ಕನ್ನಡಪ್ರಭ ವಾರ್ತೆ ಬೇಲೂರು
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ತಾಲೂಕಿನ ಕಾರ್ಯದರ್ಶಿ ನಾಗೇಶ್ (ಗುಂಡಣ್ಣ) ಅವರು, ದತ್ತಮಾಲಾ ಧಾರಣೆ ಭಕ್ತರ ಜೀವನದಲ್ಲಿ ಶ್ರದ್ಧೆ, ಶಿಸ್ತು ಮತ್ತು ಭಕ್ತಿಭಾವವನ್ನು ಬೆಳೆಸುತ್ತದೆ. ಸಮಾಜದಲ್ಲಿ ಸಂಸ್ಕೃತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಬೇಲೂರು ತಾಲೂಕಿನಲ್ಲಿ ಪ್ರತಿವರ್ಷವೂ ಭಕ್ತರು ದತ್ತಪೀಠಕ್ಕೆ ತೆರಳಲಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ದೀಕ್ಷೆ ಸ್ವೀಕರಿಸುತ್ತಿರುವುದು ಸಂತೋಷದ ಸಂಗತಿ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಭಕ್ತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸೇವೆ ನೀಡಲು ಸದಾ ಸಿದ್ಧವಾಗಿದೆ. ಕರ್ನಾಟಕದ ಅಯೋಧ್ಯೆ " ಎಂದೇ ಬಿಂಬಿತವಾಗಿರುವ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಶತಮಾನಗಳಿಂದ ಪೂಜೆ ನಡೆಯುತ್ತಿರಲಿಲ್ಲ. ವಿಶ್ವ ಹಿಂದೂ ಪರಿಷತ್- ಬಜರಂಗದಳದ ನಿರಂತರ ಹೋರಾಟ ಸಂಘರ್ಷದಿಂದ ಹಿಂದೂ ಅರ್ಚಕರ ನೇಮಕವಾಗಿದ್ದು ದತ್ತಪೀಠದ ಗುಹೆಯಲ್ಲಿ ದತ್ತ ಪಾದುಕೆಗೆ ತ್ರಿಕಾಲ ಪೂಜೆ ಮತ್ತು ಪ್ರತಿ ಹುಣ್ಣಿಮೆಯಂದು ರುದ್ರಾಭಿಷೇಕ ನಡೆಯುತ್ತಿದ್ದು, ಈ ಪಾದುಕೆಯ ಪೂಜೆಯಿಂದ ಇಡೀ ದತ್ತ ಪೀಠದ ಪರಿಸರದಲ್ಲಿ ವಿಶೇಷವಾದ ಶಕ್ತಿ ಆವಾಹನೆಯಾಗಿದೆ. ಸಮಸ್ತ ಹಿಂದೂ ಬಾಂಧವರು ದತ್ತಪೀಠಕ್ಕೆ ಭಕ್ತಿಯಿಂದ ಬಂದು ದತ್ತಾತ್ರೇಯರ ಕೃಪೆಗೆ ಪಾತ್ರರಾಗಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ಭರತ್ ಬೇಲೂರು ತಾಲೂಕು ಸಂಯೋಜಕ, ಯಶ್ವಂತ್ ವಿದ್ಯಾರ್ಥಿ ಪ್ರಮುಖ ಸಂಜಯ್, ಶರತ್ ತಾಲೂಕು ಗೋರಕ್ಷಕ ಪ್ರಮುಖ ಪ್ರಜ್ವಲ್, ಹೇಮಂತ ನಗರ ಕಾರ್ಯದರ್ಶಿ ಸೇರಿದಂತೆ ಇತರರು ಹಾಜರಿದ್ದರು.