53ನೇ ವರ್ಷ ಆಯುಧಪೂಜೆ ಅಲಂಕಾರ ಸ್ಪರ್ಧೆ ಬಹುಮಾನ ವಿತರಣೆ

KannadaprabhaNewsNetwork |  
Published : Oct 14, 2024, 01:22 AM IST
ಚಿತ್ರ.5: ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಯಲ್ಲಿ  ಜೀವನ್ ಎ.ಪ್ರಥಮ ಸ್ಥಾನ ಪಡೆದಿರುವುದು. | Kannada Prabha

ಸಾರಾಂಶ

ಅದ್ಧೂರಿ ಆಯುಧ ಪೂಜೆಯ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿತ್ತು. ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ವಾಹನ ಚಾಲಕರ ಸಂಘದ 53ನೇ ವಾರ್ಷಿಕೋತ್ಸವ ಅದ್ಧೂರಿ ಆಯುಧ ಪೂಜಾ ಸಮಾರಂಭದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಆಯುಧ ಪೂಜೆ ಸಮಾರಂಭ ಪ್ರಯುಕ್ತ ಏರ್ಪಡಿಸಲಾಗಿದ್ದ ವರ್ಕ್ ಶಾಪ್ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪ್ರಭ ಆಟೋವರ್ಕ್ಸ್, ದ್ವಿತೀಯ ಶಬರಿ ಆಟೋ ವರ್ಕ್ಸ್, ಪ್ರದೀ ಪಂಚರಿಂಗ್ ತೃತೀಯ ಬಹುಮಾನ ಪಡೆದಿದೆ.

ಕಚೇರಿಗಳ ಅಲಂಕಾರ ಸ್ಪರ್ಧೆಯಲ್ಲಿ ಕೆ. ಇ.ಬಿ. ಪ್ರಥಮ, ಪೊಲೀಸ್ ಠಾಣೆ ದ್ವಿತೀಯ ಮತ್ತು ಗ್ರಾಮ ಪಂಚಾಯಿತಿ ಕಚೇರಿ ತೃತೀಯ ಬಹುಮಾನ ಗಳಿಸಿದೆ.

ಅಂಗಡಿ ಅಲಂಕಾರ ಸ್ಪರ್ಧೆಯಲ್ಲಿ ಶ್ರೀಮಾನ್ ಎಂಟರ್ ಪ್ರೈಸಸ್ ಪ್ರಥಮ, ಹೆಮ್ಮರ್ ಬಹುಮಾನವನ್ನು ಪಡೆದುಕೊಂಡಿದ್ದರೆ ಅಶ್ರಫ್ ಸ್ಟೂಡೆಂಟ್ ಕಾರ್ನರ್ ತೃತೀಯ ಬಹುಮಾನಕ್ಕೆ ಭಾಜನವಾಗಿದೆ.

ಚಿಕ್ಕ ವಾಹನ ಅಲಂಕಾರ ಸ್ಪರ್ಧೆಯಲ್ಲಿ ಆನಂದ ಪ್ರಥಮ, ನಾಗಪ್ಪ ದ್ವಿತೀಯ ಮತ್ತು ನಿಕಿಲ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಯಲ್ಲಿ ಜೀವನ್ ಎ.ಪ್ರಥಮ, ಜೀವನ್ (ಅವಲಸ್ )ದ್ವಿತೀಯ, ಸಾಬು ತೃತೀಯ ಬಹುಮಾನ ಗಳಿಸಿಕೊಂಡರು.

ಮಕ್ಕಳ ಮಂಟಪ ಸ್ಪರ್ಧೆಯಲ್ಲಿ ಪಂಪ್ ಬಡಾವಣೆ ಮಕ್ಕಳು ಪಡೆದುಕೊಂಡರು.

ವಿಜೇತರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಸೇರಿದಂತೆ ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಉಪಾಧ್ಯಕ್ಷ ಅಬ್ದುಲ್ಲ (ಅವುಲಕುಟ್ಟಿ), ಕಾರ್ಯದರ್ಶಿ ಎಂ.ಐ.ರಿಜ್ವಾನ್, ಸಹಕಾರ್ಯದರ್ಶಿ ಪಿ.ಎಸ್. ರಕ್ಷಿತ್ (ರೀನು), ಖಜಾಂಜಿ ಅನೀಶ್, ಸಂಘಟನಾ ಕಾರ್ಯದರ್ಶಿ ಮುನೀರ್, ಸಿ.ಎ.ಬಸಪ್ಪ, ರಾಜ, ಇನಾಸ್‌ಡಿಸೋಜ, ಇಸ್ಮಾಹಿಲ್(ಕಾಕ್ಕು), ಕೆ.ರವಿ, ಅತೀಕ್, ಸಂದೀಫ್, ಸುರೇಸ, ಅಸೀಸ್, ಅಸ್ಕರ್, ಸೈನುದ್ದೀನ್, ಶಕ್ತಿವೇಲು, ಮೋನು ಸೇರಿದಂತೆ ಮತ್ತಿತರರು ಇದ್ದರು.

PREV

Latest Stories

ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ
ಮಳೆಯ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು: ಪರಿಶೀಲನೆ