ಮಾಗಡಿ: ಪುರಸಭೆ ಪಕ್ಕದಲ್ಲಿರುವ ಕೆಂಪೇಗೌಡರ ಪ್ರತಿಮೆ ಸ್ಥಳಾಂತರದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷ ಶಿವರುದ್ರಮ್ಮ ವಿಜಯಕುಮಾರ್ ಹೇಳಿದರು.
ಪಟ್ಟಣದ ಹೊಸಪೇಟೆ ವೃತ್ತಕ್ಕೆ ಅಗ್ನಿ ಬನ್ನಿರಾಯ ಸ್ವಾಮಿ ವೃತ್ತ ಎಂದು ನಾಮಕರಣ ಹಾಗೂ ತಿರುಮಲೆ ಮುಖ್ಯರಸ್ತೆಯಲ್ಲಿರುವ ಬಾಲಕೃಷ್ಣ ಉದ್ಯಾನವನ ಹೆಸರನ್ನು ಸಿದ್ದಾರೂಢ ಉದ್ಯಾನವನ ಎಂದು ಮರುನಾಮಕರಣ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಭೆಯ ತೀರ್ಮಾನಿಸಿ ಸರ್ಕಾರದಿಂದ ಆದೇಶ ಪಡೆದು ಕಾನೂನು ಪ್ರಕಾರವೇ ಹೆಸರಿಡಲಾಗುವುದು ಎಂದರು.
ಕಾಮಗಾರಿಗಳು ಪ್ರಗತಿಯಲ್ಲಿ: ಪಟ್ಟಣದಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು ಮುಗಿಯುವ ಹಂತಕ್ಕೆ ಬಂದಿದ್ದು 15ನೇ ಹಣಕಾಸಿನಡಿ ಪ್ರಾರಂಭಸಿರುವ ಕಾಮಗಾರಿಗಳು ಮುಂದುವರಿಯುತ್ತದೆ. ಹೊಸದಾಗಿ ಯಾವುದೇ ಹೆಚ್ಚುವರಿ ಹಣ ಪುರಸಭೆಗೆ ಬಿಡುಗಡೆಯಾಗಿಲ್ಲ. ಪಟ್ಟಣದಲ್ಲಿ ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಪಟ್ಟಣದ ಸ್ವಚ್ಛತೆ ಕುಡಿಯುವ ನೀರು, ಬೀದಿ ದೀಪ ನಿರ್ವಹಣೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೊನೆ ಸಾಮಾನ್ಯ ಸಭೆ:
ಸಭೆಯಲ್ಲಿ ಉಪಾಧ್ಯಕ್ಷ ರಿಯಾಜ್, ಸಾಯಿ ಸಮಿತಿಯ ಅಧ್ಯಕ್ಷ ಶಿವಕುಮಾರ್, ಅನಿಲ್ ಅಶ್ವತ್, ಕೆ.ವಿ.ಬಾಲು, ಎಂ.ಎನ್. ಮಂಜು, ರೇಖಾ ನವೀನ್, ರಹಮತ್, ವಿಜಯ ರೂಪೇಶ್, ಮಮತಾ, ಆಶಾ, ರಮ್ಯಾ ನರಸಿಂಹಮೂರ್ತಿ, ಕಾಂತರಾಜು, ಜಯರಾಂ ಸೇರಿದಂತೆ ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.