ಕನ್ನಡಪ್ರಭ ವಾರ್ತೆ ವಿಜಯಪುರ
ಈ ಭಾಗದ 9 ಗ್ರಾಮಗಳಲ್ಲಿ 754 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೊಗರಿ ಹಾಗೂ ಮೆಕ್ಕೆಜೋಳ ಬೆಳೆದಿದ್ದು, ತೋಟಗಾರಿಕೆ ಬೆಳೆ ಈರುಳ್ಳಿಯನ್ನು 59 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಹಾನಿಯಾದ ಬೆಳೆಯ ಪ್ರದೇಶದ ಅಂಕಿ ಅಂಶ ಸಂಗ್ರಹಿಸಿ, ಪರಿಹಾರ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರ ಬಾವಿದೊಡ್ಡಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಕೃಷಿ ಇಲಾಖೆ ಅಧಿಕಾರಿಗಳಾದ ಶರಣಗೌಡ, ಮಂಜುನಾಥ ಜಾನಮಟ್ಟಿ, ಜಯಪ್ರದಾ ದಶವಂತ, ರೈತರಾದ ಸುಭಾಷ ತಳಕೇರಿ, ಶ್ರೀಶೈಲ ಬಾವಿಕಟ್ಟಿ, ಬಾಬು ಶಿರಮಗೊಂಡ, ಓಂಕಾರ ನಾವಿ, ಸಂಗಪ್ಪ ಇಂಡಿ ಸೇರಿದಂತೆ ಬಾಧಿತ ಪ್ರದೇಶದ ರೈತರು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.