ಚಾರ್ಮಾಡಿ ಘಾಟ್‌ 8, 9ನೇ ತಿರುವಲ್ಲಿ ಲಘು ಭೂಕುಸಿತ

KannadaprabhaNewsNetwork |  
Published : Aug 23, 2024, 01:08 AM IST
ಕುಸಿತ | Kannada Prabha

ಸಾರಾಂಶ

ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಏಕಾಏಕಿ ನದಿ ನೀರು ಏರಿಕೆ ಹಾಗೂ ಘಾಟ್‌ನಲ್ಲಿ ಝರಿಗಳಲ್ಲಿ ನೀರಿನ ಹೆಚ್ಚಳದ ಜತೆಗೆ ಸಣ್ಣ ಭೂ ಕುಸಿತ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.

ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಘಾಟ್‌ನ 8 ಮತ್ತು 9 ನೇ ತಿರುವಿನಲ್ಲಿ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಗುಡ್ಡದ ಕಲ್ಲುಗಳು ಉರುಳಿ ಬಿದ್ದಿವೆ. ಕಳೆದೆರಡು ದಿನಗಳಿಂದ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆ ನೀರು ರಸ್ತೆಯಲ್ಲೇ ಹರಿದು ಬರುತ್ತಿತ್ತು. ಇದೇ ವೇಳೆ ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿನ ನೀರಿನ ಝರಿಗಳು ತುಂಬಿ ಹರಿದಿದ್ದು, ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಳವಾಗಿತ್ತು.ಘಾಟ್‌ನ ಕೆಳಭಾಗದಲ್ಲಿನ ಚಾರ್ಮಾಡಿ ಹಾಗೂ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದೇ ಇದ್ದರೂ ಹರಿದು ಬರುತ್ತಿದ್ದ ನೀರಿನಿಂದ ಜನರು ಆತಂಕಗೊಂಡಿದ್ದರು. ಪಶ್ಚಿಮ ಘಟ್ಟದಲ್ಲಿ ದೊಡ್ಡ ಭೂ ಕುಸಿತವಾಗುವ ಆತಂಕದಿಂದ ಜನರು ನಿದ್ದೆ ಗೆಟ್ಟಿದ್ದರು. ಇದೀಗ ಚಾರ್ಮಾಡಿ ಘಾಟ್‌ನಲ್ಲಿ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ.ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಏಕಾಏಕಿ ನದಿ ನೀರು ಏರಿಕೆ ಹಾಗೂ ಘಾಟ್‌ನಲ್ಲಿ ಝರಿಗಳಲ್ಲಿ ನೀರಿನ ಹೆಚ್ಚಳದ ಜತೆಗೆ ಸಣ್ಣ ಭೂ ಕುಸಿತ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಸೇರುವ ಬಗ್ಗೆ ವಿಷ್ಣುಗೆ ಇತ್ತು ಗೊಂದಲ!
ಫುಡ್‌ಸ್ಟ್ರೀಟ್‌ ಆದ ಮಾರುತಿ ಮಂದಿರ ಬಸ್‌ ನಿಲ್ದಾಣ