ಓದುಗರ ಸಂಖ್ಯೆ ಕ್ಷೀಣಿಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ: ಕಾಳಿಮಾಡ ಮೋಟಯ್ಯ

KannadaprabhaNewsNetwork |  
Published : Apr 04, 2026, 02:45 AM IST
ಚಿತ್ರ :  25ಎಂಡಿಕೆ5 : ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಕಳೆದ 32 ವರ್ಷಗಳಿಂದ ನಿರಂತರವಾಗಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿಕೆ ಹಾಗೂ ಬೆಳವಣಿಗೆಗೆ ಶ್ರಮಿಸುತ್ತಿರುವುದು ಸುಲಭದ ಕೆಲಸವಲ್ಲ. ಅದರಲ್ಲೂ ಸರ್ಕಾರದ ಯಾವುದೇ ಅನುದಾನ ಹಾಗೂ ಸಹಕಾರವಿಲ್ಲದೆ ಕೊಡವ ಸಾಹಿತ್ಯ ಲೋಕದ ಬೆಳವಣಿಗೆಯಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವ ಕೊಡವ ತಕ್ಕ್ ಎಳ್ತ್''''''''ಕಾರಡ ಕೂಟದ ಕಾರ್ಯ ಶ್ಲಾಘನೀಯ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ 32 ವರ್ಷಗಳಿಂದ ನಿರಂತರವಾಗಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿಕೆ ಹಾಗೂ ಬೆಳವಣಿಗೆಗೆ ಶ್ರಮಿಸುತ್ತಿರುವುದು ಸುಲಭದ ಕೆಲಸವಲ್ಲ. ಅದರಲ್ಲೂ ಸರ್ಕಾರದ ಯಾವುದೇ ಅನುದಾನ ಹಾಗೂ ಸಹಕಾರವಿಲ್ಲದೆ ಕೊಡವ ಸಾಹಿತ್ಯ ಲೋಕದ ಬೆಳವಣಿಗೆಯಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವ ಕೊಡವ ತಕ್ಕ್ ಎಳ್ತ್''''''''''''''''ಕಾರಡ ಕೂಟದ ಕಾರ್ಯ ಶ್ಲಾಘನೀಯ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಬಣ್ಣಿಸಿದರು.ಕೊಡವ ತಕ್ಕ್ ಎಳ್ತ್''''''''''''''''ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ನಾಗರಿಕ ಯುಗದಲ್ಲಿ ಓದುಗರು ಕಡಿಮೆಯಾಗಿರುವುದರಿಂದ ಸಾಹಿತ್ಯ ಲೋಕ ಕ್ಷೀಣಿಸುತ್ತಿದೆ. ಇದು ಒಳ್ಳೆಯ ಲಕ್ಷಣವಲ್ಲವೆಂದು ಕಳವಳ ವ್ಯಕ್ತಪಡಿಸಿದ ಅವರು, ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಭಂಡಾರವನ್ನು ಸ್ಥಾಪಿಸಿದ್ದು ಕೊಡವ ಭಾಷೆಯ ಹಾಗೂ ಕೊಡಗಿಗೆ ಸಂಬಂಧಿಸಿದ 1200 ಪುಸ್ತಕಗಳ ಸಂಗ್ರಹವಿದೆ, ಆಸಕ್ತರು ಕಚೇರಿ ಸಮಯದಲ್ಲಿ ಪುಸ್ತಕಗಳನ್ನು ಪಡೆದು ಓದಿದ ನಂತರ ಹಿಂತಿರುಗಿಸಬಹುದು. ಎಲ್ಲರೂ ಪುಸ್ತಕ ಓದಿ ಕೊಡವ ಸಾಹಿತ್ಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.ಮತ್ತೋರ್ವ ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಓದುಗರು ಹಾಗೂ ಬರಹಗಾರರು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಕೊಡವ ತಕ್ಕ್ ಎಳ್ತ್''''''''''''''''ಕಾರಡ ಕೂಟವು ಲೇಖಕರನ್ನು ಪ್ರೋತ್ಸಾಹಿಸಿ ಇಷ್ಟೊಂದು ಪುಸ್ತಕಗಳನ್ನು ಹೊರತಂದಿರುವ ಕಾರ್ಯ ಪ್ರಶಂಸನೀಯವಾದದ್ದು. ಹಾಗೂ ಪುಸ್ತಕ ಪ್ರಕಟಣೆಗೆ ಹಣದಾನ ನೀಡುತ್ತಿರುವ ದಾನಿಗಳ ಅಭಿಮಾನ ಮೆಚ್ಚುವಂತದ್ದು. ಕೂಟದಿಂದ ಕೊಡವ ಪಡೆಬೀರರ ಪುಸ್ತಕಗಳು ಹೆಚ್ಚಾಗಿ ಪ್ರಕಟಗೊಳ್ಳಲಿ. ನಾವೆಲ್ಲರೂ ಪುಸ್ತಕ ಓದಿ, ವಿಮರ್ಶೆ ಮಾಡಿ ಬರಹಗಾರರ ಸಂಖ್ಯೆ ಹೆಚ್ಚಾಗಲು ಸಹಕರಿಸುವ ಎಂದರು.ದಾನಿಗಳಾದ ಅಂಜಪರವಂಡ ಸನ್ನಿ ತಮ್ಮಯ್ಯ ಮಾತನಾಡಿ ಕೊಡವ ಸಾಹಿತ್ಯಾಭಿಮಾನಿಗಳು ಹೆಚ್ಚು ಸಾಹಿತ್ಯ ಪುಸ್ತಕ ಪ್ರಕಟಿಸಲು ಹಾಗೂ ಇಂತಹ ಸಾಹಿತ್ಯ ಪರ ಕಾರ್ಯ ನಡೆಸಲು ಮುಂದೆ ಬರಬೇಕು. ತಮ್ಮ ಮಕ್ಕಳಿಗೂ ಸಾಹಿತ್ಯಾಭಿಮಾನ ಬೆಳೆಸಲು ಪ್ರಯತ್ನಿಸಬೇಕು. ಕೊಡವ ಭಾಷೆ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಎಲ್ಲಾರೂ ಭಾಗವಹಿಸುವ ಎಂದರು.ಮತ್ತೋರ್ವ ದಾನಿ ಮಲ್ಲಮಡ ಶ್ಯಾಮಲ ಸುನಿಲ್, 198ನೆ ಪುಸ್ತಕ ಪ್ರಕಟಣೆಯ ದಾನಿ ಪೊನ್ನೊಲತಂಡ ಸೋಮಣ್ಣ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ''''''''''''''''ಕೂಟ''''''''''''''''ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಕೊಡವ ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವ ಹಾಗೂ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ನಿಟ್ಟಿನ ಪ್ರಯತ್ನಕ್ಕೆ ಪೂರಕವಾಗಿ ಹೆಚ್ಚು ಸಾಹಿತ್ಯ ಪುಸ್ತಕಗಳನ್ನು ಹೊರತರಬೇಕಿದ್ದು, ''''''''''''''''ಕೂಟ'''''''''''''''' ಈ ನಿಟ್ಟಿನಲ್ಲಿ ವಿವಿಧ ಸಾಹಿತ್ಯ ಪ್ರಕಾರಗಳ ಹೆಚ್ಚು ಪುಸ್ತಕಗಳನ್ನು ಹೊರತರಲು ಪ್ರಯತ್ನಿಸುತ್ತಿದೆ. ನಮ್ಮ ಈ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ 197ನೆ ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ, 198ನೆ ಪುಸ್ತಕದ ಲೇಖಕಿ ನೂರೇರ ಸರಿತ ಉತ್ತಯ್ಯ, ಹಿರಿಯರಾದ ಡಾ. ಕಾಳಿಮಾಡ ಶಿವಪ್ಪ, ಕಾಟಿಮಡ ಜಿಮ್ಮಿ ಅಣ್ಣಯ್ಯ, ಪಾರುವಂಗಡ ಸನ್ನಿ ಮಾಸ್ಟರ್, ಇಟ್ಟೀರ ಬಿದ್ದಪ್ಪ, ಕಾಟಿಮಡ ಡಿಕ್ಕಿ ಸೇರಿದಂತೆ ನೂರಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.

ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಕಳ್ಳಿಚಂಡ ದೀನ ಪ್ರಾರ್ಥಿಸಿದರು. ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಸ್ವಾಗತಿಸಿದರು. ಕೊಡವ ತಕ್ಕ್ ಎಳ್ತ್''''''''''''''''ಕಾರಡ ಕೂಟದ ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ ಹಾಗೂ ಸದಸ್ಯೆ ಚಿಮ್ಮಚ್ಚೀರ ಪವಿತ ರಜನ್ ಲೇಖಕಿಯರ ಹಾಗೂ ದಾನಿಗಳ ಪರಿಚಯ ಮಾಡಿದರು. ಕೂಟದ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ನಿರೂಪಿಸಿದರು. ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ವರ್ಷದಲ್ಲಿ 2809 ಜನ ರೈತರ ಸಾವು: ಕೇಂದ್ರ ಸಚಿವ ಸೋಮಣ್ಣ
ಕಾಂಗ್ರೆಸ್‌ನಷ್ಟು ಲಜ್ಜೆಗೇಡಿ ಸರ್ಕಾರ ನಾನು ನೋಡಿಲ್ಲ: ಸಂಸದ ಜಿಗಜಿಣಗಿ