ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ಕುಮಾರಿ ನೇಹಾ ವಿದ್ಯಾನಗರದ ಕೆಎಲ್ಇ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಫಯಾಜ್ ಎಂಬಾತ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಗುರುವಾರ ನೇಹಾಳು ಪರೀಕ್ಷೆ ಬರೆದು ಮನೆಗೆ ತೆರಳುತ್ತಿದ್ದ ವೇಳೆ ಕಾಲೇಜಿಗೆ ಆಗಮಿಸಿದ ಫಯಾಜ್ ಏಕಾಏಕಿ ನೇಹಾಳಿಗೆ ಮನಬಂದಂತೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಸಿ ಪರಾರಿಯಾಗಿದ್ದಾನೆ.
ಕುಮಾರಿ ನೇಹಾಳ ಹತ್ಯೆಗೈದ ದುಷ್ಕರ್ಮಿ ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು. ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು ಮತ್ತು ಇಂತಹ ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ, ಪ್ರಮುಖರಾದ ಮಹಾದೇವಯ್ಯ ಗೌಡೂರು, ಶರಣಯ್ಯ ದಾಸೋಹಮಠ, ರಾಜು ಹಿರೇಮಠ, ವಿರುಪಾಕ್ಷಯ್ಯ ಹಿರೇಮಠ, ಮಹೆಶ ಜಗವತಿಮಠ, ಅಮರೇಶ ವಸ್ತ್ರದ್, ಚನ್ನಬಸವ ಹಿರೇಮಠ, ಗುರುರಾಜ, ಸಂತೋಷ ಸೊಪ್ಪಿಮಠ, ಗಂಗಾಧರ, ಗುರುಬಾಯಿ ಹಿರೇಮಠ, ಸುಹಾಸಿನಿ ಹಿರೇಮಠ ಸೇರಿ ಇತರರು ಇದ್ದರು.