ಅಕ್ರಮ ಸಕ್ರಮ ಅರ್ಜಿ ತಕ್ಷಣ ವಿಲೇ ಗಡುವು: 26ರಂದು ಹಕ್ಕೊತ್ತಾಯ ಸಭೆಗೆ ನಿರ್ಧಾರ

KannadaprabhaNewsNetwork |  
Published : Jun 13, 2025, 02:05 AM IST
ಅಕ್ರಮಸಕ್ರಮ | Kannada Prabha

ಸಾರಾಂಶ

ಕಳೆದ ಏಳು ವರ್ಷದಿಂದ ಬೆಳ್ತಂಗಡಿಯ ಕೃಷಿಕರಿಗೆ ಅಕ್ರಮ ಸಕ್ರಮ ಭೂ ಮಂಜೂರಾತಿಯ ಪ್ರಕಾರ ಯಾವುದೇ ಹಕ್ಕು ನೀಡದೆ ಸತಾಯಿಸುತ್ತಿದ್ದಾರೆ. ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದರೂ ಸಮರ್ಪಕವಾಗಿ ಸಭೆ ನಡೆಯುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಶ್ರೀಧರ ಗೌಡ ಕೊಕ್ಕಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಆಡಳಿತದ ನಿರ್ಲಕ್ಷ್ಯದಿಂದ ಬೆಳ್ತಂಗಡಿ ತಾಲೂಕಿನಲ್ಲಿ 70 ಸಾವಿರಕ್ಕೂ ಅಧಿಕ ಅಕ್ರಮ ಸಕ್ರಮ ಭೂ ಮಂಜೂರಾತಿ ಅರ್ಜಿದಾರರ ಬದುಕು ಬೀದಿಗೆ ಬಂದಿದೆ. ತಕ್ಷಣವೇ ಅರ್ಜಿ ವಿಲೇವಾರಿಗೆ ಸಂಬಂಧಪಟ್ಟವರು ಕ್ರಮ ವಹಿಸದೆ ಇದ್ದಲ್ಲಿ ಜೂ.26 ರಂದು ಅಸಂಘಟಿತ ಕೃಷಿಕರು ಸ್ವಯಂಪ್ರೇರಿತರಾಗಿ ಹಕ್ಕೊತ್ತಾಯ ಸಭೆ ನಡೆಸಲಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಧರ ಗೌಡ ಕೊಕ್ಕಡ ಎಚ್ಚರಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷದಿಂದ ಬೆಳ್ತಂಗಡಿಯ ಕೃಷಿಕರಿಗೆ ಅಕ್ರಮ ಸಕ್ರಮ ಭೂ ಮಂಜೂರಾತಿಯ ಪ್ರಕಾರ ಯಾವುದೇ ಹಕ್ಕು ನೀಡದೆ ಸತಾಯಿಸುತ್ತಿದ್ದಾರೆ. ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದರೂ ಸಮರ್ಪಕವಾಗಿ ಸಭೆ ನಡೆಯುತ್ತಿಲ್ಲ. ಹೀಗಾಗಿ ಅರ್ಜಿದಾರರೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದಿರುತ್ತೇವೆ ಎಂದರು.ಎಲ್ಲ ಕಡತಗಳನ್ನು ಮುಂದಿನ 6 ತಿಂಗಳ ಒಳಗಾಗಿ ವಿಲೇವಾರಿ ಮಾಡುತ್ತೇವೆ ಎಂದು ಜೂ.17 ರೊಳಗಾಗಿ ತಹಸೀಲ್ದಾರರು ನಮಗೆ ಲಿಖಿತ ರೂಪದಲ್ಲಿ ತಿಳಿಸಬೇಕು. ಇಲ್ಲದೆ ಹೋದಲ್ಲಿ ಜೂ.26 ರಂದು ತಾಲೂಕು ಕಚೇರಿ ಮುಂಭಾಗ ಕೃಷಿಕರ ಮುಖೇನ ಹಕ್ಕೊತ್ತಾಯ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.ಸರಕಾರವು ಭೂ ಮಂಜೂರಾತಿಗಾಗಿ ಸರ್ವೇ ನಡೆಸಲು ಆ್ಯಪ್ ಒಂದನ್ನು ರಚಿಸಿದ್ದು, ಇದು ಕೃಷಿಕರಿಗೆ ಮರಣ ಶಾಸನವಾಗಿದೆ. ಅದರಲ್ಲಿ ಅರ್ಜಿದಾರನು ಅರ್ಜಿ ಸಲ್ಲಿಸುವ ವೇಳೆ ನಮೂದಿಸಿದ ಸರ್ವೇ ನಂಬರ್ ಬಿಟ್ಟು ಬೇರೆ ಸರ್ವೇ ನಂಬರನ್ನು ಅಳತೆ ಮಾಡುವುದಿಲ್ಲ. ಅರ್ಜಿ ಸ್ವೀಕರಿಸಿದ ಅಧಿಕಾರಿಯ ತಪ್ಪಿನಿಂದ ಅಥವಾ ಅರ್ಜಿದಾರ ಕೃಷಿಕನ ಅಜ್ಞಾನದ ಕಾರಣದಿಂದ ಸರ್ವೇ ನಂಬರ್ ತಪ್ಪಾಗಿರಬಹುದು. ಆ ಕಾರಣದಿಂದಲೇ ಅರ್ಜಿ ವಜಾ ಮಾಡುತ್ತಿರುವುದು ಕೃಷಿಕರಿಗೆ ಸಂಕಷ್ಟಕ್ಕೀಡುಮಾಡಿದೆ. ಈ ವಿಚಾರವಾಗಿ ಎಲ್ಲ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರತಿಫಲ ಮಾತ್ರ ಶೂನ್ಯವಾಗಿದೆ ಎಂದರು.ಎಂಡೋ ಪೀಡಿತರ ಅರ್ಜಿಯೂ ಕಡತದಲ್ಲಿ ತಾಲೂಕಿನಲ್ಲಿ ಸುಮಾರು 5000 ಕ್ಕೂ ಅಧಿಕ ಎಂಡೋಪೀಡಿತರ ಅರ್ಜಿಗಳಿವೆ. ತಾಲೂಕು ಕಚೇರಿಯಲ್ಲಿ ಉತ್ತರ ಸಿಗುತ್ತಿಲ್ಲ. ತಾಲೂಕು ಕಚೇರಿ ಯಲ್ಲಿ ಮಧ್ಯವರ್ತಿಗಳನ್ನು ಹೊರತುಪಡಿಸಿ ಅರ್ಜಿದಾರರಿಗೆ ಪ್ರವೇಶನೆ ಇಲ್ಲ ಎಂಬ ಭಾವನೆ ನಮಗೆ ಮೂಡುತ್ತದೆ. ತಾಲೂಕನ್ನು ಪೋಡಿಮುಕ್ತ ತಾಲೂಕಾಗಿ ಘೋಷಿಸುವುದಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದರು.ಜೂ. 17ರ ಳಗಾಗಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ಮಾಡ ಬೇಕು. ಆ್ಯಪ್ ಸಮಸ್ಯೆ ಸರಿಪಡಿಸಲು ಜೂ.17ರ ಬಳಿಕ ಜೂ.25ರ ವರೆಗೆ ಸಚಿವ ಕೃಷ್ಣ ಬೈರೆ ಗೌಡರಿಗೆ ಪತ್ರ ಚಳವಳಿ ನಡೆಸಲಿದ್ದೇವೆ. ಜೂ.26 ರಿಂದ ಅಹರ್ನಿಷಿ ಹೋರಾಟ ಮುಂದುವರಿಯಲಿದೆ ಎಂದರು. ಜಿನ್ನಪ್ಪ ಗೌಡ ನಿಡ್ಡೆ ಆನಂದ ಪಟ್ರಮೆ, ಬಾಲಕೃಷ್ಣ ಕೊಕ್ಕಡ, ಬಾಲಕೃಷ್ಣ ಬಂದಾರು ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌