ಕನ್ನಡಪ್ರಭ ವಾರ್ತೆ ಕಾಗವಾಡ
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮುನಿಗಳು, ಕಳೆದ ಮೂರು ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಬೇಡಿಕೆಗಳು ಈಡೇರಿಲ್ಲ. ಧಾರ್ಮಿಕ ಪರಂಪರೆ ಮತ್ತು ಸಮಾಜದ ಹಿತಾಸಕ್ತಿ ರಕ್ಷಣೆಯ ವಿಷಯದಲ್ಲಿ ಇನ್ನು ಕಾಯಲು ಸಾಧ್ಯವಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಬೆಳಗಾವಿ ಜಿಲ್ಲೆಯ ಬಸ್ತವಾಡದಲ್ಲಿ ಏರ್ಪಡಿಸಿದ ಜೈನ ಸಮಾವೇಶದಲ್ಲಿ ಅಂದಿನ ಉಪಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಭೆಗೆ ಬಂದು ಆಶ್ವಾಸನೆ ನೀಡಿದ್ದರು. ಆದರೆ ಮುರು ವರ್ಷ ಕಳೆದರೂ ಇನ್ನೂ ಜೈನ ನಿಗಮ ಮಂಡಳಿಯ ಭರವಸೆ ಈಡೇರಿಲ್ಲ. ಆದ್ದರಿಂದ ಸಮಾಜದ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುನಿಗಳು ತಿಳಿಸಿದರು.
ಐದು ಪ್ರಮುಖ ಬೇಡಿಕೆಗಳು:ಸ್ವತಂತ್ರ ಜೈನ ಅಭಿವೃದ್ಧಿ ನಿಗಮವನ್ನು ತಕ್ಷಣವೇ ಸ್ಥಾಪಿಸಬೇಕು. ಸಾಧು-ಸಾಧ್ವಿಯರ ಸುರಕ್ಷತೆ ಮಾಡಬೇಕು. ಊರಿನಿಂದ ಊರಿಗೆ ಕಾಲ್ನಡಿಗೆಯಲ್ಲಿ (ವಿಹಾರ) ಸಂಚರಿಸುವ ಜೈನ ಸಾಧು ಮತ್ತು ಸಾಧ್ವಿಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಧಾರ್ಮಿಕ ಸಂಸ್ಥೆಗಳ ರಕ್ಷಣೆಗೆ ಒತ್ತು ನೀಡಬೇಕು. ಜೈನ ತೀರ್ಥಕ್ಷೇತ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಸಂರಕ್ಷಣೆಗೆ ವಿಶೇಷ ನಿಯಮ/ಯೋಜನೆ ರೂಪಿಸಬೇಕು. ಇದರ ಜೊತೆಗೆ ಉಚಿತ ಸಮ್ಮೇದ ಶಿಖರ್ಜಿ ಯಾತ್ರೆಗೆ ಅವಕಾಶ ಕಲ್ಪಿಸಬೇಕು. ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಶ್ರಾವಕರಿಗೆ ಉಚಿತವಾಗಿ ಶ್ರೀ ಸಮ್ಮೇದ ಶಿಖರ್ಜಿ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳಲು ವ್ಯವಸ್ಥೆ ಮಾಡಬೇಕು. ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. ಅಂದರೆ ಸಾಧು-ಸಾಧ್ವಿಯರ ರಾತ್ರಿ ವಿಶ್ರಾಂತಿಗೆ ಮಾರ್ಗಮಧ್ಯದ ಗ್ರಾಮ/ನಗರಗಳಲ್ಲಿರುವ ಸರ್ಕಾರಿ ಶಾಲೆ ಅಥವಾ ಕಟ್ಟಡಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ, ಅಧಿಕಾರಿಗಳು ಹಾಗೂ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಬೇಕು. ನಂತರ ಮುಂದಿನ 10 ದಿನಗಳೊಳಗೆ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ನ.10 ರಂದು ವರೂರದಿಂದ ಪಾದಯಾತ್ರೆ ಆರಂಭ ಮಾಡಲಾಗುತ್ತದೆ. ಒಂದು ವೇಳೆ ರಾಜ್ಯ ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ನವೆಂಬರ್ 10ರಂದು ವರೂರಿನಿಂದ ಚಿಕ್ಕೋಡಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಮುನಿಗಳು ಎಚ್ಚರಿಕೆ ನೀಡಿದ್ದಾರೆ.
ಸಲ್ಲೇಖನ ವ್ರತ, ದೇಹತ್ಯಾಗ: