ಕನ್ನಡಪ್ರಭ ವಾರ್ತೆ ಲೋಕಾಪುರ
ಹೆರಿಗೆಗೆಂದು ಬರುವ ಗರ್ಭಿಣಿಯರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಅನಗತ್ಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಬದಲು ಇಲ್ಲಿಯೆ ಹೆರಿಗೆ ಮಾಡಬೇಕು. ದಾಖಲೆ ಎಲ್ಲವು ಸರಿಯಾಗಿಟ್ಟುಕೊಳ್ಳಬೇಕೆಂದು ಆರೋಗ್ಯ ಕೇಂದ್ರದ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಬರಲ್ಲ. ರಾತ್ರಿ ಹೊತ್ತಿನಲ್ಲಿ ಸಿಬ್ಬಂದಿ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡು ಬರಬಾರದು ಎಂದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿ, ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳು ಬರುತ್ತವೆ. ಪಿಎಚ್‌ಸಿಗೆ ವೈದ್ಯಾಧಿಕಾರಿ ಕೊರತೆ ನೀಗಿಸಿ, ಕೇವಲ ಒಬ್ಬ ಆಯುಷ್ಯ ವೈದ್ಯಾಧಿಕಾರಿಗಳಿಂದ ಆಸ್ಪತ್ರೆ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗಿದೆ. ಪಟ್ಟಣದ ಆಸ್ಪತ್ರೆಯು ಬಹಳ ಜನದಟ್ಟಣೆಯಿಂದ, ಅಪಘಾತಗಳು ನಡೆಯುತ್ತಿವೆ ಒಬ್ಬ ಎಂಬಿಬಿಎಸ್ ವೈದ್ಯರನ್ನು ನೀಡಿ ಎಂದು ಸ್ಥಳೀಯರಾದ ಪ್ರಕಾಶ ಚುಳಕಿ, ಅರುಣ ನರಗುಂದ ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.ಈ ವೇಳೆ ತಹಸೀಲ್ದಾರ್ ಮಹಾದೇವ ಸನ್ನಮುರಿ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಡಾ. ಸುನೀಲ ಬೆನ್ನೂರ, ಡಾ. ವಿನಯ ಕುಲಕರ್ಣಿ, ಆರೋಗ್ಯ ಕೇಂದ್ರ ಸಿಬ್ಬಂದಿ ಎಂ.ಎಲ್.ಮೇಲಿನಮನಿ, ಜೆ.ಪಿ.ಜಲಗೇರಿ, ಎ.ಎಸ್.ಮುದಕವಿ ಇತರರು ಇದ್ದರು.