ದವನದ ಹುಣ್ಣಿಮೆ: ಹುಲಿಗಿಗೆ 4 ಲಕ್ಷ ಭಕ್ತರು

KannadaprabhaNewsNetwork |  
Published : Apr 13, 2025, 02:04 AM IST
54454 | Kannada Prabha

ಸಾರಾಂಶ

ಶುಕ್ರವಾರ ರಾತ್ರಿಯೇ 50ರಿಂದ 70 ಸಾವಿರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಹುಲಿಗೆಮ್ಮ ದೇವಸ್ಥಾನದ ಮುಂದುಗಡೆ ಇರುವ ಶೆಲ್ಟರ್‌ನಲ್ಲಿ ತಂಗಿದ್ದರು. ಶನಿವಾರ ಬೆಳಗಿನ ಜಾವ ಬ್ರಾಹ್ಮಿ ಮೂಹೂರ್ತದಲ್ಲಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ಅಮ್ಮನ ದರ್ಶನ ಪಡೆಯಲು ಆರಂಭಿಸಿದರು.

ಮುನಿರಾಬಾದ್ದವನದ ಹುಣ್ಣಿಮೆ ಪ್ರಯುಕ್ತ ಶನಿವಾರ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗಿಗೆ 3.5 ಲಕ್ಷ ಭಕ್ತರು ಆಗಮಿಸಿ ಶ್ರೀಹುಲಿಗಮ್ಮ ದೇವಿ ದರ್ಶನ ಪಡೆದರು.

ಶುಕ್ರವಾರ ರಾತ್ರಿಯೇ 50ರಿಂದ 70 ಸಾವಿರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಹುಲಿಗೆಮ್ಮ ದೇವಸ್ಥಾನದ ಮುಂದುಗಡೆ ಇರುವ ಶೆಲ್ಟರ್‌ನಲ್ಲಿ ತಂಗಿದ್ದರು. ಶನಿವಾರ ಬೆಳಗಿನ ಜಾವ ಬ್ರಾಹ್ಮಿ ಮೂಹೂರ್ತದಲ್ಲಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ಅಮ್ಮನ ದರ್ಶನ ಪಡೆಯಲು ಆರಂಭಿಸಿದರು. ಬೆಳಗ್ಗೆ 10ಕ್ಕೆ 1 ಲಕ್ಷ ಭಕ್ತರು ತಾಯಿಯ ದರ್ಶನ ಮಾಡಿದರು. 1 ಗಂಟೆ ಸುಮಾರಿಗೆ 2 ಲಕ್ಷ, ಸಂಜೆ 4ಕ್ಕೆ ದರ್ಶನ ಪಡೆದ ಭಕ್ತರ ಸಂಖ್ಯೆ 3.50 ಲಕ್ಷ ದಾಟಿತು. ಭಕ್ತರ ಸಂಖ್ಯೆ ರಾತ್ರಿ ವೇಳೆಗೆ 4 ಲಕ್ಷ ದಾಟು ಸಾಧ್ಯತೆಗಳಿವೆ ಎಂದು ಪೊಲೀಸ್ ಇಲಾಖೆಯ ಮೂಲಗಳಿಂದ ''''ಕನ್ನಡಪ್ರಭ''''ಕ್ಕೆ ಮಾಹಿತಿ ಲಭಿಸಿದೆ.

ಕೊಪ್ಪಳ, ವಿಜಯನಗರ, ಗದಗ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ದಾವಣಗೆರೆ ಹಾಗೂ ತೆಲಂಗಾಣ, ಮಹಾರಾಷ್ಟ್ರದಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಾಜ್ಯ ರಸ್ತೆ ಸಾರಿಗೆ ನಿಗಮವು ಗಂಗಾವತಿ, ಕೊಪ್ಪಳ ಹಾಗೂ ಹೊಸಪೇಟೆಯಿಂದ ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿತ್ತು. ಇದಲ್ಲದೆ ಅನೇಕ ಭಕ್ತರು ಟ್ರ್ಯಾಕ್ಟರ್, ಟಾಟಾ ಏಸ್‌ನಲ್ಲಿ ಹಾಗೂ ರೈಲಿನಲ್ಲಿ ಆಗಮಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ