-ವಡಗೇರಾದಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ
-----ಕನ್ನಡಪ್ರಭ ವಾರ್ತೆ ವಡಗೇರಾ
ರೈತರು ತಮ್ಮ ಜಮೀನಿನು ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಜಮೀನುಗಳು ವಂಚನೆಯಾಗದಂತೆ ದಾಖಲೆಗಳ ಸೂಕ್ತ ಭದ್ರತೆಗೆ ಸರ್ಕಾರ ದಾಖಲೆಗಳ ಡಿಜಿಟಲೀಕರಣಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆರಂಭಿಸಲಾದ ತಾಲೂಕು ಕಚೇರಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ಅಂಗೈಯಲ್ಲಿಯೆ ಸುಲಭವಾಗಿ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡಿಯಬಹುದಾಗಿದೆ. ಈ ಮೊದಲು ರೈತರು ತಮ್ಮ ಜಮೀನು ದಾಖಲೆಗಳಲ್ಲಿ ಮೋಸ, ವಂಚನೆ ಆಗುತ್ತಿದ್ದವು. ಅದನ್ನು ತಪ್ಪಿಸುವಲ್ಲಿ ರೈತರ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರ ಡಿಜಿಟಿಲೀಕರಣ ಜಾರಿಗೆ ತಂದಿದೆ. ರೈತರ, ಬಡವರ ಪರ ಸರ್ಕಾರ ಎಂದ ಅವರು ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್ ಮಾತನಾಡಿ, 1955ರಿಂದ ಇಲ್ಲಿಯವರೆಗೂ ಇರುವ ಎಲ್ಲಾ ಹಳೆಯ ದಾಖಲೆಗಳನ್ನುಗಣಿಕೃತ ಮಾಡಲಾಗುತ್ತಿದೆ. ಕಡತಗಳನ್ನು ಹಲವು ಭಾಗಗಳಾಗಿ ವಿಂಗಡಿಸಿ ಅಂದಾಜು 2ಲಕ್ಷ ಪುಟಗಳಿರುವ ಭೂಮಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಕಾರ್ಯವು ಮುಗಿಯಲಿದೆ ಎಂದು ತಿಳಿಸಿದರು.
ಗ್ರೇಡ್ -2 ತಹಸೀಲ್ದಾರ್ ಪ್ರಕಾಶ್ ಹೊಸಮನಿ, ಉಪ ತಹಸೀಲ್ದಾರ್ ಸಂಗಮೇಶ್ ದೇಸಾಯಿ, ಪಿಎಸ್ಐ ಮೈಬೂಬ್ ಅಲಿ, ಕಂದಾಯ ನಿರೀಕ್ಷಕ ಸಂಜೀವ ಕುಮಾರ್ ಕಾವಲಿ, ಶಿರಸ್ತೇದಾರ ರಾಮುಲು, ಗ್ರಾಮ ಆಡಳಿತ ಅಧಿಕಾರಿ ಸಿದ್ದಣ್ಣಗೌಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರೆಡ್ಡಿ ಬೆನಕನಳ್ಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಕಾಂಗ್ರೆಸ್ ಮುಖಂಡರಾದ ಬಾಶುಮಿಯಾ ನಾಯ್ಕೋಡಿ, ಮಾಜಿ ಎಪಿಎಂಸಿ ತಾಲೂಕಾಧ್ಯಕ್ಷ ಅಯ್ಯಪ್ಪ ಹಾಲಗೇರಾ, ಮರೇಪ್ಪ ಬಿಳಾರ, ಬಸವರಾಜ ನೀಲಹಳ್ಳಿ, ಸಂಗುಗೌಡ ಮಾಲಿ ಪಾಟೀಲ್, ಶಿವರಾಜ್ ಸಾಹುಕಾರ ಬಾಗುರ, ಗೋಪಾಲ್ ನಾಯಕ, ಕರವೇ ಮುಖಂಡ ಶರಣು ಇಟಗಿ, ಲಿಂಗಣ್ಣಗೌಡ ಬೋರೆಡ್ಡಿ, ಬನಶಂಕರಯ್ಯ ಸ್ವಾಮಿ, ಅಬ್ದುಲ್ ಚಿಗಾನೂರ್, ಅರವಿಂದ್ ವರಿಕೇರಿ, ಶರಣು, ಬಸನಗೌಡ ಜಡಿ, ಮಲ್ಲಪ್ಪ ಮಾಗನೂರ, ಶರೀಪ್ ಕುರಿ ಇದ್ದರು.----
ಫೋಟೊ: ವಡಗೇರಾದ ತಹಸೀಲ್ದಾರ್ ಕಚೇರಿಯಲ್ಲಿ ಆರಂಭಿಸಲಾದ ತಾಲೂಕು ಕಚೇರಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಚಾಲನೆ ನೀಡಿ ಮಾತನಾಡಿದರು.18ವೈಡಿಆರ್9