ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ವಿಜಯಪುರ ಡಿಸಿಸಿ ಬ್ಯಾಂಕ್ ಮುದ್ದೇಬಿಹಾಳ ಶಾಖೆಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಮಾತನಾಡಿದರು. ಸಹಕಾರ ತತ್ವದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನಮ್ಮ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಈ ಯಶಸ್ಸಿನ ಮೂಲ ಸೆಲೆಗೆ ಗ್ರಾಹಕರು ಕಾರಣ ಎಂದರು.
ರಾಷ್ಟ್ರೀಕೃತ ಬ್ಯಾಂಕಿಂಗ್ ಸೇವೆ, ಯುಪಿಐ, ಮೊಬೈಲ್ ಬ್ಯಾಂಕಿಂಗ್, ಕ್ಯೂಆರ್ ಕೋಡ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್ನೆಟ್, ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಈಗಾಗಲೇ ಪರಿಚಯಿಸಿದೆ. ಸಾರ್ವಜನಿಕ ಸೇವೆಯಲ್ಲಿ ಸುದೀರ್ಘ ಕಾಲ ಗುರುತಿಸಿಕೊಂಡಿರುವ ಎಲ್ಲ ವರ್ಗದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆ ಮಾಡಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ, ಸುಲಭ ಸಾಲ, ಮಧ್ಯಮ ಸಾಲ ಹೀಗೆ ವಿವಿಧ ಸಾಲ ಸೌಲಭ್ಯ ಒದಗಿಸುವ ಮೂಲಕ ಬ್ಯಾಂಕ್ ಮಾದರಿಯಾಗಿದೆ. ಗ್ರಾಹಕರು ಹೆಚ್ಚಿನ ಠೇವಣಿ ಇರಿಸಿಕೊಂಡು ಆಕರ್ಷಕ ಬಡ್ಡಿ ಪಡೆದುಕೊಳ್ಳುವ ಸದಾವಕಾಶವಿದೆ. ಈ ಮೂಲಕ ಬ್ಯಾಂಕ್‌ನ ಏಳಿಗಿಗೆ ಕೈಜೋಡಿಸಬೇಕು ಎಂದರು.ಈ ವೇಳೆ ತಾಲೂಕು ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ಕ್ಷೇತ್ರಾಧಿಕಾರಿಗಳಾದ ಬಿ.ಎಸ್.ಬಡದಾನಿ, ಎನ್.ಸಿ.ಸಾಸನೂರ, ಕೆ.ಎಸ್.ಮಂಗಳೂರ, ಎಸ್.ಎನ್.ಹುಗ್ಗಿ, ಎಸ್.ಎಸ್.ಹೂಗಾರ, ಜಿ.ನ್.ಜಿನಗಾರಿ, ಜಿ.ಎನ್.ದೇಶಮುಖ, ಜಿ.ಎಸ್.ಹಾದಿಮನಿ, ವಿ.ಎಸ್.ಹಾವರಗಿ, ಎನ್.ಬಿ.ಚಲವಾದಿ ಸೇರಿದಂತೆ ಗ್ರಾಹಕರು ಇದ್ದರು.