ಜನರ ಆಸ್ತಿ ವಕ್ಫ್‌ದೆಂದು ಬಿಂಬಿಸಿ ಹಗಲು ದರೋಡೆ: ಎಎಚ್‌ಎಸ್‌ ಕಿಡಿ

KannadaprabhaNewsNetwork |  
Published : Nov 11, 2024, 01:01 AM IST
 10ಕೆಡಿವಿಜಿ7, 8-ದಾವಣಗೆರೆ ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ. | Kannada Prabha

ಸಾರಾಂಶ

ತಲೆತಲಮಾರುಗಳಿಂದ ಇರುವ ಜಮೀನು, ನಿವೇಶನ, ಮನೆಗಳನ್ನು ಹಗಲು ದರೋಡೆ ಮಾಡುವಂತೆ ಇಡೀ ದೇಶದಲ್ಲೇ ವ್ಯವಸ್ಥಿತವಾಗಿ ವಕ್ಫ್ ಆಸ್ತಿ ಎಂಬುದಾಗಿ ದಾಖಲಿಸಿ, ಜನರಲ್ಲಿ ಆತಂಕಕ್ಕೆ ನೂಕಲಾಗುತ್ತಿದೆ. ರಾಜ್ಯ ಸರ್ಕಾರ, ವಕ್ಫ್ ಮಂಡಳಿ, ಕಂದಾಯ ಇಲಾಖೆಗಳ ಇಂತಹ ಕ್ರಮ ಖಂಡನೀಯ ಎಂದು ಬಿಜೆಪಿ ಹಿರಿಯ ನಾಯಕ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಹೇಳಿದ್ದಾರೆ.

- ಇಡೀ ದಾವಣಗೆರೆ ವಕ್ಫ್‌ ಖಬರಸ್ಥಾನ ಅಂತಾ ಘೋಷಿಸಲಿ ಎಂದು ವ್ಯಂಗ್ಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಲೆತಲಮಾರುಗಳಿಂದ ಇರುವ ಜಮೀನು, ನಿವೇಶನ, ಮನೆಗಳನ್ನು ಹಗಲು ದರೋಡೆ ಮಾಡುವಂತೆ ಇಡೀ ದೇಶದಲ್ಲೇ ವ್ಯವಸ್ಥಿತವಾಗಿ ವಕ್ಫ್ ಆಸ್ತಿ ಎಂಬುದಾಗಿ ದಾಖಲಿಸಿ, ಜನರಲ್ಲಿ ಆತಂಕಕ್ಕೆ ನೂಕಲಾಗುತ್ತಿದೆ. ರಾಜ್ಯ ಸರ್ಕಾರ, ವಕ್ಫ್ ಮಂಡಳಿ, ಕಂದಾಯ ಇಲಾಖೆಗಳ ಇಂತಹ ಕ್ರಮ ಖಂಡನೀಯ ಎಂದು ಬಿಜೆಪಿ ಹಿರಿಯ ನಾಯಕ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಹೇಳಿದ್ದಾರೆ.

ವಕ್ಫ್ ಆಸ್ತಿಯೆಂದು ನಗರದ ಪ್ರತಿಷ್ಠಿತ ಪಿ.ಜೆ. ಬಡಾವಣೆಯ ರಿ.ಸ.ನಂ. 53ರಲ್ಲಿ 4.13 ಎಕರೆಯನ್ನು 2015ರ ನ್ಯಾಯಾಲಯ ಆದೇಶದಂತೆ ವಕ್ಫ್ ಆಸ್ತಿ ಎಂಬುದಾಗಿ ಎಂಆರ್ ನಂಬರ್ ಅದಲು ಬದಲು ಮಾಡಿ, ಮುಟೇಷನ್ ರಿಜಿಸ್ಟರ್ ಆಗಿರುವುದಾಗಿ ದಾಖಲಿಸಿದ್ದಾರೆ. ಪಿ.ಜೆ. ಬಡಾವಣೆಯ ನಿವಾಸಿಗಳು, ಆಸ್ತಿಗಳ ಮಾಲೀಕರು, ಅಕ್ಕ ಮಹಾದೇವಿ ರಸ್ತೆ ವ್ಯಾಪಾರಸ್ಥರಿಗೆ ಈಗ ತೀವ್ರ ಆಘಾತವಾಗಿದೆ ಎಂದಿದ್ದಾರೆ.

9 ವರ್ಷಗಳ ಹಿಂದೆಯೇ ಹೀಗೆ ಜನರ ಆಸ್ತಿ ಬದಲಾವಣೆ ಮಾಡಲಾಗಿದೆ. ಪಾಲಿಕೆಗೆ ತಮ್ಮ ಆಸ್ತಿಗೆ ಪ್ರತಿ ವರ್ಷ ಕಂದಾಯ ಕಟ್ಟುತ್ತಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ. ರಿಜಿಸ್ಟರ್‌ನಲ್ಲಿ ವಕ್ಫ್ ಆಸ್ತಿಯೆಂದು ದಾಖಲಿಸಿದ್ದು, ಈ ಜಾಗ ಮಾರಲು ಆಗಲ್ಲ. ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ. ಮಧ್ಯ ಪ್ರದೇಶದ ಹೈಕೋರ್ಟ್‌ನಲ್ಲಿ ಅಲ್ಲಿನ ವಕ್ಫ್ ಸಂಸ್ಥೆ ನೂರಾರು ವರ್ಷ ಹಳೆಯ ಪುರಾತತ್ಮ ಇಲಾಖೆ ಕಟ್ಟಡವನ್ನೇ ತನ್ನ ಆಸ್ತಿ ಎಂದು ಘೋಷಿಸುವಂತೆ ಅರ್ಜಿ ಸಲ್ಲಿಸಿತ್ತು. ಆಗ ಮುಖ್ಯ ನ್ಯಾಯಾಧೀಶರು ಇಡೀ ಭಾರತವನ್ನೇ ವಕ್ಫ್ ಆಸ್ತಿಯೆಂದು ಯಾಕೆ ಘೋಷಿಸಬಾರದೆಂದು ಪ್ರಶ್ನಿಸಿದ್ದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಇದನ್ನೆಲ್ಲಾ ನೋಡಿದಾಗ ನನಗೆ ಕೇವಲ ದಾವಣಗೆರೆ ಬಿಜೆಪಿ ಬಡಾವಣೆಯ ಒಂದು ಭಾಗದ ಬದಲು, ಇಡೀ ದಾವಣಗೆರೆ ಮಹಾ ನಗರವನ್ನೇ ಪೂರ್ಣವಾಗಿ ಖಬರಸ್ಥಾನ ಎಂಬುದಾಗಿ ಘೋಷಿಸುವುದು ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಹಿಂದೂ ಸಮಾಜದ ಎಲ್ಲ ಮಠಾಧೀಶರೂ ಸಮಾಜದ ಉಳಿವಿಗಾಗಿ, ಮಠಗಳ ಪರಂಪರೆ ಉಳಿವಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಸಮಾಜದ ಅಸ್ತಿತ್ವ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ಗೆ ತಿದ್ದುಪಡಿ ಮಸೂದೆ ತರಲಿದೆ. ಇದು ನಮ್ಮ ಅಸ್ತಿತ್ವದ ಅಂತಿಮ ಅವಕಾಶ. ಯೋಚಿಸಿ ನಿರ್ಣಯಿಸಬೇಕಾಗಿದೆ ಎಂದು ಡಾ.ಶಿವಯೋಗಿಸ್ವಾಮಿ ಮನವಿ ಮಾಡಿದ್ದಾರೆ.

- - - -10ಕೆಡಿವಿಜಿ7, 8: ಡಾ. ಎ.ಎಚ್. ಶಿವಯೋಗಿಸ್ವಾಮಿ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ