ಮುಳಗುಂದ: ಮಕ್ಕಳು ಸಾಂಸ್ಕೃತಿಕ, ಆಟೋಟ ಇನ್ನಿತರ ಚಟುವಟಿಕೆಗೆ ಎಷ್ಟು ಒತ್ತು ಕೊಡಬೇಕು ಅಷ್ಟು ಕೊಟ್ಟು, ಇನ್ನುಳಿದ ಹೆಚ್ಚಿನ ಅವಧಿಯನ್ನು ಕಲಿಕೆಗೆ ನೀಡಬೇಕು ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.
ನಿವೃತ್ತ ಆರ್‌ಟಿಒ ಅಧಿಕಾರಿ ಬಿ.ಡಿ. ಹರ್ತಿ ಮಾತನಾಡಿ, ಶೈಕ್ಷಣಿಕ ವಿಷಯದಲ್ಲಿ ಗದಗ ಜಿಲ್ಲೆ ಇನ್ನೂ ಹಿಂದೆ ಇದೆ, ಶಾಲೆಗಳಲ್ಲಿ ವ್ಯವಸ್ಥೆ ಇದೆ. ಅದೇ ನಿಟ್ಟಿನಲ್ಲಿ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಚಿಂತನೆ ನಡೆಸಬೇಕಾಗಿದೆ. ಮಕ್ಕಳ ಶಿಕ್ಷಣ ನೀಡುವಲ್ಲಿ ಪಾಲಕರ ಸಹಕಾರವೂ ಬೇಕು. ಮಕ್ಕಳು ಶೈಕ್ಷಣಿಕವಾಗಿ ಇನ್ನೂ ಹಚ್ಚು ಪ್ರಗತಿ ಹೊಂದಬೇಕು ಎಂದು ಹೇಳಿದರು.
ಪಪಂ ಮಾಜಿ ಸದಸ್ಯ ಕೆ.ಎಲ್. ಕರಿಗೌಡರ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಉನ್ನತ, ಗುಣಮಟ್ಟದ ಶಿಕ್ಷಣ ನೀಡಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.ಗೌರಮ್ಮ ಬಡ್ನಿ, ಅಶೋಕ ಸೊನಗೋಜಿ, ರಾಮಣ್ಣ ಕಮಾಜಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪುರ, ಷಣ್ಮುಖಪ್ಪ ಬಡ್ನಿ, ಎನ್.ಆರ್. ದೇಶಪಾಂಡೆ, ಫಕ್ಕೀರಯ್ಯ ಅಮೋಘಿಮಠ, ಅಶೋಕ ಹುಣಸಿಮರದ, ಮಹಾಂತಪ್ಪ ನೀಲಗುಂದ, ಎ.ಡಿ. ಮುಜಾವರ, ಹೊನ್ನಪ್ಪ ಜೋಗಿ, ವಿ.ಡಿ. ಕಣವಿ, ಮಲ್ಲಪ್ಪ ಕುಂದಗೋಳ ಇದ್ದರು.