ತಾಯಂದಿರ, ಮಕ್ಕಳ ಮರಣ ಪ್ರಮಾಣ ಇಳಿಮುಖ

KannadaprabhaNewsNetwork |  
Published : Oct 17, 2024, 12:06 AM IST
ತಾಯಿ ಹಾಗೂ ಮಕ್ಕಳ ಮರಣ ಕಡಿಮೆ ಆಗಿದೆ ಇದಕ್ಕೆ ಸರ್ಕಾರದ ಯೋಜನೆಗಳು ಸಹಕಾರಿಃ ಶಾಸಕ ಜಿ ಹೆಚ್ ಶ್ರೀನಿವಾಸ್.  | Kannada Prabha

ಸಾರಾಂಶ

Decline in maternal and child mortality

ಕನ್ನಡಪ್ರಭ ವಾರ್ತೆ ತರೀಕೆರೆ

ತಾಯಿ ಹಾಗೂ ಮಕ್ಕಳ ಮರಣ ಕಡಿಮೆ ಆಗಿದೆ. ಇದಕ್ಕೆ ಸರ್ಕಾರದ ಯೋಜನೆಗಳು ಸಹಕಾರಿ ಎಂದು ಶಾಸಕ ಜಿ ಹೆಚ್ ಶ್ರೀನಿವಾಸ್ ಹೇಳಿದ್ದಾರೆ.

ಅವರು, ಸಮೀಪದ ಬೆಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿರುಮೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏಳುವರೆ ಲಕ್ಷ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯ 5 ಲಕ್ಷದಿಂದ ನಿರ್ಮಾಣವಾದ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಇಲಾಖೆ ಹಾಗೂ ನರೇಗಾ ಯೋಜನೆಯಡಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ, ಅಂಗನವಾಡಿ ಸೇವೆಯಿಂದ ಮಕ್ಕಳಿಗೆ ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆ ಹಾಗೂ ಹಾಲು ಸಹಿತ ಪೌಷ್ಟಿಕ ಆಹಾರ ವಿತರಿಸಿರುವುದರಿಂದ ಹಾಗೂ ಆರೋಗ್ಯ ತಪಾಸಣೆಯ ಕಾರಣದಿಂದ ತಾಯಂದಿರ ಹಾಗೂ ಮಕ್ಕಳ ಮರಣ ಪ್ರಮಾಣ ಇಳಿಮುಖವಾಗಿರುವುದು ಒಳ್ಳೆಯ ಸಂಗತಿ,

ಇದರಿಂದ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ದೂರವಾಗಿಸಲು ಸಹಕಾರಿ. ಅಂಗನವಾಡಿ ಕೇಂದ್ರದಲ್ಲಿ ಸೇವೆ ಉತ್ತಮವಾಗಿದ್ದರೂ ಇಂಗ್ಲಿಷ್ ಶಿಕ್ಷಣ ವ್ಯಾಮೋಹದಿಂದ ಮಕ್ಕಳು ಖಾಸಗಿ ಕಾನ್ವೆಂಟ್‌ ಗಳಿಗೆ ದಾಖಲಾಗುತ್ತಿರುವುದು ಕಂಡು ಬಂದಿದೆ ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಭಜಂತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಎಂಸಿ ಹಳ್ಳಿ ಗ್ರಾಮ ಪಂಚಾಯಿತಿಯ ಕೆಂಗಯ್ಯನ ಕ್ಯಾಂಪ್ ಅಂಗನವಾಡಿಯನ್ನು ಸಹ ಉದ್ಘಾಟಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತ್ ಕುಮಾರ್ ನಾಯ್ಕ, ಉಪಾಧ್ಯಕ್ಷೆ ಶ್ರುತಿ ರಘು ಕುಮಾರ್, ಸಿ ಡಿ ಪಿ ಓ ಚರಣ್ ರಾಜ್ ಮೇಲ್ವಿಚಾರಕಿ ಸುನಿತಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-------------

ಫೋಟೋ

16ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿರುಮೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತ್ ಕುಮಾರ್ ನಾಯ್ಕ, ಉಪಾಧ್ಯಕ್ಷೆ ಶ್ರುತಿ ರಘು ಕುಮಾರ್, ಸಿಡಿಪಿಒ ಚರಣ್ ರಾಜ್ ಮತ್ತಿತ್ರರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ