ಅಗ್ರಹಾರಬಾಚಹಳ್ಳಿಯಲ್ಲಿ ಆಂಜನೇಯ ದೇಗುಲ ಲೋಕಾರ್ಪಣೆ

KannadaprabhaNewsNetwork | Published : Nov 11, 2024 11:48 PM

ಸಾರಾಂಶ

ಮಾನವನಿಗೆ ಕಷ್ಟ ಎದುರಾದಾಗ ತಾನು ನಂಬಿರುವ ದೇವರ ಮೊರೆ ಹೋಗುತ್ತಾರೆ. ಪೂಜೆ ಪುನಸ್ಕಾರಗಳಲ್ಲಿ ಮಗ್ನನಾಗಿ ಭಗವಂತನಲ್ಲಿ ತನ್ನ ನಿವೇದನೆ ಸಲ್ಲಿಸುವ ಮೂಲಕ ಸಂಕಷ್ಟದಿಂದ ಪಾರುಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತಾರೆ. ಹೀಗೆ ಕಷ್ಟದಿಂದ ಪಾರಾದ ನಂತರ ತಮ್ಮ ಗ್ರಾಮಗಳಲ್ಲಿ ಭಗವಂತನ ದೇವಾಲಯಗಳನ್ನು ನಿರ್ಮಿಸಿ ಪೂಜಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಅಗ್ರಹಾರಬಾಚಹಳ್ಳಿ (ಬಿ.ಕೋಡಹಳ್ಳಿ)ಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಆಂಜನೇಯಸ್ವಾಮಿ ದೇವಾಲಯವನ್ನು ಲೋಕಾರ್ಪಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಎ.ಪಿ.ಕೇಶವಗೌಡ, ಮಾನಸಿಕ ನೆಮ್ಮದಿಗಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ದೇವರು ಹಾಗೂ ದೇವತೆಗಳನ್ನು ಪೂಜಿಸುವ ಸಂಪ್ರದಾಯ ಪುರಾತನ ಕಾಲದಿಂದಲೂ ಬೆಳೆದುಬಂದಿದೆ ಎಂದರು.

ಮಾನವನಿಗೆ ಕಷ್ಟ ಎದುರಾದಾಗ ತಾನು ನಂಬಿರುವ ದೇವರ ಮೊರೆ ಹೋಗುತ್ತಾರೆ. ಪೂಜೆ ಪುನಸ್ಕಾರಗಳಲ್ಲಿ ಮಗ್ನನಾಗಿ ಭಗವಂತನಲ್ಲಿ ತನ್ನ ನಿವೇದನೆ ಸಲ್ಲಿಸುವ ಮೂಲಕ ಸಂಕಷ್ಟದಿಂದ ಪಾರುಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತಾರೆ. ಹೀಗೆ ಕಷ್ಟದಿಂದ ಪಾರಾದ ನಂತರ ತಮ್ಮ ಗ್ರಾಮಗಳಲ್ಲಿ ಭಗವಂತನ ದೇವಾಲಯಗಳನ್ನು ನಿರ್ಮಿಸಿ ಪೂಜಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎ.ಎಸ್.ರಾಮಚಂದರೇಗೌಡ, ಉಪಾಧ್ಯಕ್ಷ ಜಯರಾಮೇಗೌಡ, ಕಾರ್ಯದರ್ಶಿ ವೆಂಕಟೇಶ, ಖಜಾಂಚಿ ಪ್ರವೀಣ್ ಕುಮಾರ್, ಸಹಕಾರ್ಯದರ್ಶಿ ಎ.ಎಂ.ಚಲುವರಾಜು, ನಿರ್ದೇಶಕರಾದ ಡಿ.ರವಿ, ಎ.ಡಿ.ರಮೇಶ್, ಜ್ಯೋತಿ, ವೆಂಕಟೇಶ, ಪ್ರಕಾಶ, ಎಸ್.ಅಶೋಕ, ಎ.ವಿ.ಶಿವಕುಮಾರ, ಗ್ರಾಮದ ಮುಖಂಡರಾದ ಛೇರ್ಮನ್ ನಾಗೇಗೌಡ, ಹಿಂದ್ಲಟ್ಟಿ ಅಣ್ಣೇಗೌಡ, ಸೆಕ್ರೆಟರಿ ಎ.ಎಸ್.ಪುಟ್ಟಸ್ವಾಮಿಗೌಡ, ಸತ್ತಣ್ಣನ ನಾಗಣ್ಣ, ಲಾಳಿ ಸಂತೋಷ್ ಸೇರಿದಂತೆ ಗ್ರಾಮಸ್ಥರು ವಿವಿಧ ಗ್ರಾಮಗಳ ಭಕ್ತರು ಹಾಜರಿದ್ದರು.ಇಂದು ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಮಳವಳ್ಳಿ:

ಮಳವಳ್ಳಿ ಮತ್ತು ಹಾಡ್ಲಿ ಗ್ರಾಮಗಳ 66/11 ಕೆವಿ ವಿವಿ .ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ನಗರ ಉಪವಿಭಾಗ ವ್ಯಾಪ್ತಿಯ ಗ್ರಾಮಗಳಿಗೆ ನ.12 ರಂದು ಬೆ.9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಪಟ್ಟಣ ವ್ಯಾಪ್ತಿಯ ನಿಡಘಟ್ಟ, ಕಂದೇಗಾಲ, ಚೋಳನಹಳ್ಳಿ, ಗಾಜನೂರು, ಗೌಡಗೆರೆ, ಸುಣ್ಣದದೊಡ್ಡಿ, ಕ್ಯಾತೇಗೌಡನದೊಡ್ಡಿ, ಅಂಕನಹಳ್ಳಿ, ಅಂಚೆದೊಡ್ಡಿ, ಅಮೃತೇಶ್ವರನಹಳ್ಳಿ, ಮೊಳೆದೊಡ್ಡಿ, ಅಣ್ಣಹಳ್ಳಿ, ಕಲ್ಲುವೀರನಹಳ್ಳಿ, ಕೆಂಬೂತಗೆರೆ, ಹಾಡ್ಲಿ, ಅಗಸನಪುರ, ಜೋಗೀಪುರ, ಅಟೂವನಹಳ್ಳಿ, ಆಲದಹಳ್ಳಿ, ತುರುಗನೂರು, ಮೇಗಳಾಪುರ, ಕಂಸಾಗರ, ಲಿಂಗಣಾಪುರ, ನಡಕಲಪುರ, ನಂಜೇಗೌಡನದೊಡ್ಡಿ ಗ್ರಾಮದೇವತೆಪುರ, ಕೋಡಿಪುರ, ಹುಲ್ಲಹಳ್ಳಿ, ಹುಲ್ಲೇಗಾಲ, ಚನ್ನಿಪುರ,ಬಸವನಪುರ, ಡಿ.ಹಲಸಹಳ್ಳಿ, ಧನಗೂರು, ಕೊನನಪುರ, ತಮ್ಮಡಹಳ್ಳಿ, ಬುಗತಗಹಳ್ಳಿ, ಗುಳಘಟ್ಟ, ಬಸವನಪುರ, ಟೀ.ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು, ತಳಗವಾದಿ, ದೇವಿಪುರ, ಜೆ.ಸಿ.ಪುರ, ಹೊಂಬೇಗೌಡನದೊಡ್ಡಿ, ಕಾಳಕೆಂಪನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದ್ದು, ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.

Share this article