ಖಾಸಗಿ ಕೈಗಾರಿಕೆಗಳಿಗೆ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸಂಸ್ಕೃತಿ ನಾಶವಾಗುತ್ತದೆ. ರೈತರು ಬೆಳೆದಿರುವಂತ ಮಾವು, ರೇಷ್ಮೆ, ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದರಿಂದ ರೈತರು ಆರ್ಥಿಕ ಹಾಗೂ ಸಾಮಾಜಿಕವಾಗಿ ಕುಂಠಿತರಾಗಿ ಕೃಷಿ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಖಾಸಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡುವ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಮಾಡಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಹಾಗೂ ಶ್ರೀನಿವಾಸಪುರ ತಾಲೂಕಿನ ಯದರೂರು ಭಾಗದ ರೈತರೊಂದಿಗೆ ಬುಧವಾರ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಮೇಲೆ ದುಷ್ಪರಿಣಾಮ
ಖಾಸಗಿ ಕೈಗಾರಿಕೆಗಳಿಗೆ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸಂಸ್ಕೃತಿ ನಾಶವಾಗುತ್ತದೆ. ರೈತರು ಬೆಳೆದಿರುವಂತ ಮಾವು, ರೇಷ್ಮೆ, ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದರಿಂದ ರೈತರು ಆರ್ಥಿಕ ಹಾಗೂ ಸಾಮಾಜಿಕವಾಗಿ ಕುಂಠಿತರಾಗಿ ಕೃಷಿ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು.
ಕೈಗಾರಿಕೆಗಳ ಸ್ಥಾಪನೆಯಿಂದ ಅನುಕೂಲಗಳಿಗಿಂತ ಅನಾನುಕೂಲಗಲೇ ಹೆಚ್ಚು. ಸರ್ಕಾರ ಒಂದು ಬಾರಿ ಈ ಭಾಗದ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ನೋಟಿಪಿಕೇಷನ್ ಮಾಡಿದರೆ ಅದನ್ನು ಬಿಡಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತದೆ. ಈ ಪ್ರದೇಶದ 1270 ಎಕರೆ ಜಮೀನು ನೋಟಿಪಿಕೇಷನ್ ಮಾಡಿರುವುದರಿಂದ ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಸಾಮಾಜಿಕ ಭದ್ರತೆಗೆ ತಮ್ಮ ಜಮೀನನ್ನು ಬ್ಯಾಂಕುಗಳಲ್ಲಿ ಅಡವಿಡಲು ಸಾಧ್ಯವಾಗದಂತೆ ಉಪನೋಂದಣಾಧಿಕರಗಳ ಕಚೇರಿಯಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಬಾರದೆಂದು ಕೆಐಎಡಿಬಿ ಆದೇಶಿಸಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಜಮೀನು ನೀಡುವುದಿಲ್ಲ
ಈ ಸಂದರ್ಭದಲ್ಲಿ ಯದರೂರು, ಬೀರಗಾನಹಳ್ಳಿ, ಕತ್ತಿಬೀಸನಹಳ್ಳಿ, ಲಕ್ಷ್ಮೀಮಸಾಗರ ಗ್ರಾಮಗಳ ರೈತರು ಭಾಗವಹಿಸಿ ಯಾವುದೇ ಕಾರಣಕ್ಕೂ ಜೀವನಕ್ಕೆ ಆಧಾರವಾಗಿರುವ ನಮ್ಮ ಜಮೀನನ್ನು ಬಿಟ್ಟುಕೊಡುವುದಿಲ್ಲ. ನಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.