ಕೆ.ಶಿವರಾಂ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ: ಡಿ.ರಾಮು

KannadaprabhaNewsNetwork |  
Published : Mar 03, 2024, 01:34 AM IST
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ  ತಾಲೂಕು ಛಲವಾದಿ ಮಹಾ ಸಭಾದ ಆಶ್ರಯದಲ್ಲಿ  ಇತ್ತೀಚೆಗೆ ನಿಧನರಾದ ಕೆ.ಶಿವರಾಂ ಅವರಿಗೆ ಮೇಣದ ಭತ್ತಿ ಹಚ್ಚಿ ಶ್ರದ್ದಾಂಜಲಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಡಿ.ರಾಮು, ವಾಲ್ಮೀಕಿ ಶ್ರೀನಿವಾಸ್, ಎಚ್‌.ಎಂ.ಶಿವಣ್ಣ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಕೆ.ಶಿವರಾಂ ಅವರ ನಿಧನದಿಂದ ನಮ್ಮ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಡಿ.ರಾಮು ಹೇಳಿದರು.

ತಾಲೂಕು ಛಲವಾದಿ ಮಹಾಸಭಾದ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೆ.ಶಿವರಾಂ ಅವರ ನಿಧನದಿಂದ ನಮ್ಮ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಡಿ.ರಾಮು ಹೇಳಿದರು.

ಶುಕ್ರವಾರ ರಾತ್ರಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಛಲವಾದಿ ಮಹಾಸಭಾದಿಂದ ಆಯೋಜಿ ಸಿದ್ದ ದಿ.ಕೆ.ಶಿವರಾಂ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕೆ.ಶಿವರಾಂ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು. ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿ ಕಠಿಣ ಪರಿಶ್ರಮದಿಂದ ಕನ್ನಡದಲ್ಲಿ ಐಎಎಸ್ ಮಾಡಿದ ಪ್ರಥಮ ವ್ಯಕ್ತಿ. ಅವರು ಅನೇಕ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಶೋಷಿತರ, ಬಡವರ, ಹಿಂದುಳಿದ ಸಮುದಾಯದವರಿಗೆ ಅನೇಕ ರೀತಿಯ ಸಹಾಯ ಮಾಡಿದವರು ಎಂದರು.

ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್ ಮಾತನಾಡಿ, ಕೆ.ಶಿವರಾಂ ದೀಪದ ಬೆಳಕಿನಲ್ಲಿ ಓದಿ ಉನ್ನತ ಹುದ್ದೆ ಪಡೆದಿದ್ದರು. ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದ ಅವರು ಬಡತನದ ಬಗ್ಗೆ ಅರಿತಿದ್ದರು. ಈ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಯಾಗಿದ್ದಾಗ ಬಡವರ ಪಾಲಿಗೆ ಆಶಾ ಕಿರಣವಾಗಿದ್ದರು. ಅವರ ಈ ಅಕಾಲಿಕ ಮರಣ ಅತ್ಯಂತ ನೋವು ತಂದಿದೆ ಎಂದರು.

ದಲಿತ ಸಮುದಾಯದ ಮುಖಂಡ ಎಚ್.ಎಂ.ಶಿವಣ್ಣ ಮಾತನಾಡಿ, ಕೆ.ಶಿವರಾಂ ಅವರು ಬಡ ರೈತನ ಮಗನಾಗಿ ದೇಶದಲ್ಲಿ ಉನ್ನತ ಹುದ್ದೆ ಹೊಂದಿದ್ದರು. ದಾವಣಗೆರೆ, ಮಂಡ್ಯ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಚಿತ್ರರಂಗದಲ್ಲೂ ಕೂಡ ಛಾಪು ಮೂಡಿಸಿದ್ದರು. ಉನ್ನತ ವ್ಯಾಸಂಗ ಹಾಗೂ ಉನ್ನತ ಹುದ್ದೆಗಳು ಕೇವಲ ಉಳ್ಳವರ ಪಾಲಾಗುತ್ತಿತ್ತು. ಅವರು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದಾಗ ದಲಿತ ಸಮುದಾಯದ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಹಾಯಧನ ಮಾಡಿದ್ದರು. ಅಲ್ಲದೆ ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಿಗೆ ತರಬೇತಿ ಕೇಂದ್ರಗಳನ್ನು ತೆರೆದ ಮಹಾನ್ ವ್ಯಕ್ತಿ ಎಂದು ಸ್ಮರಿಸಿದರು.

ತಾಲೂಕು ಛಲವಾದಿ ಮಹಾಸಭಾದ ಪದಾಧಿಕಾರಿಗಳು ಹಾಗೂ ದಲಿತ ಸಮುದಾಯದ ಮುಖಂಡರು ಮೇಣದ ಬತ್ತಿ ಹಚ್ಚಿ ಕೆ.ಶಿವರಾಂ ಅವರ ಆತ್ಮಕ್ಕೆ ಶಾಂತಿ ಕೋರಿದರು.ಈ ಸಂದರ್ಭದಲ್ಲಿ ತಾಲೂಕು ಛಲವಾದಿ ಮಹಾ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಭಾನುಮತಿ, ಪದಾಧಿಕಾರಿಗಳಾದ ಪವಿತ್ರಾ, ಶೈಲಜಾ, ಭವಾನಿ, ವಿಮಲಾ, ಮೀನಾಕ್ಷಿ, ಕಾನೂರುಚಂದ್ರು, ಸುಜಿತ್,ಮುಕುಂದ,ಚಂದ್ರಶೇಖರ್, ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ