ಭಜರಂಗದಳ ಜತೆಗೆ ದತ್ತಪೀಠ ಆಂದೋಲನ: ಪ್ರಮೋದ್ ಮುತಾಲಿಕ್

KannadaprabhaNewsNetwork |  
Published : Nov 01, 2025, 01:15 AM IST
ಪ್ರಮೋದ್ ಮುತಾಲಿಕ್ | Kannada Prabha

ಸಾರಾಂಶ

ಚಿಕ್ಕಮಗಳೂರು, ಮುಂದಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜೊತೆ ಶ್ರೀರಾಮ ಸೇನೆ ಸಂಘಟನೆ ಸೇರಿಕೊಂಡು ದತ್ತಪೀಠ ಅಂದೋಲನ ಆಚರಿಸಲು ನಿರ್ಣಯ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

- ರಾಜ್ಯದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಜಾಗೃತಿ ಮೂಡಿಸ ಲಾಗುತ್ತಿದೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮುಂದಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜೊತೆ ಶ್ರೀರಾಮ ಸೇನೆ ಸಂಘಟನೆ ಸೇರಿಕೊಂಡು ದತ್ತಪೀಠ ಅಂದೋಲನ ಆಚರಿಸಲು ನಿರ್ಣಯ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.ಶ್ರೀ ರಾಮ ಸೇನೆ ಕಳೆದ 20 ವರ್ಷಗಳಿಂದ ಕರ್ನಾಟಕ ಮತ್ತು ಇತರೆ ಐದು ರಾಜ್ಯಗಳಲ್ಲಿ ಹಿಂದುಗಳ ಸಂಘಟನೆ ಮಾಡಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಜಾಗೃತಿ ಮೂಡಿಸ ಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ರಾಜ್ಯಾದ್ಯಂತ ದತ್ತಪೀಠ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ದೇಶದ ಧರ್ಮದ ಮೇಲೆ ನಡೆಯು ತ್ತಿರುವ ಪ್ರಹಾರ ಅಪಪ್ರಚಾರಗಳನ್ನು ಹಿಂದೂಗಳಾದ ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸುವ ಅವಶ್ಯಕ ಇದೆ. ಶ್ರೀ ರಾಮ ಸೇನೆ ರಾಜ್ಯದ ಎಲ್ಲಾ ಪ್ರಮುಖರೊಂದಿಗೆ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.ಶ್ರೀ ರಾಮ ಸೇವೆ ಸಂಘಟನೆ ಪ್ರತ್ಯೇಕವಾಗಿ ದತ್ತಪೀಠ ಅಂದೋಲನ ನಡೆಸದೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಜತೆಗೆ ಆಚರಿಸಲಾಗುವುದು. ಶ್ರೀರಾಮ ಸೇನೆ ಹೆಸರು ಎಲ್ಲಿಯೂ ಯಾರೂ ಸಹ ಉಪಯೋಗಿಸದೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಮಾತ್ರ ಆಚರಿಸಬೇಕು. ಇದೇ ಡಿಸೆಂಬರ್‌ನಲ್ಲಿ ಆಚರಿಸುವ ವಿಶ್ವ ಹಿಂದೂ ಪರಿಷತ್, ಭಜರಂಗದಳದ ದತ್ತ ಜಯಂತಿ ಕಾರ್ಯಕ್ರಮಕ್ಕೆ ಶ್ರೀ ರಾಮ ಸೇನೆ ಸಹಕರಿಸುತ್ತದೆ ಎಂದು ಹೇಳಿದರು.ದತ್ತಪೀಠ ಸಂಪೂರ್ಣ ಇಸ್ಲಾಮಿಕ ಹಿಡಿತದಿಂದ ಹಿಂದೂಗಳಿಗೆ ಒಪ್ಪಿಸುವವರೆಗೂ ಆರ್‌ಎಸ್‌ಎಸ್ ಮಾರ್ಗದರ್ಶನದಲ್ಲಿ ವಿಶ್ವ ಹಿಂದೂ ಪರಿಷತ್ಬ, ಭಜರಂಗದದ ಜೊತೆಗೆ ಶ್ರೀ ರಾಮ ಸೇನೆ ಇದ್ದು, ಹೋರಾಟದಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಶ್ರೀ ರಾಮ ಸೇನೆ ಜವಾಬ್ದಾರಿ ಯಾರಿಗೂ ಇರುವುದಿಲ್ಲ. ವಿಭಾಗ, ಜಿಲ್ಲಾ, ತಾಲೂಕು ಹಾಗೂ ಇತರೆ ಯಾವುದೇ ಜವಾಬ್ದಾರಿ ಘೋಷಣೆಯನ್ನು ಯಾರಿಗೂ ಮಾಡಲಾಗಿಲ್ಲ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಶ್ರೀ ರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ, ರಾಜ್ಯ ಕಾರ್ಯದರ್ಶಿ ಸುಂದರೇಶ್, ಮುಖಂಡರಾದ ಪರಶುರಾಮ್, ಉಮೇಶ್‌ಗೌಡ ಉಪಸ್ಥಿತರಿದ್ದರು.

--

ಧರ್ಮಸ್ಥಳ ಬುರುಡೆ ಪ್ರಕರಣ, ತಡೆಯಾಜ್ಞೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ: ಮುತಾಲಿಕ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಕಾಂಗ್ರೆಸ್‌ನ ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ ಕಮ್ಯೂನಿಸ್ಟರ ಕುಮ್ಮಕ್ಕಿನಿಂದ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರದ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ದೊಡ್ಡ ಷಡ್ಯಂತ್ರ ರೂಪಿಸಿ ಹಿಂದೂ ಧರ್ಮ ಮತ್ತು ಹಿಂದೂ ಸಂಘಟನೆ, ಹಿಂದೂ ವಿಚಾರಧಾರೆಗಳ ಮೇಲೆ ಆಕ್ರಮಣ ಮಾಡುವ ಷಡ್ಯಂತರ ಮಾಡಿದ್ದಾರೆ. ಬರುಡೆ ಹಿಡಿದು ಕೊಂಡು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಅಗೆಯಿರಿ, ಇಲ್ಲಿ ಅಗೆಯಿರಿ ಎಂದರೇ ಅದಕ್ಕೆ ಸರ್ಕಾರ ಎಸ್‌ಐಟಿ ನೇಮಿಸುತ್ತದೆ. ನಾಲ್ಕೈದು ಜನ ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಆ ಅಧಿಕಾರಿಗಳಿಗೆ ಅಗೆಯುವ ಕೆಲಸವೇ, ಅವರಿಗೆ ಬೇರೆ ಕೆಲಸವಿಲ್ಲವೆ ಎಂದು ಪ್ರಶ್ನಿಸಿದರು.

ಧರ್ಮಸ್ಥಳದ ಬಗ್ಗೆ ಅವಮಾನ, ಅಪಪ್ರಚಾರ ಮಾಡುವ ಪ್ರಕ್ರಿಯೆ ನಡೆಯಿತು. ಅದಕ್ಕೆ ಪೂರ್ಣವಿರಾಮ ನೀಡಲು ತಡೆಯಾಜ್ಞೆ ತರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ವಿಚಾರವಾದಿಗಳ ದೊಡ್ಡ ಷಡ್ಯಂತ್ರ ಬಯಲಾಗಿದೆ ಇದನ್ನು ಖಂಡಿಸುತ್ತೇವೆ ಎಂದರು.ಪ್ರಕರಣದಲ್ಲಿ ಯಾರ ಮೇಲೂ ಕ್ರಮವಿಲ್ಲ. ನಾವೂ ದತ್ತಪೀಠದಲ್ಲಿನ ಬುರುಡೆ ಹಿಡಿದುಕೊಂಡು ಬರುತ್ತೇವೆ ಅಲ್ಲಿ ಎಷ್ಟು ಹೆಣಗಳನ್ನು ಹೂತ್ತಿದ್ದಾರೆ ಅಗೆಯಿರಿ ಎಂದು ಹೇಳುತ್ತೇವೆ. ನೀವು ಎಸ್‌ಐಟಿ ನೇಮಕ ಮಾಡು ತ್ತೀರಾ ಎಂದು ಪ್ರಶ್ನಿಸಿದ ಅವರು ಸರ್ಕಾರದ ಬೇಜವಾಬ್ದಾರಿತನ ಕಾಣಿಸುತ್ತಿದೆ ಎಂದು ಹೇಳಿದರು.ಹೋರಾಟದ ಹೆಸರಿನಲ್ಲಿ ಸೌಜನ್ಯಗೆ ಅನ್ಯಾಯ ಮಾಡಿದರು. ಆಕೆ ಹೆಸರಿನಲ್ಲಿ ಮಾಡಿದ ಕುಕೃತ್ಯ ಅಕ್ಷ್ಯಮ್ಯ ಅಪರಾಧ. ನಮ್ಮ ಹತ್ತಿರ ದಾಖಲೆ ಇದೆ ಎನ್ನುತ್ತಾರೆ. ಏನು ದಾಖಲೆ ಇದೆ. ಅದಕ್ಕೆ ಕೋರ್ಟ್ ಮತ್ತು ಪೊಲೀಸ್ ಇಲಾಖೆ ಇಲ್ಲವೇ ಬರುಡೆ ಹಿಡಿದುಕೊಂಡು ನೀವು ಮಾಡುತ್ತಿರುವ ಕುಕೃತ್ಯ ಜನರಿಗೆ ಗೊತ್ತಿಲ್ಲವೇ, ಜನರು ಮೂರ್ಖರೇ ಎಂದು ಕೇಳಿದ ಮುತಾಲಿಕ್ ಸರ್ಕಾರದ ಕೆಲವು ಜನ ಮತ್ತು ಕಮ್ಯೂನಿಸ್ಟರು ಸೇರಿ ಮಾಡಿರುವ ಕೃತ್ಯ ಸಫಲವಾಗಿದೆ. ಅವರು ಮಾಡಿರುವ ಕುಕೃತ್ಯಕ್ಕೆ ತಡೆಯಾಜ್ಞೆ ತಂದು ಸೇಫ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 31 ಕೆಸಿಕೆಎಂ 2

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!