-ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ ನೇತೃತ್ವದಲ್ಲಿ ಇಒ ಮಾನಪ್ಪ ಕಟ್ಟಿಮನಿ ಅವರಿಗೆ ಮನವಿ
ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನ ಕೆರೂರು ಗ್ರಾಮದ ಜ್ವಲಂತ ಮೂರು ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶಾಸಕರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ, ನಂತರ ತಾಲೂಕು ಪಂಚಾಯಿತಿ ಕಚೇರಿ ಎದುರು ಕೆಲ ಹೊತ್ತು ಧರಣಿ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಡುವು ನೀಡಿದರು.ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ, ಸಾಹಿತಿ ಎಸ್.ಪಿ ಸುಳ್ಳದ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮುಖ್ಯವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾರಿಗಳಿಗೆ ಒತ್ತಾಯಿಸಿದರು.
ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಯನ್ನು ಗ್ರಾಮದ ದಾನಪ್ಪ ಮೂಲಗೆ ಮತ್ತು ರೇವಣಸಿದ್ದ ಸಕ್ಕರಗಿ ಅವರು ರಸ್ತೆಯನ್ನು ಅತಿಕ್ರಮ ಮಾಡಿರುವುದರಿಂದ ಜನರ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಗ್ರಾಪಂ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡೂ ದಿನದಲ್ಲಿ ಅತಿಕ್ರಮಣ ತೆರವು ಮಾಡದೆ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರಿಗೆ ರಸ್ತೆ ಅತಿಕ್ರಮಣ ತಕ್ಷಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗಡುವು ನೀಡಿ ಮನವಿ ಸಲ್ಲಿಸಿದರು.
ಸಾಹಿತಿ ಎಸ್.ಪಿ. ಸುಳ್ಳದವರ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ನ್ಯಾ. ಬಸಣ್ಣ ಸಿಂಗೆ, ಸಿದ್ದಾರೂಢ ಜಿ. ಕೋನಕಾಟೆ, ಸುನೀಲ ಕೋನಕಾಟೆ, ಬಾಬುರಾವ್ ಎಸ್. ಸುಳ್ಳದ್, ಸುರೇಶ್ ಬಿ. ಕೋನಕಾಟೆ, ಭೀಮಶಂಕರ ಎ. ಚೆನ್ನಗುಂಡ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ಬಿ. ಚನಗುಂಡ, ಶಿವಲಿಂಗ ಚನಗುಂಡ, ಶರಣಪ್ಪ ಜಿ. ಸುಳ್ಳದ್, ಸುಭಾಷ ಚನ್ನಗುಂಡ, ಮಲ್ಲಿಕಾರ್ಜುನ ಶಿಂಗೆ, ಸಿದ್ದಾರ್ಥ ಸುಳ್ಳದ್, ನಾಗರಾಜ ಸಿಂಗೆ, ಶ್ರವಣ ಚನಗುಂಡ, ಸಂಜಯ್‍ಕುಮಾರ್ ಬಿ. ಸುಳ್ಳದ್, ಸಂಜುಕುಮಾರ್ ಎಸ್. ಸುಳ್ಳದ ಭಾಗವಹಿಸಿದ್ದರು.
ಚಿತ್ರ ಶೀರ್ಷಿಕೆ 13ಎಎಲ್‍ಡಿ1