ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮತಗಟ್ಟೆಗಳ ಸೆಳೆಯಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 40 ಸಖಿ ಮತಗಟ್ಟೆ, 8 ವಿಶೇಷಚೇತನ ನಿರ್ವಹಣೆ, 8 ಯುವಜನ ನಿರ್ವಹಣೆಯ ಮತಗಟ್ಟೆಗಳು, 8 ಧ್ಯೇಯ ಆಧಾರಿತ ಮತಗಟ್ಟೆ ಹಾಗೂ 8 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಸ್ಟರಿಂಗ್ ಕೇಂದ್ರಗಳು :111-ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರಕ್ಕೆ ಎಚ್‍ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ, 112-ಭದ್ರಾವತಿ ಮತಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಭದ್ರಾವರಿ, 113-ಶಿವಮೊಗ್ಗ ಮತಕ್ಷೇತ್ರಕ್ಕೆ ಸಹ್ಯಾದ್ರಿ ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಕಾಲೇಜು, 114-ತೀರ್ಥಹಳ್ಳಿಗೆ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ತೀರ್ಥಹಳ್ಳಿ, 115- ಶಿಕಾರಿಪುರ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, 116-ಸೊರಬ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ ಹಾಗೂ 117-ಸಾಗರ ಮತಕ್ಷೇತ್ರಕ್ಕೆ ಸರ್ಕಾರಿ ಜ್ಯೂನಿಯರ್ ಪಿಯು ಕಾಲೇಜು, ಸಾಗರ ಮಸ್ಟರಿಂಗ್ ಕೇಂದ್ರಗಳಾಗಿವೆ.
ನಗರದ ಎಚ್ ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮೈದಾನ ಸೇರಿ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗಳು ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್‍ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡು ನಿಯೋಜಿಸಲಾದ ಬಸ್‍ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿದರು.
ಯುವ, ಮಹಿಳಾ ಮತದಾರರ ಸೆಳೆಯಲು ಹೊಸರೂಪ
ಶಿವಮೊಗ್ಗ: ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ವಿವಿಧ ಸಂಸ್ಥೆಗಳು ಕೈ ಜೋಡಿಸಿದ್ದು, ನಗರದ ಹೋಟೆಲ್ ಶುಭಂ ಸಂಸ್ಥೆಯು ಚುನಾವಣಾ ದಿನ ಮತದಾನ ಮಾಡಿದ ನಾಗರಿಕರಿಗೆ ಉಚಿತ ಉಪಾಹಾರ ನೀಡಲು ಸಜ್ಜಾಗಿದೆ.
ಮತ ಚಲಾಯಿಸಿ ಹಣ ಉಳಿಸಿ:
ಮಂಗಳವಾರ ಮತದಾನ ಮಾಡಿದವರಿಗೆ ಶ್ರೀನಿಧಿ ಸಿಲ್ಕ್ಸ್ ಆ್ಯಂಡ್ ಟೆಕ್ಸ್‌ಟೈಲ್ ಕೊಡುಗೆ ನೀಡುತ್ತಿದ್ದು, ಮತದಾನ ಮಾಡಿದವರು ಮಧ್ಯಾಹ್ನ 2ರೊಳಗೆ ಶ್ರೀನಿಧಿ ಸಿಲ್ಕ್ಸ್ ಆ್ಯಂಡ್ ಟೆಕ್ಸ್‌ಟೈಲ್‌ನಲ್ಲಿ ಮತದಾನ ಗುರುತು ತೋರಿಸಿ ಖರೀದಿ ಮಾಡಿದರೆ ಖರೀದಿ ಮೇಲೆ ಶೇ.15ರಷ್ಟು ರಿಯಾಯಿತಿ ನೀಡಲಾಗುವುದು. ಇದು ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಮತದಾರರಿಗೆ ಮಾತ್ರ ಅನ್ವಯವಾಗಲಿದೆ ಎಂದು ಟೆಕ್ಸ್‌ಟೈಲ್ ಮಾಲೀಕರು ತಿಳಿಸಿದ್ದಾರೆ.ಆರೋಗ್ಯ ತಪಾಸಣೆಗಳ ಮೇಲೆ ವಿಶೇಷ ರಿಯಾಯಿತಿ
ಮಂಗಳವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಆರೋಗ್ಯ ತಪಾಸಣೆಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಡಯಗ್ನೋಸ್ಟಿಕ್ ಪರೀಕ್ಷೆಗಳ ಮೇಲೆ ಶೇ.15 ಮತ್ತು ಎಲ್ಲಾ ರೀತಿಯ ಆರೋಗ್ಯ ತಪಾಸಣಾ ಪ್ಯಾಕೇಜ್‍ಗಳ ಮೇಲೆ ಶೇ.10 ರಷ್ಟು ರಿಯಾಯಿತಿ ಹಾಗೂ ಉಚಿತ ನೊಂದಣಿಯನ್ನು ಪಡೆಯಬಹುದಾಗಿದೆ. ನಿಮ್ಮ ಮತ ಅತ್ಯಮೂಲ್ಯ, ಮತದಾನ ನಮ್ಮೆಲ್ಲರ ಹಕ್ಕು ಸಾರ್ವತ್ರಿಕ ಗರಿಷ್ಠ ಪ್ರಮಾಣದ ಮತದಾನಕ್ಕೋಸ್ಕರ ಆಸ್ಪತ್ರೆ ವತಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಮೊ.ಸಂ.9513915370 ನ್ನು ಸಂಪರ್ಕಿಸಬಹುದು.