ಕನ್ನಡಪ್ರಭ ವಾರ್ತೆ ಆಳಂದ
ಇದಲ್ಲದೆ ಚಲಗೇರಾ, ಝಳಕಿ ದರ್ಗಾಶಿರೂರ ಗ್ರಾಮದಲ್ಲಿನ ಕರುಗಳನ್ನು ಅಪರೀಚಿತ ಪ್ರಾಣಿ ತಿಂದುಹಾಕಿದ ಬಗ್ಗೆ ವರದಿಯಾಗಿದೆ.
ಮದಗುಣಿ ಗ್ರಾಮದ ಈರಣ್ಣಾ ರಾಚಪ್ಪ ಸಣ್ಣಮನಿ ಆಕಳು ಕುರು, ಪರಮೇಶ್ವರ ಶಿವಲಿಂಗಪ್ಪ ಮಡವಾಳ ಎಮ್ಮೆ ಕರು, ಸಂಜುಕುಮಾರ ಬೋಜರಾಜ ಸಣ್ಣಮನಿ ಎಮ್ಮೆ ಕರು, ವಿಶ್ವನಾಥ ಶಿವಶರಣಪ್ಪ ವಾಲಿ ಅವರಿಗೆ ಸೇರಿದ ಎಮ್ಮೆ ಕರು, ರಮೇಶ ಆಳಂದ ಆಕಳು ಕರು, ಸುರೇಶ ಕಲ್ಯಾಣಿ ಸಣ್ಣಮನಿ ಆಕಳು ಕರು ಸೇರಿ ಆಕಳು ಮತ್ತು ಎಮ್ಮೆ ಆರು ಕರುಗಳನ್ನು ರಾತ್ರಿ ಹೊತ್ತಿನಲ್ಲಿ ಸಾವನ್ನಪ್ಪಿವೆ. ಅವುಗಳ ದೇಹವೂ ಸಿಗದಂತೆ ತಿಂದು ಹಾಕಲಾಗಿದೆ ಎಂದು ರೈತರು ಹೇಳಿದ್ದಾರೆ.ನಾಯಿ ಮಾದರಿಯಲ್ಲಿ ಅಥವಾ ತೋಳದ ಮಾದರಿಯಲ್ಲಿ ತಿಂದುಹಾಕುತ್ತಿರುವ ಪ್ರಾಣಿ ಇದೇ ಎಂದು ನೆರೆ ಹೊರೆಯ ರೈತರು ಶಂಕೆವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾದನಹಿಪ್ಪರಗಾ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರು ಈ ಕುರಿತು ದಾಳಿ ಮಾಡುತ್ತಿರುವ ಶಂಕಿತ ಕಾಡು ಪ್ರಾಣಿಗಳ ಮಾಹಿತಿ ಗೊತ್ತಾದರೆ ನೀಡುವಂತೆ ಆಗಿರುವ ಜಾನುವಾರು ಹಾನಿಗೆ ನಿಯಮದಂತೆ ಪರಿಹಾರ ಒದಗಿಸಲು ಮೇಲಾಧಿಕಾರಿಗಳಿಗೆ ಮನವಿ ಕಳುಹಿಸಿಕೊಡಲಾಗುತ್ತದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಜಗನಾಥ ಕೊರಳ್ಳಿ ಆಳಂದ ಹೇಳಿದ್ದಾರೆ.