಾರವು ಇನ್ನು ಬಗೆಹರಿಸಲಾರದೇ ಬಾಕಿ ಉಳಿಸಿಕೊಂಡಿದೆ ಎಂದರು.ಒಂದರಲ್ಲೆ ಇಬ್ಬರನ್ನ ಸೇರಿಸಿದರೇ ಸೌಹಾರ್ದ ಆಗುವುದಿಲ್ಲ. ದತ್ತಾತ್ರೆಯ ಪಾದುಕೆಗೆ ಮುಸ್ಲಿಮರು ಬಂದು ಪೂಜೆ ಹೇಗೆ ಮಾಡುತ್ತಾರೆ? ಹೇಗೆ ಅವಕಾಶ ಇದೆ. ಎಲ್ಲಾ ಹಿಂದೂಗಳು ಒಂದಾಗಿ ದುಷ್ಟಶಕ್ತಿಯನ್ನು ಹೊರಗೆ ಕಳುಹಿಸುವ ಅವಶ್ಯಕತೆ ಇದೆ. ಸೌಹಾರ್ದ, ಶಾಂತಿ, ಗಲಭೆ ಇಲ್ಲದೆ ಹಿಂದೂ ಮುಸ್ಲಿಂ ಭಾಯ್ ಭಾಯ್ ಆಗಬೇಕಾದರೇ ಅವರಿಗೆ ಪ್ರತ್ಯೇಕವಾದಂತಹ ಸರ್ವೆ ನಂ.೫೭ರಲ್ಲಿ ಕೊಟ್ಟು, ಪೂರ್ಣ ಪ್ರಮಾಣದಲ್ಲಿ ಇದನ್ನ ಒಪ್ಪಿಸಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ ಎಂದರು.
ಕ್ರಿಸ್ಮಸ್‌ಗೆ 10 ದಿನ ರಜೆ ಬೇಡ:ಪ್ರತಿವರ್ಷ ಕ್ರಿಸ್ಮಸ್ ಹಬ್ಬ ಬರುತ್ತದೆ. ಡಿಸೆಂಬರ್ ೨೪ ಅಧಿಕೃತವಾದಂತಹ ರಜೆ ಘೋಷಣೆ ಮಾಡಿದೆ. ಆದರೆ ಪ್ರತಿಯೊಂದು ಕ್ರಿಶ್ಚಿಯನ್ ಕಾನ್ವೆಂಟ್‌ಗಳಲ್ಲಿ ೧೦ ದಿನ ರಜೆ ಕೊಡಲಾಗುತ್ತಿದೆ. ಆದರೆ ಈ ಶಾಲೆಯಲ್ಲಿ ಶೇಕಡ ೯೯ರಷ್ಟು ಹಿಂದೂ ಮಕ್ಕಳೆ ಇರುತ್ತಾರೆ, ಅಲ್ಲಿಯ ಸಿಬ್ಬಂದಿ ಕೂಡ ೯೯ ಭಾಗ ಹಿಂದುಗಳೇ ಇದ್ದು, ಈ ಹತ್ತು ದಿನಗಳ ರಜೆ ಯಾರಿಗೆ ಕೊಡುತ್ತಿದ್ದೀರಿ! ಬ್ರಿಟಿಷರು ಹೋಗಿ ೭೯ ವರ್ಷಗಳೆ ಕಳೆದಿದೆ. ಇನ್ನು ಬ್ರಿಟಿಷ್ ಗುಲಾಮಗಿರಿಯನ್ನು ಕ್ರಿಶ್ಚಿಯನ್ ಅವರು ನಮ್ಮ ಮಕ್ಕಳ ಮೇಲೆ ಮತ್ತು ನಮ್ಮ ಶಿಕ್ಷಣದ ಮೇಲೆ ಏರಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕೂಡಲೇ ಆ ಹತ್ತು ದಿನ ಕೊಡುವ ರಜೆ ರದ್ದು ಮಾಡಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಎಚ್ಚರಿಸಿದರು. ಗೋ ಹತ್ಯೆ ಕಾಣುತ್ತಿಲ್ಲವೇ?
ಈ ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಕಳ್ಳತನ ಹಾಗೂ ಗೋ ಮಾಂಸ ಮಾರಾಟ ಮಾಡುತ್ತಿರುವುದರ ಬಗ್ಗೆ ನಮ್ಮ ಕಾರ್ಯಕರ್ತರ ಮೂಲಕ ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ಠಾಣೆಗೆ ಮನವಿಯನ್ನು ಕೊಡಲಾಗಿದೆ. ಆದರೂ ನಿರಂತರವಾಗಿ ಗೋಹತ್ಯೆ ಆಗುತ್ತಿದೆ. ಗೋಹತ್ಯೆ ಮಾಡಬಾರದು ಎಂದು ಕಾನೂನು, ಕಾಯಿದೆ ಇದೆ. ಈ ಕಾಯಿದೆಗೆ ಯಾವುದೇ ಕಿಮ್ಮತ್ತಿಲ್ಲ. ನಿರಂತರ ಬಹಿರಂಗವಾಗಿ ಗೋಹತ್ಯೆ ಆಗುತ್ತಿರುವುದು ಡಿಸಿ, ಎಸ್ಪಿ ಅಧಿಕಾರಿಗಳಿಗೆ ಗಮನದಲ್ಲಿ ಇಲ್ಲವೇ! ಕಣ್ಣಿಗೆ ಕಾಣುತ್ತಿಲ್ಲವೇ? ನಾವು ಏನಾದರೂ ಗೋ ಹಿಡಿದರೇ ಗಲಭೆ ಆಗುತ್ತದೆ, ಕೋಮು ಗಲಭೆ ಆಗುತ್ತದೆ ಇನ್ನು ನಮ್ಮ ಕಾರ್ಯಕರ್ತರ ಮೇಲೆ ಕೇಸು ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಲಸಿಗರ ಮೇಲೆ ಕಣ್ಣಿಡಿ:ಬಾಂಗ್ಲಾ ವಲಸೆ ಮುಸ್ಲಿಂರು ದೊಡ್ಡ ಪ್ರಮಾಣದಲ್ಲಿ ನಮ್ಮ ಕರ್ನಾಟಕದಲ್ಲಿ ಮತ್ತು ಜಿಲ್ಲೆಯಲ್ಲಿ ಬೆಳೆಯುತ್ತಿದ್ದಾರೆ. ಸಕಲೇಶಪುರ, ಅರಕಲಗೂಡು ಸೇರಿದಂತೆ ಇತರೆ ಎಲ್ಲಾ ಕಡೆ ಬಾಂಗ್ಲ ಮುಸ್ಲಿಂ ಶತ್ರು ವಲಸೆಗರು ನಾವು ಈ ಜಿಲ್ಲೆಯಲ್ಲಿ ಸಾಕುತ್ತಿದ್ದೇವೆ. ಈಗಾಗಲೇ ಕಾಫಿ ಎಸ್ಟೇಟ್ ಮಾಲೀಕನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಏನು ಬೇಕಾದರೂ ನಡೆಯುತ್ತಿದೆ. ಇಲ್ಲಿನ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಕೂಡಲೇ ಒದ್ದು ಹೊರಗೆ ಹಾಕಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆ ಸಂಘಟನಾ ರಾಜ್ಯ ಕಾರ್ಯಧ್ಯಕ್ಷ ಸುಂದರೇಶ್, ಸಂಘಟನಾ ಕಾರ್ಯದರ್ಶಿ ಪರಶುರಾಮ್ ನಡಮನಿ, ಕಾರ್ಯದರ್ಶಿ ರಮೇಶ್ ಗೌಡ, ಮಾಧ್ಯಮ ಪ್ರಮುಖ್ ಮೋಹನ್, ರಾಜ್ಯ ಕಾರ್‍ಯದರ್ಶಿ ಜಾನೆಕೆರೆ ಹೇಮಂತ್, ಜಿಲ್ಲಾಧ್ಯಕ್ಷ ಧರ್ಮನಾಯಕ್, ಪುನಿತ್ ಕಾಳೇನಹಳ್ಳಿ, ದರ್ಶನ್, ವಿನಯ್ ಗೌಡ, ಜಗದೀಶ್, ಮಹೇಶ್ ಇತರರು ಉಪಸ್ಥಿತರಿದ್ದರು.===* ಬಾಕ್ಸ್‌ನ್ಯೂಸ್: ಸಿಸಿ ಕ್ಯಾಮರಾ ಹಾಕಿ ಎನ್ನುವುದಕ್ಕೆ ಆಕ್ಷೇಪ ಏಕೆ?ಪ್ರಾರ್ಥನಾ ಸ್ಥಳ, ಮಸೀದಿಗಳಿಗೆ ಕ್ಯಾಮರಾ ಹಾಕಿ ಎನ್ನುವುದು ಆಕ್ಷೇಪಣೆ ಏನಿದೆ? ನಮ್ಮ ಹಿಂದೂ ಮಂದಿರಗಳಲ್ಲಿ ಕೂಡ ಸಿಸಿ ಕ್ಯಾಮರಾ ಇದೆ. ಸಿಸಿ ಕ್ಯಾಮರಾ ಹಾಕಿದರೇ, ಮಸೀದಿಗೆ ಕ್ಯಾಮರ ಹಾಕಲು ಭಯ ಏಕೆ? ಈಗಾಗಲೇ ಒಳಗಡೆ ಏನು ನಡೆಯುತ್ತದೆ ಬಗ್ಗೆ ತಿಳಿಯಲಿದೆ. ಇವರಿಗೆ ತೊಂದರೆ ಏನು? ಈಗ ಸಂಶಯ ಬರುತ್ತಿದೆ. ದೆಹಲಿಯ ಸ್ಫೋಟದ ಹಿನ್ನೆಲೆ ನೋಡಿದರೇ ಸ್ಫೋಟಿಸುವ ಮೊದಲು ಮಸೀದಿಗೆ ಹೋಗಿ ಬಂದಿದ್ದಾನೆ. ಅಲ್ಲಿಗೆ ಹೋಗಿ ಏಕೆ ಬಂದರೂ ಅಲ್ಲಿ ಯಾರು ಈ ನಿರ್ದೇಶನ ಕೊಟ್ಟರು. ಸರ್ಕಾರ ನಮ್ಮ ಬೇಡಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರಿಗೆ ಓಟ್ ಕೊಟ್ಟು ಅಧಿಕಾರ ಬೇಕು ಅಷ್ಟೆ. ಆನರ ಸುರಕ್ಷತೆ ಬೇಕಿಲ್ಲ. ಸಿಸಿ ಕ್ಯಾಮರಾ ಹಾಕಿಲ್ಲ ಎಂದರೇ ಸಂಶಯ ಬರುತ್ತದೆ. ಈ ಬಗ್ಗೆ ಬೇಕಾದರೇ ಓಪನ್ ಆಗಿ ಚರ್ಚೆ ಮಾಡೋಣ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.