ಕೊರಟಗೆರೆ ರಾಗಿ ಖರೀದಿ ಕೇಂದ್ರಕ್ಕೆ ಡಿಸಿ ಶುಭಕಲ್ಯಾಣ್ ಭೇಟಿ

KannadaprabhaNewsNetwork |  
Published : Feb 27, 2026, 01:30 AM IST
ರಾಗಿ ಖರೀದಿ ಕೇಂದ್ರಕ್ಕೆ ಡಿಸಿ ಶುಭಕಲ್ಯಾಣ್ ದಿಡೀರ್ ಬೇಟಿ | Kannada Prabha

ಸಾರಾಂಶ

ತಾಲೂಕಿನ ಅಕ್ಕಿರಾಂಪುರದ ರಾಗಿ ಖರೀದಿ ಕೇಂದ್ರಕ್ಕೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ವರು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಅಕ್ಕಿರಾಂಪುರದ ರಾಗಿ ಖರೀದಿ ಕೇಂದ್ರಕ್ಕೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ವರು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು.ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ತೂಕದಲ್ಲಿ ವ್ಯತ್ಯಾಸ, ರೈತರಿಗೆ ಮೂಲ ಸೌಕರ್ಯ, ಸೇರಿದಂತೆ ಅಲ್ಲಿನ ವ್ಯವಸ್ಥೆ ಬಗ್ಗೆ ದೂರು ಬಂದ ಹಿನ್ನಲೆ ರೈತರಿಂದ ಮಾಹಿತಿ ಪಡೆದರು. ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಕೊರಟಗೆರೆ ತಾಲೂಕಿನ ರೈತರಿಗೆ ಅನುಕೂಲವಾಗಲಿ ಎಂದು ಕಳೆದ ವರ್ಷದಿಂದ ತಾಲೂಕಿನ ಅಕ್ಕಿರಾಂಪುರ ಎಪಿಎಂಸಿ ಅವರಣದಲ್ಲಿ ರಾಗಿ ಖರೀದಿ ಕೇಂದ್ರವನ್ನ ತೆರೆಯಲಾಯಿತು. ದೂರದ ತಾಲೂಕಿಗೆ ಹೋಗಿ ರೈತರು ತೊಂದರೆ ಅನುಭವಿಸುತ್ತಿದ್ದರು. ಆದರೆ ಇದೆ ತಾಲೂಕಿನಲ್ಲಿ ರೈತರು ತಾವು ಬೆಳೆದಂತಹ ರಾಗಿಯನ್ನ ಇಲ್ಲಿಯೇ ಮಾರಾಟ ಮಾಡಿದರೆ ಖರ್ಚು ಹಾಗೂ ಸಮಯ ಉಳಿಯುತ್ತದೆ ಎಂದು ತಿಳಿಸಿದರು. ಈಗಾಗಲೇ ರಾಜ್ಯ ಸರ್ಕಾರ ರೈತರಿಗೆ ೪೮೮೬ ರೂ ಗಳನ್ನ ನಿಗದಿ ಮಾಡಿದ್ದು, ಅದರಂತೆ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ರೈತರಿಂದ ದೂರು ಬಂದ ಕಾರಣ ಸ್ಥಳಕ್ಕೆ ಭೇಟಿ ನೀಡಲಾಗಿದೆ. ರೈತರಿಗೆ ಯಾವುದೇ ರೀತಿ ಮೋಸ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಇದೆ ವೇಳೆ ತಹಸೀಲ್ದಾರ್ ಮಂಜುನಾಥ್, ಕಸಬಾ ಆರ್‌ಐ ಬಸವರಾಜು, ಅಧಿಕಾರಿಗಳಾದ ಸಲ್ಮಾನ್, ಪವನ್, ನಾಗರಾಜು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ