ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ತೊಲಗಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಮತ್ತು ಹೋರಾಟ ತೀವ್ರಗೊಳಿಸಲು ಬಜೆಟ್ ಅಧಿವೇಶನ ಪ್ರಾರಂಭವಾದಾಗ ಬೆಂಗಳೂರು ಚಲೋ ನಡೆಸಲು ತೀರ್ಮಾನಿಸಲಾಗಿದೆ.
ಕೊಪ್ಪಳ ಭಾಗ್ಯನಗರದ ಒಂದುವರೆ ಲಕ್ಷ, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಆರೋಗ್ಯ ಜೀವ ಉಳಿಸಿ ಹೋರಾಟ ತೀವ್ರಗೊಳಿಸುವ ಸಲಹೆಗಳು ಕೇಳಿಬಂದವು.
ಇತ್ತೀಚೆಗೆ ನಡೆದ ಬಂದ್ ಸಂದರ್ಭದಲ್ಲಿ ತೆಗೆದುಕೊಂಡು ನಿರ್ಣಯ ಅಂಗೀಕರಿಸಿ,ಬಂದ್ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಲಾಯಿತು.ಜನರ ಜೀವ, ಆರೋಗ್ಯ ಉಳಿಸಿ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು,ಕೇಂದ್ರ ಪರಿಸರ ಇಲಾಖೆ ತಂತ್ರಜ್ಞರ ವರದಿ ಶಿಫಾರಸು ಮಾಡಿದಂತೆ ಹಿರೇಬಗನಾಳ, ಅಲ್ಲಾನಗರ ಹತ್ತಿರದ ಮಾಲಿನ್ಯ ಮಾಡುವ ಕಾರ್ಖಾನೆ ಸ್ಥಳಾಂತರ ಮಾಡಬೇಕು, ತುಂಗಭದ್ರಾ ವಿಷಗೊಳಿಸಿದ ಕಾರ್ಖಾನೆ ಸೀಜ್ ಮಾಡಬೇಕು,ಬಸಾಪುರ ಕೆರೆ ಬಲ್ಡೋಟ ಅತಿಕ್ರಮಣದಿಂದ ತೆರವುಗೊಳಿಸಬೇಕು, ಮುಖ್ಯಮಂತ್ರಿಗಳು ಬಾಧಿತ ಹಳ್ಳಿಗಳಿಗೆ ಭೇಟಿ ಮಾಡಲು ಆಗ್ರಹಿಸಿ ನಡೆದ ಹೋರಾಟ ಮುಂದುವರೆಸಿ ಮಾ.13,17ರಂದು ಬೆಂಗಳೂರು ಚಲೋ ನಡೆಸಲಾಗುವುದು ಎನ್ನುವ ನಿರ್ಣಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಂಡಿಸಿದರು.
ಈ ನಿರ್ಣಯದ ಅನುಮೋದನೆ ಎಪಿಎಂಸಿ ವರ್ತಕ ಪ್ರಭು ಹೆಬ್ಬಾಳ ಅನುಮೋದಿಸಿ,ಕೊಪ್ಪಳ ಉಳಿಯಲು,ಬಾಧಿತ ಹಳ್ಳಿಯ ರೈತರು, ಕೃಷಿ, ಉಳಿಸಿಕೊಳ್ಳಲು ಇನ್ನೂ ಸುದೀರ್ಘ ಹೋರಾಟ ಮಾಡಲು ಮುಂದಾಗೋಣ ಎಂದರು.
ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಕಾರ್ಯಕ್ರಮ ನಿರ್ವಹಿಸಿ ಹೋರಾಟದ ರೂಪರೇಷೆ ವಿವರಿಸಿದರು.ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ, ಮಲ್ಲನಗೌಡ ಕೋನನಗೌಡ್ರ, ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಮಾಜಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕವಲೂರು, ಪತ್ರಕರ್ತ ಸಂತೋಷ ದೇಶಪಾಂಡೆ, ಹಿರಿಯ ವಕೀಲ ಪೀರಾ ಹುಸೇನ್ ಹೊಸಳ್ಳಿ,ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಪ್ರಕಾಶಕ ಡಿ.ಎಂ. ಬಡಿಗೇರ, ಸರೋಜಾ ಬಾಕಳೆ, ಕೀರ್ತಿ ಎಸ್. ಪಾಟೀಲ್, ಮಂಜುನಾಥ ಸೊರಟೂರು, ಹನುಮಂತಪ್ಪ ಗೊಂದಿ, ಡಾ. ಮಂಜುನಾಥ ಸಜ್ಜನ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ, ಶರಣು ಗಡ್ಡಿ, ಶಿವಾನಂದಯ್ಯ ಬೀಳಗಿಮಠ, ಬಾಧಿತ ರೈತ ಮಾರ್ಕಂಡಯ್ಯ ಹಿರೇಮಠ, ರಮೇಶ ತುಪ್ಪದ, ಕಾಶಪ್ಪ ಛಲವಾದಿ, ರಘು ಚಾಕ್ರಿ, ಸುಖಮುನಿಯಪ್ಪ ಬಡಿಗೇರ, ಬಸವರಾಜ ಕೊಪ್ಪದ, ಕುಣಿಕೇರಿ ಬಾಧಿತ ರೈತ ಹುಲುಗಪ್ಪ ಭೋವಿ, ಗವಿಸಿದ್ದಪ್ಪ ಹಲಿಗಿ, ಅಂದಪ್ಪ ಹುರಳಿ, ನಟರಾಜ ಸವಡಿ, ಶಿವಯ್ಯ ಹಿರೇಮಠ, ಶರಣು ಶೆಟ್ಟರ್ ಚರ್ಚಿಸಿ ಸಭೆಗೆ ಸಲಹೆ ನೀಡಿದರು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ, ಬೆಂಬಲಿಸಿದರು.