ದಾವಣಗೆರೆ ಅರ್ಬನ್ ಬ್ಯಾಂಕ್‌: ಬಿರುಸಿನ ಮತದಾನ

KannadaprabhaNewsNetwork |  
Published : Feb 12, 2024, 01:32 AM IST
11ಕೆಡಿವಿಜಿ8, 9, 10-ದಾವಣಗೆರೆಯ ಪ್ರತಿಷ್ಟಿದ ದಿ ದಾವಣಗೆರೆ ಅರ್ಬನ್ ಕೋ-ಆಪ್‌ ಬ್ಯಾಂಕ್‌ ಲಿ.ನ ಚುನಾವಣೆ ವೇಳೆ ಸೇರಿದ್ದ ಸದಸ್ಯರು, ವಿವಿಧ ಗಂಪುಗಳ ಸದಸ್ಯರು, ಅಭ್ಯರ್ಥಿಗಳು. | Kannada Prabha

ಸಾರಾಂಶ

ದಿ ದಾವಣಗೆರೆ ಅರ್ಬನ್ ಬ್ಯಾಂಕ್ ಚುನಾವಣೆಗೆ ಒಟ್ಟು 12,203 ಮತದಾರರಿದ್ದು, ಈ ಪೈಕಿ 5263 ಮತದಾರರು ತಮ್ಮ ಮತ ಚಲಾಯಿಸಿದರು. ಚುನಾವಣೆಗಾಗಿ 10 ಜನರ ಗುಂಪುಗಳ ತಂಡ, ವೈಯಕ್ತಿಕವಾಗಿ ಸ್ಪರ್ಧೆ ಮಾಡಿದವರು, 2-3 ಅಭ್ಯರ್ಥಿಗಳ ಗುಂಪಿನಲ್ಲಿ ಸ್ಪರ್ಧಿಗಳು ಅಂತಿಮ ಕಣದಲ್ಲಿದ್ದು, ಭಾನುವಾರ ಮತ ಚಲಾಯಿಸಿದ 5263 ಮತದಾರರು ಬ್ಯಾಂಕ್‌ಗೆ ನೂತನ ನಿರ್ದೇಶಕರ ಆಯ್ಕೆಗೆ ಅಂತಿಮ ಮುದ್ರೆ ಒತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ದಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗೆ 2024-29ನೇ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಗರದ ಸರ್ಕಾರಿ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಭಾನುವಾರ ಬಿರುಸಿನ ಮತದಾನ ನಡೆಯಿತು.

ದಿ ದಾವಣಗೆರೆ ಅರ್ಬನ್ ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, 15 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಇಬ್ಬರು ಮಹಿಳೆಯರು ಸೇರಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಲ್ಲಿ ಸಾಮಾನ್ಯಕ್ಕೆ ಮೀಸಲಾದ 9 ಸ್ಥಾನಗಳಿಗೆ 12 ಜನರು, ಪ್ರವರ್ಗ ಬಿ ಮೀಸಲು ಕ್ಷೇತ್ರದ 1 ಸ್ಥಾನಕ್ಕೆ 6 ಜನ ಸ್ಪರ್ಧಾ ಕಣದಲ್ಲಿದ್ದು, ಇಡೀ ದಿನ ಡಾ.ಎಂ.ಸಿ.ಮೋದಿ ವೃತ್ತದ, ಮೋತಿ ವೀರಪ್ಪ ಕಾಲೇಜು ಸುತ್ತಮುತ್ತ ಜನಜಾತ್ರೆಯೇ ಸೇರಿತ್ತು.

ದಿ ದಾವಣಗೆರೆ ಅರ್ಬನ್ ಬ್ಯಾಂಕ್ ಚುನಾವಣೆಗೆ ಒಟ್ಟು 12,203 ಮತದಾರರಿದ್ದು, ಈ ಪೈಕಿ 5263 ಮತದಾರರು ತಮ್ಮ ಮತ ಚಲಾಯಿಸಿದರು. ಚುನಾವಣೆಗಾಗಿ 10 ಜನರ ಗುಂಪುಗಳ ತಂಡ, ವೈಯಕ್ತಿಕವಾಗಿ ಸ್ಪರ್ಧೆ ಮಾಡಿದವರು, 2-3 ಅಭ್ಯರ್ಥಿಗಳ ಗುಂಪಿನಲ್ಲಿ ಸ್ಪರ್ಧಿಗಳು ಅಂತಿಮ ಕಣದಲ್ಲಿದ್ದು, ಭಾನುವಾರ ಮತ ಚಲಾಯಿಸಿದ 5263 ಮತದಾರರು ಬ್ಯಾಂಕ್‌ಗೆ ನೂತನ ನಿರ್ದೇಶಕರ ಆಯ್ಕೆಗೆ ಅಂತಿಮ ಮುದ್ರೆ ಒತ್ತಿದ್ದಾರೆ.

ದಾವಣಗೆರೆಯ ಪ್ರತಿಷ್ಠಿತ ಉದ್ಯಮಿಗಳು, ವರ್ತಕರು, ವ್ಯಾಪಾರಸ್ಥರು, ಪೆಟ್ರೋಲ್ ಬಂಕ್ ಮಾಲೀಕರು, ತೆರಿಗೆ ಸಲಹೆಗಾರರು, ಅಡುಗೆ ಅನಿಲ ಸಿಲಿಂಡರ್ ವಿತರಕರು, ಸ್ವಯಂ ಉದ್ಯೋಗಿಗಳು ಹೀಗೆ ನಾನಾ ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಪ್ರಮುಖವಾಗಿ ಹಿರಿಯ ಜವಳಿ ವರ್ತಕ ಬಿ.ಸಿ.ಉಮಾಪತಿ, ಹಿರಿಯ ವರ್ತಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ನೇತೃತ್ವದಲ್ಲಿ 10 ಜನ ಸ್ಪರ್ಧಿಸಿದ್ದರು.

ಅಜ್ಜಂಪುರ ಶೆಟ್ರು ವಿಜಯಕುಮಾರ, ಬಿ.ಸಿ.ಉಮಾಪತಿ, ಅಂದನೂರು ಮುಪ್ಪಣ್ಣ, ಕೋಗುಂಡಿ ಬಕ್ಕೇಶಪ್ಪ, ಕಂಚಿಕೇರಿ ಮಹೇಶ, ಟಿ.ಎಸ್.ಜಯರುದ್ರೇಶ, ದೇವರಮನಿ ಶಿವಕುಮಾರ, ಪಲ್ಲಾಗಟ್ಟಿ ಶಿವಾನಂದಪ್ಪ, ಎಚ್.ಎಂ.ರುದ್ರಮುನಿಸ್ವಾಮಿ, ಸೋಗಿ ಮುರುಗೇಶರನ್ನು ಒಳಗೊಂಡಂತೆ ಒಂದು ತಂಡ ಸ್ಪರ್ಧಿಸಿದರೆ, ತೆರಿಗೆ ಸಲಹೆಗಾರರ ಸಂಘದ ಜಿಲ್ಲಾಧ್ಯಕ್ಷ ಜಂಬಗಿ ರಾಧೇಶ, ವರ್ತಕರಾದ ಬೆಳ್ಳೂಡಿ ಮಂಜುನಾಥ, ಗುರುರಾಜ ಅಡಿವೆಪ್ಪ, ಜಯಪ್ರಕಾಶ ಮಾಗಿ, ವಾಣಿ ಪ್ರಭು ಸ್ವಾಮಿ, ಮಹಿಳಾ ಅಭ್ಯರ್ಥಿ ಹಂಪಾಳಿ ನಾಗಮಣಿ ಬಸವರಾಜ, ಅಖಿಲೇಶ ಕೋಗುಂಡಿ ಸೇರಿ ಸ್ಪರ್ಧಿಗಳಿದ್ದರು.

ಒಟ್ಟು ಓರ್ವ ಸದಸ್ಯರು 10 ಜನ ನಿರ್ದೇಶಕರಿಗೆ ಮತ ಚಲಾಯಿಸಲು ಅವಕಾಶ ಇತ್ತು. ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ರಾಜಕೀಯ ಚುನಾವಣೆಗೂ ಕಡಿಮೆ ಇಲ್ಲದಂತೆ ಈ ಸಲದ ಚುನಾವಣೆ ಕಾವೇರಿತ್ತು. ಬೆಳಿಗ್ಗೆ 8.30ರಿಂದ ಆರಂಭವಾದ ಮತದಾನ ಮಧ್ಯಾಹ್ನ 3.30ರವರೆಗೆ ನಡೆಯಿತು. ಮತದಾನದ ನಂತರ ಮತಪೆಟ್ಟಿಗೆಗಳ ಬಿಗಿ ಭದ್ರತೆಯಲ್ಲಿ ಕೊಂಡೊಯ್ಯಲಾಯಿತು. ಫೆ.13ರಂದು ನ್ಯಾಯಾಲಯದ ಆದೇಶದ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

................

ಕೋರ್ಟ್‌ ತೀರ್ಮಾನ ಬಳಿಕ ಮತ ಎಣಿಕೆ ಏಕೆ?

ದಿ ದಾವಣಗೆರೆ ಅರ್ಬನ್ ಬ್ಯಾಂಕ್‌ನಲ್ಲಿ ಈಗಾಗಲೇ ಅರ್ಹತೆ ಹೊಂದಿರುವ ಬ್ಯಾಂಕ್ ನ 6010 ಸದಸ್ಯರ ಜೊತೆಗೆ ರಿಟ್ ಅರ್ಜಿ ಸಂಬಂಧಿಸಿ ಹೈಕೋರ್ಟ್‌ನ 9.2.2024ರ ಆದೇಶದನ್ವಯ ಸುಸ್ತಿದಾರ ಸದಸ್ಯರನ್ನು ಹೊರತುಪಡಿಸಿ, ಅನರ್ಹ ಮತದಾರರ ಪಟ್ಟಿಯಲ್ಲಿರುವ ಬ್ಯಾಂಕ್ ನ 6193 ಸದಸ್ಯರಿಗೆ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾನ ಮಾಡಲು ಷರತ್ತುಗೊಳಪಟ್ಟು, ಅವಕಾಶ ಕಲ್ಪಿಸಿ, ಆದೇಶ ಹೊರಡಿಸಿತ್ತು. ಫೆ.13ರಂದು ನ್ಯಾಯಾಲಯದ ಮುಂದಿನ ಆದೇಶದ ನಂತರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.15 ಸ್ಥಾನಗಳಲ್ಲಿ ಐವರು ಅವಿರೋಧ ಆಯ್ಕೆ

ದಿ ದಾವಣಗೆರೆ ಅರ್ಬನ್ ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, 15 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಇಬ್ಬರು ಮಹಿಳೆಯರು ಸೇರಿ ಐವರು ಅವಿರೋಧ ಆಯ್ಕೆಯಾಗಿದ್ದರು. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಎಂ.ಚಂದ್ರಶೇಖರ, ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಇ.ಎಂ.ಮಂಜುನಾಥ ಏಕಬೋಟೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ವಿ.ವಿಕ್ರಮ್‌, ಮಹಿಳಾ ಮೀಸಲು ಕ್ಷೇತ್ರದಿಂದ ಸುರೇಖಾ ಎಂ.ಚಿಗಟೇರಿ ಹಾಗೂ ಅರ್ಚನಾ ಡಾ.ರುದ್ರಮುನಿ ಅಂದನೂರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ