ಪರಶುರಾಂಪುರ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಜೆಡಿಎಸ್ ಪಕ್ಷದ ಹಿರಿಯ ಧುರೀಣ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರಶುರಾಂಪುರಕ್ಕೆ ಆಗಮಿಸಿ ಸಾರ್ವಜನಿಕರಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದರು. ಶುಕ್ರವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ದಿನಬೆಳಗಾದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಾರೆ ಆದರೆ ಯತೀಂದ್ರ ಸಿದ್ದರಾಮಯ್ಯ ಮುಂದಿನ 4 ವರ್ಷಗಳ ಅವಧಿಗೆ ನಮ್ಮ ತಂದೆಯೇ ಮುಖ್ಯಮಂತ್ರಿ ಎಂದು ಹೇಳುತ್ತಾರೆ ಇದರಲ್ಲಿ ಯಾವುದು ನಂಬಬೇಕು ಎಂದು ಜನರು ಕೇಳುತ್ತಾರೆ.
ಗ್ಯಾರಂಟಿ ಸ್ಕೀಂನಿಂದ ಜನಸಾಮಾನ್ಯರನ್ನು ಸಾಲದ ಕೂಪಕ್ಕೆ ತಳ್ಳುತ್ತಿರುವ ಸರ್ಕಾರದ ಯಾವ ರಾಜಕಾರಣಿಯೂ ಸಹ ಸಾಲವನ್ನು ಅವರ ಅಧಿಕಾರದ ಅವಧಿಯಲ್ಲಿ ತೀರಿಸುವುದಿಲ್ಲ. ಜನ ಸಾಮಾನ್ಯರ ಮೇಲೇ ಹೋರೆಯಾಗುತ್ತದೆ. ಗ್ಯಾರಂಟಿ ಎಂಬ ಕೂಪದಿಂದ ಜನರನ್ನು ಮರಳುಮಾಡಿ ಪಿಕ್‌ಪಾಕೆಟ್ ಮಾಡುತ್ತಿದೆ ಎಂದು ಗುಡುಗಿದರು.ಗೋವಿಂದ ಕಾರಜೋಳ ಮಾತನಾಡಿ, ಸದೃಢ ಹಾಗೂ ಸುಭದ್ರ ಬಿಜೆಪಿ ಸರ್ಕಾರ ಸುರಕ್ಷತೆಯಾಗಿರ ಬೇಕಾದರೆ 60 ವರ್ಷಗಳಲ್ಲಿ ಕಾಣದ ಸಾಧನೆ ಪ್ರಧಾನಿ ಮೋದಿ ಕೇವಲ 10 ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಆದ್ದರಿಂದ ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸಿ ಪ್ರಧಾನಿಯಾಗಿ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗ ವ್ಯಾಪ್ತಿಯ 6 ಕ್ಷೇತ್ರಗಳಲ್ಲಿ 6 ಸ್ಥಾನಗಳನ್ನೂ ಸಹ ಗೆಲ್ಲಿಸಿಕೊಳ್ಳುತ್ತೇವೆ ಮತ್ತು ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತುಹಾಕುವುದು ನಮ್ಮ ಮೂಲ ಉದ್ದೇಶ ಎಂದು ತಿಳಿಸಿದರು.ಚಳ್ಳಕೆರೆ ಕ್ಷೇತ್ರದ ಎಂಎಲ್‌ಎ ಆಕಾಂಕ್ಷಿಗಳಾದ ಕೆ.ಟಿ ಕುಮಾರಸ್ವಾಮಿ, ಅನಂತಕುಮಾರ್, ರವೀಶ್, ಪಿ.ಟಿ.ತಿಪ್ಪೇಸ್ವಾಮಿ, ಸೂರನಹಳ್ಳಿ ಶ್ರೀನಿವಾಸ, ಮಂಡಿಮಠ, ಎಂ.ಜಯ್ಯಣ್ಣ, ಜಯಪಾಲಯ್ಯ, ಬಾಳೇಮಂಡಿ ರಾಮದಾಸ್, ಮತ್ತು ಮುಖಂಡರಾದ ಶಿವಪುತ್ರಪ್ಪ, ಮೊಳಕಾಲ್ಮೂರು ವೀರಭದ್ರಪ್ಪ ವೆಂಕಟೇಶ್, ಸೋಮಶೇಖರ ಮಂಡಿಮಠ, ಮಿಲಿಟರಿ ಸಿದ್ದೇಶ, ಲೋಕೇಶ, ತಿಪ್ಪೇಸ್ವಾಮಿ ಪಾವಗಡ ಮಾಜಿ ಎಂಎಲ್ಎ ತಿಮ್ಮರಾಯಪ್ಪ ಮುಂತಾದ ಗಣ್ಯರು ಇದ್ದರು.