ಹುಬ್ಬಳ್ಳಿ:
ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಾರ್ಮಿಕ ಸಂಘಟನೆ ಮತ್ತು ಆಮ್ ಆದ್ಮಿ ಪಕ್ಷದ ವತಿಯಿಂದ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ರೈತರು ಎಕರೆಗೆ ₹60ರಿಂದ ₹70 ಸಾವಿರ ಖರ್ಚು ಮಾಡಿದ್ದರೂ ಹಾಕಿದ ಬಂಡವಾಳವೂ ಮರಳಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ''''''''''''''''ಅರೆಬರೆ ಬರಗಾಲ'''''''''''''''' ಇದೆ ಎನ್ನುತ್ತಿದ್ದಾರೆ. ಈ ಕುರಿತು ಸಚಿವ ಸತೀಶ ಜಾರಕಿಹೊಳಿ ಅವರಿಗೂ ಬರ ಘೋಷಣೆಗೆ ಮನವಿ ಮಾಡಲಾಗಿದೆ. ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳನ್ನು ಬರಪೀಡತದಿಂದ ಹೊರಗಿಟ್ಟಿರುವುದು ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.ಒಂದು ವಾರದ ಗಡುವು:
ಸುದ್ದಿಗೋಷ್ಠಿಯಲ್ಲಿ ರಮೇಶ ಬೋಸ್ಲೆ, ಹುಸೇನಭಾಷಾ ತಳೆವಾಡ, ರವಿರಾಜ ಕಂಬಳಿ, ಸತೀಶ ಕಳ್ಳಿಮನಿ, ಶೇಖವ್ವ ಕೊಡತಗಿ, ಮೀನಾಕ್ಷಿ ತುರಮರಿ, ನಾಸೀರಅಹ್ಮದ ಮುಲ್ಲಾ, ನಿಂಗಪ್ಪ ಧಾರವಾಡ ಹಾಗೂ ನಾಗಪ್ಪ ಧಾರವಾಡ ಸೇರಿ ಹಲವರಿದ್ದರು.