ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿದೆಯೆಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ. ವಿಪಕ್ಷದವರು ಇಂತಹದ್ದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು ಎನ್ನುವುದು ನನ್ನ ಅನಿಸಿಕೆಯಾಗಿದೆ. ಹಿಂದು-ಮುಸ್ಲಿಂ ಎಲ್ಲರೂ ಶಾಂತಿ, ಸಾಮರಸ್ಯದಿಂದ ಎಲ್ಲರೂ ಬಾಳಬೇಕು ಎಂಬುದು ನಮ್ಮ ನಿಲುವು ಎಂದು ಹೇಳಿದರು.
ಪ್ರತಿಭಟನೆಯೊಂದರಲ್ಲಿ ಪ್ರಚೋದನಾತ್ಮಕ ಭಾಷಣದಿಂದ ಆರಂಭವಾಗ ಗಲಾಟೆ ಇದು. 1992ರ ಹಿಂದು-ಮುಸ್ಲಿಂ ಗಲಾಟೆ ನಂತರ ಯಾವುದೇ ಗಲಭೆ, ಗದ್ದಲ ಆಗಿಲ್ಲ. ಅಲ್ಲಿಂದ ಇಲ್ಲಿವರೆಗೂ ನಾವು ಶಾಂತಿಯುತವಾಗಿಯೇ ಇದ್ದೆವು. ಒಂದು ಭಾಷಣದಿಂದ ಮತ್ತು ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದರಿಂದ ಇಷ್ಟೆಲ್ಲಾ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಊರಿನ ಶಾಂತಿ, ನೆಮ್ಮದಿ ಹಾಳು ಮಾಡುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರ ಜೊತೆಗೆ ಮಾತನಾಡಿದ್ದೇವೆ.
ಬಂಧಿತರೆಲ್ಲರ ವಿಚಾರಣೆಯಾಗಿ, ಘಟನೆಯಲ್ಲಿ ಭಾಗಿಯಾದವರ ಮೇಲೆ ಮುಂದಿನ ಕಾನೂನು ಕ್ರಮ ತಗೆದುಕೊಳ್ಳಲಾಗುತ್ತದೆ.
ದಾವಣಗೆರೆಯಲ್ಲಿ ಉಳಿದ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತವೆ. ಎಲ್ಲರಿಗೂ ನಮ್ಮ ಬೆಂಬಲವಿದ್ದು, ಹಿಂದು, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳು ಭ್ರಾತೃತ್ವದಿಂದ ಇರಬೇಕು ಎಂಬುದು ನಮ್ಮ ಉದ್ದೇಶ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.