ಬೆಳಗಾವಿ : 31 ಕೃಷ್ಣಮೃಗ ಸಾವಿಗೆ ರಕ್ತಸ್ರಾವದ ಈ ಕಾಯಿಲೆ ಕಾರಣ

KannadaprabhaNewsNetwork |  
Published : Nov 19, 2025, 01:00 AM ISTUpdated : Nov 19, 2025, 08:47 AM IST
Belagavi

ಸಾರಾಂಶ

ಇಲ್ಲಿನ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ರಕ್ತಸ್ರಾವದ ಸೆಪ್ಟಿಸೆಮಿಯಾ ಕಾರಣವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿರಿಯ ವೈರಾಲಜಿಸ್ಟ್ (ವೈರಾಣುತಜ್ಞ) ಡಾ। ಚಂದ್ರಶೇಖರ್ ಹೇಳಿದ್ದಾರೆ.

 ಬೆಳಗಾವಿ :  ಇಲ್ಲಿನ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ರಕ್ತಸ್ರಾವದ ಸೆಪ್ಟಿಸೆಮಿಯಾ ಕಾರಣವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿರಿಯ ವೈರಾಲಜಿಸ್ಟ್ (ವೈರಾಣುತಜ್ಞ) ಡಾ। ಚಂದ್ರಶೇಖರ್ ಹೇಳಿದ್ದಾರೆ.

ರಕ್ತಸ್ರಾವದ ಸೆಪ್ಟಿಸೆಮಿಯಾ

ನಗರಕ್ಕೆ ಮಂಗಳವಾರ ಧಾವಿಸಿದ ಅವರು ಪರಿಶೀಲನೆ ನಡೆಸಿದ್ದು, ಮರಣೋತ್ತರ ವರದಿಗಳು ಕೃಷ್ಣಮೃಗಗಳ ಸಾವಿಗೆ ರಕ್ತಸ್ರಾವದ ಸೆಪ್ಟಿಸೆಮಿಯಾ (ಎಚ್ಎಸ್‌) ಕಾರಣವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ರಕ್ತಸ್ರಾವದ ಗಾಯಗಳು ಇರುವುದು ಕಂಡು ಬಂದಿದೆ. ಇದು ಬ್ಯಾಕ್ಟೀರಿಯಾದ ಸೋಂಕನ್ನು ಸೂಚಿಸುತ್ತದೆ. ಕೃಷ್ಣಮೃಗಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಹಠಾತ್ ತಾಪಮಾನ ಕುಸಿತ ಅಥವಾ ಒತ್ತಡವು ಅವುಗಳ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಮರಣಕ್ಕೂ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಸ್ತುತದ ಪರಿಸ್ಥಿತಿಗೆ ಕಾರಣವೆಂದೂ ಅವರು ಹೇಳಿದರು.

226 ಪ್ರಾಣಿಗಳನ್ನು ಉದ್ಯಾನವನದಲ್ಲಿ ಇರಿಸಲಾಗಿದೆ

ಏತನ್ಮಧ್ಯೆ ಮೃಗಾಲದಲ್ಲಿ ಹುಲಿಗಳು, ಸಿಂಹಗಳು, ಚಿರತೆಗಳು, ಕತ್ತೆಕಿರುಬಗಳು, ಕರಡಿಗಳು, ಮೊಸಳೆಗಳು ಮತ್ತು ಜಿಂಕೆ ಪ್ರಭೇದಗಳು ಸೇರಿದಂತೆ 226 ಪ್ರಾಣಿಗಳನ್ನು ಉದ್ಯಾನವನದಲ್ಲಿ ಇರಿಸಲಾಗಿದೆ. ಕಟ್ಟುನಿಟ್ಟಾದ ತುರ್ತು ಪ್ರೋಟೋಕಾಲ್‌ಗಳನ್ನು ತಕ್ಷಣ ಜಾರಿಗೊಳಿಸದಿದ್ದರೆ ಸಾಂಕ್ರಾಮಿಕ ರೋಗ ಹರಡಬಹುದು ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ