---
ಪ್ರಕೃತಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ ಸಮಾಜ ಸೃಷ್ಟಿಯಾಗುತ್ತದೆ ಎಂಬುದನ್ನು ಉತ್ತಪ್ಪ ಅವರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್ ಅಸೋಸಿಯೇಷನ್ ಆಯೋಜಿಸಿದ್ದ ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ ಅವರ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಆಹಾರವೇ ಔಷಧವಾಗಿತ್ತು:ಕಾಡಿನ ಪ್ರಾಣಿಗಳು ಯಾವ ಸಮಯದಲ್ಲಿ ದಾಳಿ ಮಾಡುತ್ತದೆ ಎಂಬುದು ತಿಳಿಯುತ್ತದೆ. ಅದರೆ ನಾಡಿನಲ್ಲಿ ಯಾವ ಪ್ರಾಣಿ ಹೇಗೆ ದಾಳಿ ಮಾಡುತ್ತವೆ ಎಂಬು ತಿಳಿಯಲು ಸಾಧ್ಯವಿಲ್ಲ. ಈ ಹಿಂದೆ ನಮಗೆ ಆಹಾರವೇ ಔಷಧವಾಗಿತ್ತು. ಆದರೆ ಇಂದು ಏನಾದರೂ ಸೇವಿಸು, ಬೇಕಿದ್ದರೆ ಮಾತ್ರೆ ತೆಗೆದುಕೊಳ್ಳೋಣ ಎಂಬ ಮನೋಭಾವಕ್ಕೆ ಬಂದಿದ್ದೇವೆ ಎಂದರು.
ನಾನು ಮೈಸೂರಿನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವಾಗ ಕಾಡಿನಲ್ಲಿರುವ ಜನರ ಬಗ್ಗೆ ಹೆಚ್ಚು ಬರೆದಿದ್ದೇನೆ. ಆದಿವಾಸಿಗಳ ಬಗ್ಗೆ ಕುತೂಹಲ ಉಂಟಾಗಿತ್ತು. ನಾವು ನಾಡಿನಲ್ಲಿ ಹೇಗೆ ಬದುಕಬೇಕು ಎಂಬುದು ತಿಳಿಸಿದ್ದು ಕಾಡು. ಕಾಡಿನಲ್ಲಿ ಹಗಲು ಹಗಲಾಗಿರುತ್ತದೆ ರಾತ್ರಿ ರಾತ್ತಿಯಾಗಿರುತ್ತದೆ. ಆದರೆ ನಾಡಿನಲ್ಲಿ ಇದನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಯಾವುದೇ ತಯಾರಿ ಬೇಡ:
ರಾಜಕೀಯ ರಾಜಕಾರಣದ ಬಗ್ಗೆ ಯಾವುದೇ ಅಧ್ಯಯಾನ ಇಲ್ಲದೆ ಬರೆಯಬಹುದು. ಅದರೆ, ಹುಲಿ ಸಂರಕ್ಷಣೆ ಏಕೆ ಅಗತ್ಯ ಎಂಬುದರ ಬಗ್ಗೆ ಬರೆಯಬೇಕಾದರೆ ಯಾರು ಬರೆಯುವುದಿಲ್ಲ. ಯಾವುದು ಆದ್ಯತೆ ಇಲ್ಲವೋ ಅದನ್ನು ಆದ್ಯತೆಯಾಗಿ ಮಾಡಿಕೊಂಡಿದ್ದಾರೆ. ಸಮಯವಿಲ್ದ ಓದುಗರಿಗೆ ಜಾಗವಿಲ್ಲದ ಪತ್ರಿಕೆಗೆ ಬರೆಯುತ್ತಿದ್ದೇವೆ. ಇದರ ಮಧ್ಯೆ ವನ್ಯಜೀವಿಗಳ ಬಗ್ಗೆ ಬರೆಯುವುದು ಬಹಳ ಮುಖ್ಯ. ಮುಖ್ಯಮಂತ್ರಿಗಳ ಹೇಳಿಕೆಯಷ್ಟೇ ಮುಖ್ಯವೋ ವನ್ಯಜೀವಿಗಳ ಆರ್ಥನಾದವೂ ಮುಖ್ಯ ಎಂದರು.
ಗ್ಲೋಬಲ್ ವಾರ್ಮಿಂಗ್ ಬಗ್ಗೆ ಈಗ ಕರ್ನಾಟಕದಲ್ಲಿ ಅನುಭವ ನೀಡಿದೆ. ಜಗತ್ತಿನ ಯಾವುದೇ ಮೂಲೆತಲ್ಲಿ ನಡೆಯವ ಘಟನೆ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅಧ್ಯಯನ ಮಾಡುವವರಿಗೆ ಸಾಕಷ್ಟು ಅಂಶ ಸಿಗಲಿದೆ ಎಂದು ಅವರು ತಿಳಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಮಾಧ್ಯಮ ಕ್ಷೇತ್ರ ಎಂದರೆ ಕಷ್ಟಕರ ಕ್ಷೇತ್ರ ಎಂದು ನಾನು ತಿಳಿದಿದ್ದೇನೆ. ಮೂರು ಸಾಲುಗಳನ್ನು ಮೂರು ಪುಟಗಳು ಬರೆಯುವಷ್ಟು ಕ್ರಿಯಾಶೀಲವಾಗಿ ಬರೆಯುತ್ತಾರೆ. ದಿನ ಓದಿದರೆ, ಬರೆದರೆ ಬರವಣೆಗೆ ಶೈಲಿ ಹೆಚ್ಚುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ವಿಭಿನ್ನ ಆಲೋಚನೆ ಮೂಡುತ್ತದೆ. ತಾಳ್ಮೆ ಬೆಳೆಸಿಕೊಂಡರೆ ಸೃಜನ ಶೀಲರಾಗಿ ಗುಣಾತ್ಮಕ ಆಲೋಚನೆ ಹೆಚ್ಚುತ್ತದೆ. ಹೊಸ ಪದಗಳ ಪ್ರಯೋಗ ಮಾಡಬೇಕು. ಇದು ಇತ್ತೀಚಿನ ದಿನಗಳಲ್ಲಿ ಇದು ಕಡಿಮೆ ಆಗುತ್ತಿದೆ ಎಂದು ಹೇಳಿದರು.
-- ಬಾಕ್ಸ್--
- ಕಾಡು ಪ್ರಾಣಿಗಳೂ ಕೂಡ ಮನುಷ್ಯರಂತೆಯೇ ಬದಲಾಗುತ್ತಿವೆ!-ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಈಗ ನಡೆದ ಚುನಾವಣಾ ವರದಿಯನ್ನು ಕಾಡಿನಲ್ಲಿ ನಡೆಸಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸಿದರೆ, ಸಂಖ್ಯೆಯಲ್ಲಿ ಹೆಚ್ಚಿರುವ ಮಂಗಗಳನ್ನು ನಾಯಕರಾಗಿ ಆಯ್ಕೆ ಮಾಡಲಾಗುತ್ತಿತ್ತು ಎನಿಸುತ್ತದೆ ಎಂದರು.
ನಾವು ವನ್ಯಜೀವಿಗಳ ಬಗ್ಗೆ ಯಾಕೆ ಆದ್ಯತೆ ನೀಡುತ್ತಿಲ್ಲ ಎಂದು ರಾಜಕಾರಣಿಗಳನ್ನು ಕೇಳಿದರೆ ಅವು ಓಟು ಹಾಕುವುದಿಲ್ಲ ಎಂಬ ಉತ್ತರ ಬರುತ್ತದೆ. ಮಾಧ್ಯಮಗಳು ಯಾಕೆ ಆದ್ಯತೆ ನೀಡುವುದಿಲ್ಲ ಎಂದರೆ ಅವು ಜಾಹೀರಾತು ಕೊಡುವುದಿಲ್ಲ, ಪತ್ರಿಕೆಯನ್ನೂ ಓದುವುದಿಲ್ಲ. ಹೋಗಲಿ ಸುದ್ದಿಗೋಷ್ಠಿಯನ್ನೂ ನಡೆಸುವುದಿಲ್ಲ ಎಂದರು.ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ವನ್ಯಜೀವಿ ಪತ್ರಿಕೋದ್ಯಮಕ್ಕೆ ಸಾಕಷ್ಟು ಆಸಕ್ತಿ ಇದೆ. ಕೃಪಾಕರ - ಸೇನಾನಿ ಮುಂತಾದ ಅನೇಕ ಪ್ರಖ್ಯಾತ ಛಾಯಾಗ್ರಾಹಕರು ಇದ್ದಾರೆ. ಆದರೆ ಕನ್ನಡಪ್ರಭದಲ್ಲಿ ಸೇವ್ ವೈಲ್ಡ್ ಲೈಫ್ ಕಾರ್ಯಕ್ರಮ ತಂದೆವು. ಪ್ರಮುಖ ರಾಯಭಾರಿಯನ್ನು ನೇಮಿಸಿ ಕಾಡಿಗೆ ಕರೆದೊಯ್ದು, ಅಲ್ಲಿನ ಸಮಸ್ಯೆಗಳಿಗೆ ಸರ್ಕಾರದ ಮೂಲಕವೇ ಪರಿಹರಿಸಿಕೊಡಲಾಗುತ್ತಿದೆ. ಕಾಡು ಪ್ರಾಣಿಗಳೂ ಕೂಡ ಮನುಷ್ಯರಂತೆಯೇ ಬದಲಾಗುತ್ತಿವೆ. ಅವುಗಳೂ ಕೂಡ ಚಾಪೆ ಕೆಳಕೆ ನುಸುಳಲು ಆರಂಭಿಸಿವೆ ಎಂದರು.