ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಪ್ರಾಣ ಬೆದರಿಕೆ: ಬಸವರಾಜ್‌ ಆರೋಪ

KannadaprabhaNewsNetwork |  
Published : Apr 03, 2024, 01:38 AM IST
ಹರಿಹರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಹರಿಹರ ತಾಲೂಕು ಅಧ್ಯಕ್ಷ ಜಿ.ಎಚ್. ಬಸವರಾಜ್. | Kannada Prabha

ಸಾರಾಂಶ

ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಪ್ರಶ್ನಿಸಿದ ನನಗೆ ದಂಧೆಕೋರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹರಿಹರ ತಾಲೂಕು ಅಧ್ಯಕ್ಷ ಜಿ.ಎಚ್. ಬಸವರಾಜ್ ಹರಿಹರದಲ್ಲಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಪ್ರಶ್ನಿಸಿದ ನನಗೆ ದಂಧೆಕೋರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹರಿಹರ ತಾಲೂಕು ಅಧ್ಯಕ್ಷ ಜಿ.ಎಚ್. ಬಸವರಾಜ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ತುಂಗಭದ್ರಾ ನದಿ ತೀರದಿಂದ ಮಧ್ಯರಾತ್ರಿ ಕಾನೂನು ಬಾಹಿರವಾಗಿ ರೇವಣಪ್ಪ ಬಾರ್ಕಿ, ಕೆಂಚನಹಳ್ಳಿ ಮಹಾಂತೇಶ್, ಚಂದ್ರಶೇಖರ್, ಜಿ.ಬಿ.ರಮೇಶ್, ಎಚ್.ಬಿ. ಬಸವರಾಜ್, ಹರೀಶ್, ಮಾರುತಿ, ರಮೇಶ್ ನದಿಯಲ್ಲಿ ಮರಳನ್ನು ಅಗೆದು ಕಳ್ಳಸಾಗಾಣೆ ಮಾಡುತ್ತಿದ್ದಾರೆ ಎಂದು ದೂರಿದರು.

ನದಿಯ ದಡದ ಮಣ್ಣನ್ನು ಅಕ್ರಮವಾಗಿ ಸರ್ಕಾರದ ಪರವಾನಿಗೆ ಇಲ್ಲದೇ ಇಟ್ಟಿಗೆ ತಯಾರಿಸಲು ಮಾರುತ್ತಿದ್ದಾರೆ. ಇದರಿಂದ ಗ್ರಾಮದ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಲು ಜನರಿಗೆ ತೊಂದರೆ ಆಗುತ್ತಿದೆ. ಈ ಸ್ಥಳದಲ್ಲಿ ಎರಡು ಸೇತುವೆಗಳು ಇರುವುದರಿಂದ ಸರ್ಕಾರದ ನಿಯಮಗಳ ಪ್ರಕಾರ ಈ ಸೇತುವೆಗಳ ಸುತ್ತಮುತ್ತಲ ೫೦೦ ಮೀಟರ್‌ಗಳ ಅಂತರದಲ್ಲಿ ಯಾವುದೇ ಮರುಳು ಗಣಿಗಾರಿಕೆ ಮಾಡುವಂತಿಲ್ಲ ಎಂಬ ನಿಯಮ ಇದೆ. ಆದರೂ, ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಅಕ್ರಮ ತಡೆಯಲು ಮುಂದಾದಾಗ ಈ ದಂಧೆಕೋರರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಇದಲ್ಲದೇ, ಈ ವ್ಯಕ್ತಿಗಳು ನಾವು ಸಂಬಂಧಪಟ್ಟ ವ್ಯಕ್ತಿಗಳೊಡನೆ ಒಪ್ಪಂದ ಮಾಡಿಕೊಂಡಿದ್ದು, ಅವರಿಗೆ ₹೫೦ ಸಾವಿರ ನೀಡಿದ್ದೇವೆ ಎಂದು ಹೇಳುತ್ತಾರೆ. ಟ್ರ್ಯಾಕ್ಟರ್‌ನಲ್ಲಿ ಮರಳನ್ನು ಸಾಗಿಸುವಾಗ ತಡೆದಿದ್ದೆ. ಆಗ ನನ್ನ ಮೇಲೆ ಗೂಂಡಾಗಿರಿ ಮಾಡಿ, ಕೆಎ-೧೭- ಟಿ-೫೬೪೦ ಕ್ರ.ಸಂ.ಯ ಟ್ರ್ಯಾಕ್ಟರ್ ನನ್ನ ಮೇಲೆ ಹತ್ತಿಸಿ, ಹಲ್ಲೆ ಪ್ರಯತ್ನ ಮಾಡಿದರು. ಆಗ ತಕ್ಷಣ ೧೧೨ಗೆ ಕರೆ ಮಾಡಿ ತಿಳಿಸಿದೆ. ಪೊಲೀಸ್ ಸಿಬ್ಬಂದಿ ಘಟನೆ ಸ್ಥಳಕ್ಕೆ ಧಾವಿಸಿ ಘಟನೆ ವಿವರಗಳನ್ನು ಪರಿಶೀಲಿಸಿದರು. ಆದರೆ ಯಾವುದೇ ತನಿಖೆ ನಡಿಸಿಲ್ಲ. ಕಾನೂನು ಬಾಹಿರ ಮರಳುಗಾರಿಕೆ ಮುಂದುವರಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಕೂಡಲೇ ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಬಸವರಾಜ್ ಜಿ.ಎಚ್. ಒತ್ತಾಯಿಸಿದರು.

- - - -೨ಎಚ್‌ಆರ್‌ಆರ್೨:

ಹರಿಹರದ ಪತ್ರಿಕಾ ಭವನದಲ್ಲಿ ಮಂಗಳವಾರ ಎಎಪಿ ತಾಲೂಕು ಅಧ್ಯಕ್ಷ ಜಿ.ಎಚ್. ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ