ಸವಣೂರಿನಲ್ಲಿ ದಾರ್ಶನಿಕರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

KannadaprabhaNewsNetwork |  
Published : Mar 29, 2025, 12:36 AM IST
ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಭರತರಾಜ್ ಕೆ.ಎನ್. ಮಾತನಾಡಿದರು. | Kannada Prabha

ಸಾರಾಂಶ

ಏ. 2ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾ ಭವನದಲ್ಲಿ ದಾಸೀಮಯ್ಯ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣ ಸಮಾರಂಭ ಆಯೋಜನೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು.

ಸವಣೂರು: ದಾರ್ಶನಿಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನೇಕಾರ ಸಮುದಾಯದ ವಿವಿಧ ಸಮಾಜದ ಪ್ರಮುಖರು ಹೆಚ್ಚಿನ ಆಸಕ್ತಿ ತೋರುತ್ತಿರುವದು ಸಂತಸ ಸಂಗತಿಯಾಗಿದೆ ಎಂದು ತಹಸೀಲ್ದಾರ್ ಭರತರಾಜ್ ಕೆ.ಎನ್. ತಿಳಿಸಿದರು.ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ದೇವರ ದಾಸೀಮಯ್ಯ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಏ. 2ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾ ಭವನದಲ್ಲಿ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣ ಸಮಾರಂಭ ಆಯೋಜನೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು. ಸಮಾಜ ಪ್ರಮುಖರ ಆಸಕ್ತಿಯಂತೆ ಬುಧವಾರ ಪೇಟೆಯ ರಾಮಲಿಂಗೇಶ್ವರ ಹಾಗೂ ಈಶ್ವರ ದೇವಸ್ಥಾನದಿಂದ ವಿವಿಧ ವಾದ್ಯ ವೈಭವ ಹಾಗೂ ಸುಮಂಗಲಿಯರಿಂದ ಪೂರ್ಣಕುಂಭದೊಂದಿಗೆ ಶಿವಶರಣ ದೇವರದಾಸೀಮಯ್ಯನವರ ಭಾವಚಿತ್ರ ಮೆರವಣಿಗೆ ಚಾಲನೆಗೊಂಡು, ಸಮಾರಂಭ ಸ್ಥಳಕ್ಕೆ ಸಂಪನ್ನಗೊಳಿಸಲಾಗುವುದು.

ಪ್ರತಿ ಇಲಾಖೆ ಅಧಿಕಾರಿಗಳು ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ದೇವಾಂಗ ಸಮಾಜದ ಅಧ್ಯಕ್ಷ ಈರಣ್ಣ ಗುಡಿಸಾಗರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜಯಂತಿ ಆಚರಣೆಗೆ ಘೋಷಿಸಿರುವ ಅನುದಾನ ಬಿಡುಗಡೆಗೊಂಡಿಲ್ಲ. ಹೀಗೆ ಮುಂದುವರಿದಲ್ಲಿ ಸರ್ಕಾರದ ಹೆಸರಲ್ಲಿನಲ್ಲಿ ದಾರ್ಶನಿಕರ ಜಯಂತಿ ಆಚರಣೆ ಅವಶ್ಯವಾಗಿರುವುದಿಲ್ಲ. ಸಮಾಜದವರು ಸೇರಿ ಸಮಾರಂಭ ಆಯೋಜನೆ ಅನಿವಾರ್ಯವಾಗಲಿದೆ ಎಂದರು.ಸಿಡಿಪಿಒ ಉಮಾ ಕೆ.ಎಸ್., ಕೃಷಿ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ಪುರಸಭೆ ವ್ಯವಸ್ಥಾಪಕ ಮಹೇಶ ದೊಡ್ಡಣ್ಣನವರ, ವಿವಿಧ ಇಲಾಖೆ ಅಧಿಕಾರಿಗಳು, ಪ್ರಮುಖರಾದ ಚನ್ನಪ್ಪಗೌಡ ಗುಡಿಸಾಗರ, ಈರಣ್ಣಗೌಡ ಗುಡಿಸಾಗರ, ರಮೇಶಗೌಡ ಗುಡಿಸಾಗರ, ಸಂತೋಷ ಗುಡಿಸಾಗರ, ದೇವಾಂಗ ಸಮಾಜದ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು. ಇಂದಿನಿಂದ ಹೆಡಿಯಾಲ ಶ್ರೀದುಂಡಿಬಸವೇಶ್ವರ ಜಾತ್ರೆ ಮಹೋತ್ಸವ ಆರಂಭ

ರಾಣಿಬೆನ್ನೂರು: ತಾಲೂಕಿನ ಹೆಡಿಯಾಲ ಗ್ರಾಮದ ಆರಾಧ್ಯದೈವ ಶ್ರೀದುಂಡಿಬಸವೇಶ್ವರ ಜಾತ್ರಾ ಮಹೋತ್ಸವವು ಮಾ. 29ರಿಂದ ಏ. 1ರ ವರೆಗೆ ನಡೆಯಲಿದೆ. ಮಾ. 29ರಂದು ದೇವರಿಗೆ ಕಂಕಣ ಧಾರಣೆ ಮೂಲಕ ಜಾತ್ರೆಗೆ ಚಾಲನೆ ದೊರೆಯಲಿದೆ. ಮಾ. 30ರಂದು ಹೂವಿನ ತೇರು, ಪಲ್ಲಕ್ಕಿ ಉತ್ಸವ, ಮಾ. 31ರಂದು ದೊಡ್ಡ ರಥೋತ್ಸವ ನಡೆಯಲಿದೆ. ಏ. 1ರಂದು ಓಕುಳಿ ಹಾಗೂ ರಾಜ್ಯಮಟ್ಟದ ಮುಕ್ತ ಭಜನಾ ಸ್ಪರ್ಧೆ ನಡೆಯಲಿದೆ.ಮಂಗಳವಾರ ಸಂಜೆ 5ಕ್ಕೆ ಭಜನಾ ಸ್ಪರ್ಧೆ ಆರಂಭವಾಗಲಿದ್ದು, ಮೊದಲ ಬಹುಮಾನ ₹30000 ನಗದು, ಟ್ರೋಫಿ, ದ್ವಿತೀಯ ಬಹುಮಾನ ₹20000 ನಗದು, ಟ್ರೋಫಿ, ತೃತೀಯ ಬಹುಮಾನ ₹10000 ನಗದು, ಟ್ರೋಫಿ, ಚತುರ್ಥ ಬಹುಮಾನ ₹8000 ನಗದು, ಟ್ರೋಫಿ, ಪಂಚಮ ಬಹುಮಾನ ₹5000 ನಗದು, ಟ್ರೋಫಿ ಇರಲಿದೆ.ಪ್ರವೇಶ ಶುಲ್ಕ ₹2000. ಒಂದು ತಂಡಕ್ಕೆ 10 ನಿಮಿಷ ಕಾಲಾವಕಾಶವಿದ್ದು, ಒಂದು ತಂಡದಲ್ಲಿ 8ರಿಂದ 10 ಜನರು ಮಾತ್ರ ಪಾಲ್ಗೊಳ್ಳಬೇಕು. ತಂಡ ಸದಸ್ಯರ ವೇಷಭೂಷಣಕ್ಕೂ ಅಂಕವಿದ್ದು, ಒಂದು ತಂಡದಲ್ಲಿ ಭಾಗವಹಿಸಿದವರು ಮತ್ತೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿಲ್ಲ. ತತ್ವಪದ, ವಚನಗಳು, ಕೈವಲ್ಯಪದ, ದಾಸರ ಪದಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸ್ಪರ್ಧೆಯಲ್ಲಿ ಬಳಸುವಂತಿಲ್ಲ. ಹೆಸರು ನೋಂದಾಯಿಸಲು ಮೊ. 9901919175, 9731744380, 9740097521, 9845904727, 9008322083, 9740572155 ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ