ಸರ್ಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು

KannadaprabhaNewsNetwork |  
Published : Jan 01, 2025, 12:01 AM IST
ಗದಗ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಸಭೆ ಜರುಗಿತು. | Kannada Prabha

ಸಾರಾಂಶ

ಬಾಣಂತಿಯರ ಸಾವಿನ ಪ್ರಕರಣದಲ್ಲಿ ವಜಾಗೊಳಿಸಬೇಕಿರುವುದು ಆರೋಗ್ಯ ಸಚಿವರನ್ನೆ ಹೊರತು,ವೈದ್ಯಾಧಿಕಾರಿಗಳನ್ನಲ್ಲ

ಗದಗ: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಬಾಣಂತಿಯರು, ಶಿಶುಗಳು ಸಾವನ್ನಪ್ಪುತ್ತಿವೆ. ಆದರೆ ಸದನದಲ್ಲಿ ಈ ಕುರಿತು ಚರ್ಚೆಯಾಗಲಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಣಿ ಬಾಣಂತಿ, ಶಿಶು ಮೃತಪಟ್ಟರು ಅಧಿಕಾರಿಗಳು, ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ. ದುರಹಂಕಾರದಿಂದ ನಡೆದುಕೊಳ್ಳುತ್ತಿರುವ ಅಯೋಗ್ಯ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ.ತಾಯಂದಿರ ಕಣ್ಣಿರು ಒರೆಸುವ ಕೆಲಸವಾಗಬೇಕಿದೆ. ಹಲವು ಹಗರಣಗಳಲ್ಲಿ ಭಾಗಿಯಾದ ಸಿದ್ಧರಾಮಯ್ಯ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಜಾನುವಾರುಗಳಿಗೆ ನೀಡಬೇಕಾದ ಔಷಧ ಮನುಷ್ಯರಿಗೆ ನೀಡಲಾಗುತ್ತಿದೆ. ಸರ್ಕಾರದ ತಪ್ಪನ್ನು ವೈದ್ಯರು ಒಪ್ಪಿಕೊಳ್ಳುತ್ತಿದ್ದಾರೆ.ಆದರೆ,ಸಚಿವರು ಒಪ್ಪಿಕೊಳ್ಳುತ್ತಿಲ್ಲ ಎಲ್ಲಿಯವರೆಗೆ ಈ ಸರ್ಕಾರ ಅಧಿಕಾರದಲ್ಲಿ ಇರುತ್ತದೆಯೋ,ಅಲ್ಲಿಯವರೆಗೆ ಬಾಣಂತಿಯರು ಸುರಕ್ಷಿತವಲ್ಲ.ಬಾಣಂತಿಯರ ಸಾವಿನ ಪ್ರಕರಣದಲ್ಲಿ ವಜಾಗೊಳಿಸಬೇಕಿರುವುದು ಆರೋಗ್ಯ ಸಚಿವರನ್ನೆ ಹೊರತು,ವೈದ್ಯಾಧಿಕಾರಿಗಳನ್ನಲ್ಲ. ಬಾಣಂತಿ, ಶಿಶುಗಳ ಸಾವು ಖಂಡನೀಯ ಇದು ಸರ್ಕಾರವೇ ಮಾಡಿರುವ ಹತ್ಯೆ ಎಂದು ಆರೋಪಿಸಿದರು.

ಆಸ್ಪತ್ರೆಗಳಿಗೆ ಅವಧಿ ಮೀರಿದ ಔಷಧ ಪೂರೈಸಿದ್ದಾರೆ. ಹೆಚ್ಚಿನ ಲಾಭದ ಆಸೆಗಾಗಿ ಸಚಿವ ದಿನೇಶ ಗುಂಡೂರಾವ್ ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಿದ್ದರಿಂದ ಈ ಅವಾಂತರ ಸೃಷ್ಟಿಯಾಗಿವೆ. ಔಷಧ ಪೂರೈಕೆಯಲ್ಲಿ ಪಾರದರ್ಶಕತೆ ಬೇಕು ಎಂದರು.

ಈ ವೇಳೆ ಪಕ್ಷದ ಹಿರಿಯರಾದ ಎಂ.ಎಸ್. ಕರೀಗೌಡ್ರ, ಅನೀಲ ಅಬ್ಬಿಗೇರಿ, ಅಶ್ವೀನಿ ಜಗತಾಪ್, ವಂದನಾ ವರ್ಣೇಕರ್, ಅಶ್ವೀನಿ ಅಂಕಲಕೋಟಿ, ಕಮಲಾಕ್ಷೀ ಗೊಂದಿ, ಪಾರ್ವತಿ ಪಟ್ಟಣಶೆಟ್ಟಿ, ಜಯಶ್ರೀ ಅಣ್ಣಿಗೇರಿ, ವಿಜಯಲಕ್ಷ್ಮೀ ಮಾನ್ವಿ, ಕವಿತಾ ಬಂಗಾರಿ, ಸ್ವಾತಿ ಅಕ್ಕಿ, ಪದ್ಮನಿ ಮುತ್ತಲದಿನ್ನಿ, ಶೇಖವ್ವ ಮಾಸರಡ್ಡಿ, ಸುಮಂಗಲಾ ಕೊನೆವಾಲ ಹಾಗೂ ಮಹಿಳೆಯರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌