ದಾವಣಗೆರೆ ಎಸ್ ಐ ತುಮಕೂರಿನಲ್ಲಿ ಆತ್ಮಹತ್ಯೆ

KannadaprabhaNewsNetwork |  
Published : Jul 06, 2025, 11:48 PM ISTUpdated : Jul 07, 2025, 01:56 PM IST
dead body

ಸಾರಾಂಶ

ನಿವೃತ್ತಿ ಅಂಚಿನಲ್ಲಿದ್ದ ಸಬ್‌ ಇನ್ಸ್ ಪೆಕ್ಟರೊಬ್ಬರು ತುಮಕೂರಿನ ದ್ವಾರಕ ಲಾಡ್ಜ್‌ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗರಾಜು(58), ಆರೋಗ್ಯ ಸಮಸ್ಯೆಯಿಂದ ತೀವ್ರವಾಗಿ ಬಳಲಿ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.

 ತುಮಕೂರು :  ನಿವೃತ್ತಿ ಅಂಚಿನಲ್ಲಿದ್ದ ಸಬ್‌ ಇನ್ಸ್ ಪೆಕ್ಟರೊಬ್ಬರು ತುಮಕೂರಿನ ದ್ವಾರಕ ಲಾಡ್ಜ್‌ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗರಾಜು(58), ಆರೋಗ್ಯ ಸಮಸ್ಯೆಯಿಂದ ತೀವ್ರವಾಗಿ ಬಳಲಿ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.

ಮೇಲ್ನೋಟಕ್ಕೆ ಆತ್ಮಹತ್ಯೆಗೆ ಇದೇ ಕಾರಣ ಎನ್ನಲಾಗುತ್ತಿದೆ. ಎರಡು ಪುಟಗಳ ಡೆತ್‌ ನೋಟ್‌ ಸಿಕ್ಕಿದು ತುಮಕೂರು ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಿವೃತ್ತಿ ಜೀವನ ಅನುಭವಿಸಬೇಕಾಗಿದ್ದ ನಾಗರಾಜು ಸಾವು ಇಡೀ ಕುಟುಂಬಕ್ಕೆ ಆಘಾತ ತಂದೊಡ್ದಿದೆ.

ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು, ಜುಲೈ 1ರಂದು ತುಮಕೂರು ನಗರದದಲ್ಲಿರುವ ದ್ವಾರಕಾ ಹೋಟೆಲ್​ ಲಾಡ್ಜ್ ನಲ್ಲಿ ನಾಲ್ಕನೇ ಮಹಡಿಯಲ್ಲಿರುವ 43ನೇ ನಂಬರ್‌ ರೂಮ್​ ಬಾಡಿಗೆ ಪಡೆದುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆ ಸಂದರ್ಭದಲ್ಲಿ ಏಕಾಂಗಿಯಾಗಿ ಸಿವಿಲ್‌ ಡ್ರೆಸ್‌ ನಲ್ಲಿ ಬಂದಿದ್ದ ನಾಗರಾಜು, ವೈಯಕ್ತಿಕ ಕೆಲಸದ ಮೇಲೆ ಬಂದಿರುವುದಾಗಿ ಬುಕ್ಕಿಂಗ್‌ ನಲ್ಲಿ ನಮೂದಿಸಿದ್ದಾರೆ. ಅಲ್ಲದೆ ಮೊದಲು ಆಧಾರ್‌ ನಂಬರ್‌ ಬರೆದು ನಂತರ ಆನಂತರ ಕಾಣದ್ದಂತೆ ಅಳಿಸಿ ಹಾಕಿದ್ದಾರೆ. ಆಧಾರ ನಂಬರ್‌ ಜಾಗದಲ್ಲಿ ಪಿಎಸೈ ದಾವಣಗೆರೆ ಅಂತ ಬರೆದಿದ್ದಾರೆ, ಇನ್ನು ಖಾಯಂ ವಿಳಾಸದಲ್ಲಿ # 4ನಿಟ್ಟುವಳ್ಳಿ ಪೊಲೀಸ್‌ ಕ್ವಾಟ್ರಸ್‌ ಅಂತ ಬರೆದಿದ್ದಾರೆ. ಅಂದು ಬೆಳಗ್ಗೆ ರೂಮಿಗೆ ಹೋದ ನಾಗರಾಜು 5 ದಿನಗಳ ಕಾಲ ಯಾರ ಕಣ್ಣಿಗೂ ಕಾಣಿಸಿಲ್ಲ, ಪೊಲೀಸ್‌ ಆಗಿರುವುದರಿಂದ ಹೋಟೆಲ್‌ ನವರು ಹೆಚ್ಚಿನ ತಲೆ ಕೆಡಿಸಿಕೊಂಡಿಲ್ಲ, ಯಾವುದೋ ಕೆಲಸದ ಮೇಲೆ ಬಂದಿರಬಹುದು ಹೊರಗೆ ಹೋಗಿರಬಹುದು ಅಂತ ಸುಮ್ಮನಾಗಿದ್ದಾರೆ.

ಆದರೆ ಭಾನುವಾರ ಬೆಳಗ್ಗೆ ರೂಮ್‌ ನಿಂದ ಕೆಟ್ಟವಾಸನೆ ಬಂದಿದೆ. ಅನುಮಾನಗೊಂಡ ಲಾಡ್ಜ್‌ ಸಿಬ್ಬಂದಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ತೆಗೆದು ನೋಡಿದಾಗ ರೂಮ್‌ ನಲ್ಲಿದ್ದ ಫ್ಯಾನ್​ ಗೆ ನಾಗರಾಜು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ತುಮಕೂರು ನಗರ ಠಾಣೆ ಪೊಲೀಸರಿಗೆ ಲಾಡ್ಜ್‌ ಮಾಲೀಕರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಶವಗಾರಕ್ಕೆ ಸಾಗಿಸಿದ್ದಾರೆ.

ಗಂಡನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಬಗ್ಗೆ ಮೃತ ಪಿಎಸ್​​ ಐ ನಾಗರಾಜಪ್ಪ ಪತ್ನಿ ಪತ್ನಿ ಲಲಿತಮ್ಮ ಪ್ರತಿಕ್ರಿಯಿಸಿ, ಇನ್ನೊಂದು ವರ್ಷಮಾತ್ರ ಸೇವೆ ಬಾಕಿ ಇತ್ತು. ಆರೋಗ್ಯ ಸಮಸ್ಯೆ ಕಾಡುತ್ತಿತ್ತು.‌ ಶುಗರ್ ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜುಲೈ ಒಂದರಂದ ಮನೆಯಿಂದ ಹೋಗಿದ್ದರು. ಮನೆ ಬಿಟ್ಟು ಹೋದ ಬಳಿಕ ಮೊಬೈಲ್ ಆಫ್​ ಮಾಡಿದ್ದರು. ಇದರಿಂದ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ ‌ನಮಗೆ ವಿಚಾರ ಗೊತ್ತಾಯಿತು ಎಂದರು. ಕಳೆದ ವರ್ಷ ಮಗಳ ಮದುವೆ ಆಗಿತ್ತು.‌ ಮುಂದಿನ ತಿಂಗಳ ಮಗಳ ಹೆರಿಗೆ ದಿನಾಂಕ ವೈದ್ಯರು ಕೊಟ್ಟಿದ್ದರು. ಇಂತಹ ಪರಿಸ್ಥಿತಿ ಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟ ಕಷ್ಟ ಇರಲಿಲ್ಲ. ಯಾಕೆ ಆತ್ಮಹತ್ಯೆ ‌ಮಾಡಿಕೊಂಡರು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪತ್ನಿ ಕಣ್ಣೀಟ್ಟಿದ್ದಾರೆ.

PREV
Read more Articles on