ಕನ್ನಡಪ್ರಭ ವಾರ್ತೆ ಬೆಳಗಾವಿ
ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ರಾಮ ಭಂಡಾರಿ ಅವರು ಸಂಘಟನೆ ದೃಷ್ಟಿಯಿಂದ ಸದಸ್ಯತ್ವ ಹೆಚ್ಚಿಸುವ ಅಭಿಯಾನ ಮಾಡಬೇಕಾಗಿದೆ. ಜೊತೆಗೆ ಬೆಳಗಾವಿಯ ಪ್ರತಿಯೊಂದು ಪ್ರದೇಶಕ್ಕೆ ಹೋಗಿ ಸಭೆ ಮಾಡುವ ತೀರ್ಮಾನ ಮಾಡಲಾಯಿತು. ಅಷ್ಟೆ ಅಲ್ಲ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ ಅವರು ಸಂಘಟನೆ ಹಿನ್ನೆಲೆಯಲ್ಲಿ ಕೆಲವೊಂದು ಸಲಹೆ ಸೂಚನೆ ನೀಡಿದರು.ಟ್ರಸ್ಟ್ ಕಾರ್ಯದರ್ಶಿ ವಿಲಾಸ ಬದಾಮಿ, ಜಂಟಿ ಕಾರ್ಯದರ್ಶಿ ವಿಲಾಸ ಜೋಶಿ, ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ಆನಂದ ಕುಲಕರ್ಣಿ, ಅನುಶ್ರೀ ದೇಶಪಾಂಡೆ, ರಾಜೇಶ್ ತಳೆಗಾಂವ, ಅಜಿತ್ ಲೋಕೂರು, ನಾರಾಯಣ ಬಾಗಲಕೋಟ, ಉಪೇಂದ್ರ ಬಾಜಿಕರ, ಅರವಿಂದ ತೇಲಂಗ್, ಪ್ರಹ್ಲಾದ್ ಜೋಶಿ ಮುಂತಾದವರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ್ ಪಂಡಿತ್ ಅವರು ಟ್ರಸ್ಟಗೆ ದೇಣಿಗೆ ಚೆಕ್ ನೀಡಿದರು. ಅದನ್ನು ಟ್ರಸ್ಟ ಪದಾಧಿಕಾರಿಗಳು ಸ್ವೀಕರಿಸಿದರು.