ಡಾ.ಮನಮೋಹನ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ: ರಾಮಪ್ಪ

KannadaprabhaNewsNetwork | Published : Dec 30, 2024 1:02 AM

ಸಾರಾಂಶ

ದೇಶವು ಆರ್ಥಿಕವಾಗಿ ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ, ಹಲವಾರು ಮುಖಂಡರ ವಿರೋಧದ ಮಧ್ಯದಲ್ಲಿಯೇ ಆರ್ಥಿಕ ಸಬಲೀಕರಣಕ್ಕಾಗಿ ದಿಟ್ಟ ತನದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ದಿ.ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಹರಿಹರದಲ್ಲಿ ಸ್ಮರಿಸಿದ್ಧಾರೆ.

- ಹರಿಹರದಲ್ಲಿ ಡಾ.ಮನಮೋಹನ ಸಿಂಗ್ ಶ್ರದ್ಧಾಂಜಲಿ - - - ಕನ್ನಡಪ್ರಭ ವಾರ್ತೆ ಹರಿಹರದೇಶವು ಆರ್ಥಿಕವಾಗಿ ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ, ಹಲವಾರು ಮುಖಂಡರ ವಿರೋಧದ ಮಧ್ಯದಲ್ಲಿಯೇ ಆರ್ಥಿಕ ಸಬಲೀಕರಣಕ್ಕಾಗಿ ದಿಟ್ಟ ತನದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ದಿ.ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.

ನಗರದ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ, ದಿ।। ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್ಥಿಕ ತಜ್ಞರಾಗಿದ್ದ ಡಾ.ಸಿಂಗ್ ಅವರ ನಿಧನ ದೇಶಕ್ಕೆ ತುಂಬಲಾರದ ಹಾನಿ, ಆಘಾತಕಾರಿ ವಿಷಯ. ವಿಶ್ವವೇ ಭಾರತದ್ದತ್ತ ತಿರುಗಿ ನೋಡುವಂತೆ ಮಾಡಿದ ಮಹಾನ್ ಆರ್ಥಿಕ ತಜ್ಞರಾಗಿದ್ದ ಸಿಂಗ್ ಅವರು, ತಮ್ಮ ಅಧಿಕಾರವಧಿಯಲ್ಲಿ, ದೇಶದ ಅತ್ಯಂತ ಕಡುಬಡವರು, ಮಧ್ಯಮ ವರ್ಗದವರು ಆರ್ಥಿಕವಾಗಿ ಸುಸ್ಥಿರವಾಗುವಂಥಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಕೆಪಿಸಿಸಿ ವಕ್ತಾರ ರೇವಣಸಿದ್ದಪ್ಪ ಮಾತನಾಡಿ, ಸಿಂಗ್ ಅವರು ದೇಶದ ಆರ್ಥಿಕ ಸುಧಾರಣೆಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅಜಾತ ಶತ್ರುವಾಗಿ ಮೆರೆದಿದ್ದರು. ತಮ್ಮ ಅಧಿಕಾರವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಇಂದಿಗೂ ದೇಶದ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ಹೇಳಿದರು.ನಗರಸಭೆ ಸದಸ್ಯ ಎಂ.ಎಸ್ ಬಾಬುಲಾಲ್, ಮಾಜಿ ಸದಸ್ಯರಾದ ಹಬೀಬ್‍ಉಲ್ಲಾ, ಹಂಚಿನ ನಾಗಣ್ಣ, ನಾಗರಾಜ, ಮುಖಂಡರಾದ ಫೈರೊಜ್, ಸಮಾಜ ಸೇವಕ ಸನಾವುಲ್ಲಾ, ಹಲಗೆರಿ ನಜೀರ್ ನುಡಿನಮನ ಸಲ್ಲಿಸಿದರು.ಹಾಜಿಅಲಿ, ನಿವೃತ್ತ ಶಿಕ್ಷಕ ಅಶೋಕ, ಬೆಳ್ಳೂಡಿ ರಾಮಚಂದ್ರಪ್ಪ, ಹಬೀಬ್‍ಬೇಗ್, ಮಗ್ದುಮ್, ಆಸಿಫ್ ಜುನೇದಿ. ರೆಹಮಾನ್, ಅಬುಸಾಲಿಯಾ, ಬಬ್ಲು ಪೈಲ್ವಾನ್, ಎಂ.ಇಲಿಯಾಜ್, ವಿದ್ಯಾ, ನೇತ್ರಾವತಿ, ಶ್ರೀನಿವಾಸ್ ಕೊಡ್ಲಿ ಇತರರು ಭಾಗವಹಿಸಿದ್ದರು.

-------

28 ಹೆಚ್.ಆರ್.ಆರ್ 01ಹರಿಹರ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದಿ. ಡಾ. ಮನಮೋಹನ ಸಿಂಗ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Share this article