ಲಿಂಗಾಯತ ಸಮಾವೇಶ ಯಶಸ್ವಿಗೊಳಿಸಲು ನಿರ್ಧಾರ

KannadaprabhaNewsNetwork |  
Published : May 21, 2024, 12:35 AM IST
ಪೋಟೊ19ಕೆಪಿಎಲ್3: ಕೊಪ್ಪಳ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಜೂ.16 ರಂದು ಆಯೋಜಿಸಲಾಗಿರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶವನ್ನು ಎಲ್ಲ ಲಿಂಗಾಯತರು ಸೇರಿ ಯಶಸ್ವಿಗೊಳಿಸಲು ತಾಲೂಕಾ ಕ್ರೀಡಾಂಗಣದ ವೇದಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಜೂ.16 ರಂದು ಆಯೋಜಿಸಲಾಗಿರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶವನ್ನು ಎಲ್ಲ ಲಿಂಗಾಯತರು ಸೇರಿ ಯಶಸ್ವಿಗೊಳಿಸಲು ತಾಲೂಕಾ ಕ್ರೀಡಾಂಗಣದ ವೇದಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ಪ್ರಾಸ್ತಾವಿಕವಾಗಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ಮಾತನಾಡಿದರು. ಈ ಸಮಾವೇಶದ ಅವಶ್ಯಕತೆ ಮತ್ತು ಭವಿಷ್ಯದ ಮೀಸಲಾತಿಯ ಸೌಲಭ್ಯಗಳ ಕುರಿತಾಗಿ ಚರ್ಚಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಗವಿಸಿದ್ದಪ್ಪ ಕೊಪ್ಪಳ, ಬಸವ ಸಮಿತಿಯ ಬಸವರಾಜ ಬಳ್ಳೊಳ್ಳಿ, ಮುಖಂಡರಾದ ಸೋಮನಗೌಡ ಪಾಟೀಲ, ಶರಣಪ್ಪ ಹ್ಯಾಟಿ, ವಿರೂಪಾಕ್ಷಪ್ಪ ಮುರಳಿ ಮೊದಲಾದವರು ತಮ್ಮ ಅನಿಸಿಕೆ ಹಂಚಿಕೊಂಡರು.

ಶಿವುಕುಮಾರ ಕುಕನೂರು, ದ್ಯಾಮಣ್ಣ ಹಡಪದ, ಸಿದ್ದಪ್ಪ ಹಂಚಿನಾಳ, ಗಾಳೆಪ್ಪ ಕಡೆಮನಿ, ಗಂಗಾವತಿಯ ಸಿದ್ದಣ್ಣ ಜಕ್ಕಲಿ, ಕೃಷ್ಣಪ್ಪ ಕಟ್ಟಿಮನಿ, ಕಿಶೋರಿ ಭೂದನೂರ, ಅಪರ್ಣ ಬಳ್ಳೊಳ್ಳಿ, ಕದಳಿ ವೇದಿಕೆಯ ನಿರ್ಮಲಾ ಬಳ್ಳೊಳ್ಳಿ, ಡಾ. ಸಂಗಮೇಶ ಕಲಹಾಳ, ಛತ್ರಪ್ಪ ಮಡಿವಾಳರ, ಅರ್ಚನಾ ಸಸಿಮಠ, ಯಲ್ಲಪ್ಪ ಕೆ. ಮೇಟಿ, ಬಸವರಾಜ ಕಲ್ಮಂಗಿ, ಎ.ಕೆ. ಮಹೇಶ, ರಾಜಮ್ಮ ಕಾತರಕಿ, ದಾನಪ್ಪ ಶೆಟ್ಟರ್, ಶರಣಬಸನಗೌಡ, ಶೇಖರ ಇಂಗಳದಾಳ, ಗುಡದಪ್ಪ ಹಡಪದ, ರಾಜೇಶ ಸಸಿಮಠ, ಎಂ. ಬಸವರಾಜಪ್ಪ, ರಾಚಪ್ಪ ಮುಂಡರಗಿ, ಸೌಮ್ಯ ನಾಲವಾಡ, ಸಂಗಪ್ಪ ವಣಿಗೇರಿ, ದೇವೀಶ ಗಬ್ಬೂರ, ಅನ್ನಪೂರ್ಣ ಮನ್ನಾಪುರ, ಮಂಜುಳಾ ಹುರಕಡ್ಲಿ, ಸೇರಿದಂತೆ ನೂರಾರು ಸಂಖ್ಯೆಯ ಲಿಂಗಾಯತ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು.

ಜೂ.16ರ ಬೆಳಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸಂಜೆ 5 ಗಂಟೆಗೆ ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ, ಚಿಂತಕಿ ಮೀನಾಕ್ಷಿ ಬಾಳಿ, ಬಸವ ಸಮಿತಿಯ ರಾಜ್ಯಾಧ್ಯಕ್ಷ ಡಾ. ಅರವಿಂದ ಜತ್ತಿ ಲಿಂಗಾಯತ ಜಾಗೃತಿ ಕುರಿತು ಮಾತನಾಡುವರು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನಾಗರಾಜ ಅರಳಿ ಸಮಾವೇಶದ ಅಧ್ಯಕ್ಷತೆ ವಹಿಸುವರು. ಸಾನಿಧ್ಯವನ್ನು ಸಂಡೂರಿನ ವಿರಕ್ತ ಮಠದ ಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ