- ಶಾಮನೂರು-ಮಲ್ಲಿಕಾರ್ಜುನ್ ಒತ್ತಾಸೆಯಂತೆ ವ್ಯವಸ್ಥಿತ ಕ್ರಮ: ಸಂಸದೆ ಹೇಳಿಕೆ
- ಪಾಲಿಕೆ ಹಿಂದಿನ ಕೆಂಪು ಕಟ್ಟಡಕ್ಕೆ ಮೇಯರ್ ಜೊತೆ ಸ್ಥಳ ಪರಿಶೀಲಿಸಿದ ಸಂಸದೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಬೆಂಗಳೂರು, ಬೆಳಗಾವಿ ಪ್ರೆಸ್ ಕ್ಲಬ್‌ಗಳಿಗಿಂತಲೂ ಅತ್ಯುತ್ತಮ ಮಾದರಿಯಲ್ಲಿ ದಾವಣಗೆರೆಯಲ್ಲಿ ಪ್ರೆಸ್ ಕ್ಲಬ್ ಆಗಬೇಕೆಂಬ ಉದ್ದೇಶ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ ಅವರಿಗೆ ಇದೆ. ಆದಷ್ಟು ಬೇಗನೆ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ವರದಿಗಾರರ ಕೂಟ 2007ರಿಂದ ಆರಂಭವಾಗಿದ್ದು, ಆಗಿನಿಂದಲೂ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಸೂಚನೆಯಂತೆ 2006ರಲ್ಲೇ ಪ್ರೆಸ್ ಮೀಟ್ ನಡೆಸಲು ಅನುವಾಗುವಂತೆ ಆಗಿನ ನಗರಸಭೆ ಅಧ್ಯಕ್ಷರಿದ್ದ ಡಿ.ಬಸವರಾಜ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದ್ದರು. ಆದರೆ, ಅದಕ್ಕೆ ಈಗ ಕಾಲ ಕೂಡಿ ಬಂದಂತಿದೆ ಎಂದರು.
ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, , ಸಚಿವರು, ಸಂಸದರ ಇಚ್ಛಾಶಕ್ತಿ, ಬದ್ಧತೆಯಿಂದ ಜ.26ರಂದು ಗಣರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಜಾಗ ಗುರುತಿಸುವಂತೆ ಸಚಿವರು ಹೇಳಿದ್ದರು. ಆಗ ನಾವು ಕೆಂಪು ಕಟ್ಟಡ ವಿಚಾರ ಪ್ರಸ್ತಾಪಿಸಿದೆವು. ವರದಿಗಾರರ ಕೂಟವು ಸಮ್ಮತಿಸಿದ್ದು, ಸಚಿವರು, ಸಂಸದರ ಮಾರ್ಗದರ್ಶನದಲ್ಲಿ ಶೀಘ್ರವೇ ಕೂಟಕ್ಕೆ ಅನುಕೂಲ ಮಾಡಿಕೊಡಲಿದ್ದೇವೆ ಎಂದರು.
ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಖಜಾಂಚಿ ಈ.ಪವನ್ ಕುಮಾರ, ಪಿಆರ್‌ಓ ಪಿ.ಎಸ್.ಲೋಕೇಶ, ಉಪಾಧ್ಯಕ್ಷರಾದ ಎ.ಎಲ್.ತಾರಾನಾಥ, ಕೆ.ಚಂದ್ರಣ್ಣ, ಸದಾನಂದ ಹೆಗಡೆ, ರಮೇಶ ಜಹಗೀರದಾರ, ನಟರಾಜ, ರಾಮಪ್ರಸಾದ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ, ಮೀನಾಕ್ಷಿ ಜಗದೀಶ್, ಸುಧಾ ಇಟ್ಟಿಗುಡಿ ಮಂಜುನಾಥ, ಸದಸ್ಯರು ಇತರರು ಇದ್ದರು.
ಕೋಟ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಪತ್ರಕರ್ತರ ಹಿತಕಾಯಲು ಸದಾ ಮುಂದಿದ್ದಾರೆ. ವರದಿಗಾರರ ಕೂಟ ಇನ್ನೂ ಮಾದರಿಯಾಗಿ ಬೆಳೆಯಲಿ. ನಾವೆಲ್ಲಾ ಪಾಲಿಕೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಸಹ ಇದನ್ನೇ ಆಶಿಸುತ್ತೇವೆ. ಪ್ರೆಸ್ ಕ್ಲಬ್‌ಗೆಂದು ಗುರುತಿಸಿದ್ದ ಕೆಂಪು ಕಟ್ಟಡದಲ್ಲಿ ಶೀಘ್ರವೇ ಫಲಕ ಅಳವಡಿಸಿ, ಕೂಟದ ಚಟುವಟಿಕೆ ಆರಂಭಿಸಲು ವ್ಯವಸ್ಥೆ ಮಾಡಿಕೊಡಲಾಗುವುದು. ಸಚಿವರು ದಾವಣಗೆರೆಗೆ ಮರಳುತ್ತಿದ್ದಂತೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು
- - - -28ಕೆಡಿವಿಜಿ1, 2, 3, 4: