ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಸ್ತೆ ಮಾಡುವ ನೆಪದಲ್ಲಿ 100 ಕ್ಕೂ ಹೆಚ್ಚು ಮರಗಳ ಮಾರಣ ಹೋಮ

KannadaprabhaNewsNetwork |  
Published : Jan 26, 2025, 01:35 AM ISTUpdated : Jan 26, 2025, 11:40 AM IST
ರಸ್ತೆ ಮಾಡುವ ನೆಪದಲ್ಲಿ ಮರಗಳ ಮಾರಣ ಹೋಮ. | Kannada Prabha

ಸಾರಾಂಶ

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಸ್ತೆ ಮಾಡುವ ನೆಪದಲ್ಲಿ ರಸ್ತೆ ಬದಿಯಲ್ಲಿದ್ದ 100 ಕ್ಕೂ ಹೆಚ್ಚು ಮರ ಕಡಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದರು.

  ಕೊರಟಗೆರೆ : ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಸ್ತೆ ಮಾಡುವ ನೆಪದಲ್ಲಿ ರಸ್ತೆ ಬದಿಯಲ್ಲಿದ್ದ 100 ಕ್ಕೂ ಹೆಚ್ಚು ಮರ ಕಡಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದರು.

ತಾಲೂಕಿನ ಜಿ.ನಾಗೇನಹಳ್ಳಿಯಿಂದ ತೀತಾ ಗ್ರಾಮದವರೆಗೆ ಪಿಡಬ್ಯ್ಲುಡಿ ಇಲಾಖೆಯಿಂದ ರಸ್ತೆಯಲ್ಲಿರುವ ಜಂಗಲ್ ತೆರವು ಮಾಡುವ ಸಂದರ್ಭದಲ್ಲಿ ಮಾದವಾರ ಸಮೀಪ ೧೦೦ಕ್ಕೂ ಹೆಚ್ಚು ಮರಗಳನ್ನು ಇಟಾಚಿ ಮೂಲಕ ಕಿತ್ತು ಹಾಕಲಾಗಿದ್ದು, ಪಿಡಬ್ಯ್ಲುಡಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರ ಕಡಿಯಲಾಗಿದೆ.

ಸಾಮಾಜಿಕ ಹೋರಾಟಗಾರ ಅರುಣ್‌ಕುಮಾರ್ ಮಾತನಾಡಿ, ರಸ್ತೆ ಬದಿಯಲ್ಲಿರುವ ೧೦೦ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿದ್ದಾರೆ. ಮರ ಕಡಿಯದೆ ಕೆಲಸ ಮಾಡುವಂತೆ ತಿಳಿಸಲಾಗಿತ್ತು, ಆದರೂ ಮರ ಕಡಿದಿದ್ದಾರೆ. ಈ ರಸ್ತೆ ಗೊರವನಹಳ್ಳಿಗೆ ಸಂರ್ಪಕಿಸುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ರಸ್ತೆ ಬದಿಯ ಮರಗಳ ನೆರಳಲ್ಲಿ ಊಟ ಮಾಡುತ್ತಾರೆ. ಇಲ್ಲಿವರೆಗೂ ಪಿಡಬ್ಯ್ಲುಡಿ ಇಲಾಖೆ ಅಧಿಕಾರಿಗಳು ಬಂದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಷ್ಟೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು.

ತೀತಾ ಗ್ರಾಮಸ್ಥ ಮಂಜುನಾಥ್ ಮಾತನಾಡಿ, ಜಿ.ನಾಗೇನಹಳ್ಳಿ ಗ್ರಾಮದಿಂದ ತೀತಾ ಗ್ರಾಮದವರೆಗೆ ರಸ್ತೆ ಅಗಲಿಕರಣ ಮಾಡಲು ಇಟಾಚಿ ಬಳಸಿ ಜಂಗಲ್ ಕ್ಲೀನ್ ಮಾಡಲಾಗುತ್ತಿದ್ದು, ರಸ್ತೆ ಬದಿ ಮರಗಳನ್ನು ಯಾರಿಗೂ ಹೇಳದೆ ಕೇಳದೆ ಕಡಿದಿದ್ದಾರೆ ಎಂದರು. ವಲಯ ಅರಣ್ಯಾಧಿಕಾರಿ ಸುರೇಶ್ ಮಾತನಾಡಿ, ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ೧೦೦ಕ್ಕೂ ಹೆಚ್ಚು ಮರ ಕಡಿದಿದ್ದಾರೆ ಎಂದು ಸಾರ್ವಜನಿಕರು ದೂರವಾಣಿ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ನಾನು ಕೂಡ ಭೇಟಿ ನೀಡಿದ್ದು, ಎಷ್ಟು ಮರಗಳು ನಾಶವಾಗಿದ್ದಾವೆ ಎಂದು ನಮ್ಮ ಸಿಬ್ಬಂದಿ ವರದಿ ನೀಡಿದ ನಂತರ ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ