18 ರಂದು ಹೆದ್ದಾರಿ ತಡೆಗೆ ತೀರ್ಮಾನ

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ನಿತ್ಯ ಏಳು ತಾಸು ವಿದ್ಯುತ್ ಪೂರೈಕೆ, ರಾತ್ರಿ ವೇಳೆ ಸಿಂಗಲ್ ಫೇಸ್ ನಲ್ಲಿ ವಿದ್ಯುತ್ ನೀಡದಿದ್ದರೆ ಅಕ್ಟೋಬರ್ 18 ರಂದು ಹೆದ್ದಾರಿ ತಡೆ ಚಳವಳಿ ನಡೆಸುವುದಾಗಿ ರೈತ ಸಂಘ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಜಿಲ್ಲಾಧಿಕಾರಿ ದಿವ್ಯಾಪ್ರಭು ಗಮನಕ್ಕೆ ತಂದ ರೈತರು ಕನ್ನಡಪ್ರಭ ವಾರ್ತೆ ಚಿತ್ರದುರ್ಗ ನಿತ್ಯ ಏಳು ತಾಸು ವಿದ್ಯುತ್ ಪೂರೈಕೆ, ರಾತ್ರಿ ವೇಳೆ ಸಿಂಗಲ್ ಫೇಸ್ ನಲ್ಲಿ ವಿದ್ಯುತ್ ನೀಡದಿದ್ದರೆ ಅಕ್ಟೋಬರ್ 18 ರಂದು ಹೆದ್ದಾರಿ ತಡೆ ಚಳವಳಿ ನಡೆಸುವುದಾಗಿ ರೈತ ಸಂಘ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ನೇತೃತ್ವದ ರೈತರು ಗುರುವಾರ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರನ್ನು ಭೇಟಿ ಮಾಡಿ ಅಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಚರ್ಚಿಸಿತು. ಏಳು ತಾಸು ವಿದ್ಯುತ್ ಬದಲಾಗಿ ನಾಲ್ಕು ತಾಸು ನೀಡಲಾಗುತ್ತಿದ್ದು ಅದೂ ಕೂಡಾ ಅತ್ಯಂತ ಕಳಪೆಯಾಗಿದೆ. ಗಂಟೆಗೆ ಹತ್ತಾರು ಬಾರಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿರುವುದರಿಂದ ಮೋಟಾರ್‌ ಪಂಪ್‌ಗಳು ಸುಟ್ಟು ಹೋಗುತ್ತಿವೆ. ಮೊದಲೇ ನೊಂದಿರುವ ರೈತ ಸುಟ್ಟ ಮೋಟಾರು ಪಂಪುಗಳಿಗೆ ಮತ್ತೆ ಬಂಡವಾಳ ಹಾಕಬೇಕೆ ಎಂದು ಪ್ರಶ್ನಿಸಿದರು. ಸಿಂಗಲ್ ಫೇಸ್ ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವುದರಿಂದ ತೋಟದ ಮನೆಯಲ್ಲಿ ವಾಸಿಸುವ ರೈತರಿಗೆ ತೊಂದರೆ ಆಗಿದೆ. ವಿಷ ಜಂತುಗಳ ಭೀತಿ ಎದುರಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಎಂದಿನಂತೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯಾಪ್ರಭು ಈ ಬಗ್ಗೆ ಬೆಸ್ಕಾಂ ಮೇಲಧಿಕಾರಿಗಳ ಬಳಿ ಮಾತನಾಡುವ ಭರವಸೆ ನೀಡಿದರು. ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಬ್ಯಾಡರಹಳ್ಳಿ ಶಿವಕುಮಾರ್ ಈ ವೇಳೆ ಉಪಸ್ಥಿತರಿರು.

Share this article