ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಬೆಲಗೂರು ಗ್ರಾಮದಲ್ಲಿ ನಡೆದ ಲಿಂಗೈಕ್ಯ ಎಚ್.ಆರ್.ಬಸಪ್ಪನವರ ಕೈಲಾಸ ಶಿವಗಣರಾಧನೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾವು ದೇಹಕ್ಕೆ ಹೊರತು ದೇಹದಿಂದಾದ ಸಹಕಾರ ಸಹಬಾಳ್ವೆ ಸಾಧನೆಗಳಿಗಲ್ಲ, ಮನುಷ್ಯನಾದವನು ಮಾನವ ಬಂಧುತ್ವವನ್ನು ಮಾನವೀಯ ತತ್ವಗಳನ್ನು ಮನನ ಮಾಡಿಕೊಂಡು ಅನುಸರಿಸುವ ಮೂಲಕ ಮತ್ತೊಬ್ಬರಿಗೆ ಅನುಕರಣೆಯಾಗಬೇಕೇ ವಿನಾ ಹಾಡಿಕೊಳ್ಳುವಂತಾಗಬಾರದು. ಸ್ವರ್ಗವನ್ನು ಯಾರು ನೋಡಿಲ್ಲ ಹಾಗಾಗಿ ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ವವನ್ನು ಅರಿತು ಬದುಕಬೇಕು ಮತ್ತೊಬ್ಬರು ಬದುಕಲು ಪ್ರೇರೇಪಿಸಬೇಕು ಎಂದರು.ಕಲಿಯುಗದಲ್ಲಿ ಮನುಷ್ಯ ತಾನು ಸಂಪಾದಿಸಿದ ಹಣ ಆಸ್ತಿಗಳ ಮೇಲೆ ವ್ಯಾಮೋಹ ಜಾಸ್ತಿಯಾಗಿ ಮನುಷ್ಯತ್ವವನ್ನು ಮರೆತು ತಮ್ಮ ಹಿರಿಯರನ್ನು ಹಾರೈಕೆ ಮಾಡದೇ ವೃದ್ಧಾಶ್ರಮಕ್ಕೆ ಬಿಡುತ್ತಿರುವುದು ಮನುಷ್ಯನ ಸ್ವಾರ್ಥದ ಪ್ರತೀಕವಾಗಿದೆ. ಹಿರಿಯರು ಇರುವಲ್ಲಿ ಅನುಭವವಿದೆ ಜೀವನ ಉತ್ಸಾಹ ಇದೆ ಜ್ಞಾನದ ಬಂಡಾರವೇ ಸಿಗಲು ಸಾಧ್ಯವಿದೆ, ಮಕ್ಕಳನ್ನು ಹಿರಿಯರೊಂದಿಗೆ ಬೆರೆಯಲು ಬಿಟ್ಟಾಗ ಅವರು ಹೇಳುವ ಅನುಭವದ ಮಾತುಗಳು ಗಾದೆಗಳು. ಒಗಟುಗಳು. ಕಥೆಗಳು. ಯುವ ಮನಸುಗಳಿಗೆ ಪ್ರೇರಣದಾಯಕವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಂಜುನಾಥ್ ಅಲಗಟ್ಟ ಹಾಗೂ ಸುತ್ತಮುತ್ತ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.