ಜೂನ್‌ 24 ರಂದು ಚಂದ್ರಮೌಳೇಶ್ವರನ ದೇಗುಲ ಲೋಕಾರ್ಪಣೆ

KannadaprabhaNewsNetwork |  
Published : Jun 19, 2024, 01:06 AM IST
18ಎಚ್ಎಸ್ಎನ್16 : ಉದ್ಘಾಟನೆಗೆ ಸಿದ್ಧವಾಗಿರುವ ಚಂದ್ರಮೌಳೇಶ್ವರ ದೇವಾಲಯ. | Kannada Prabha

ಸಾರಾಂಶ

ಹಾರನಹಳ್ಳಿಯಲ್ಲಿ ಶ್ರೀ ಚಂದ್ರಮೌಳೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಾದಿಗಳ ಸಹಕಾರದಿಂದ ಭವ್ಯವಾದ ಶಿಲಾಮಯ ಶಿವ ಮಂದಿರ ನಿರ್ಮಾಣವಾಗಿದೆ.

ಪುನರ್‌ ನಿರ್ಮಾಣಗೊಂಡಿರುವ ಭವ್ಯ ಶಿಲಾಮಯ ಶಿವ ಮಂದಿರ

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಮೇಲೆ ಅರಳಿ ಮರ ಬೆಳೆದು ದೇವಾಲಯ ಸಂಪೂರ್ಣವಾಗಿ ಶಿಥಿಲವಾಗಿ ದೇವಾಲಯದ ಕೆಲವು ಭಾಗಗಳು ಕುಸಿದು ಬಿದ್ದಿತ್ತು, ಇದನ್ನು ಮನಗಂಡು ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ ಹಾರನಹಳ್ಳಿ ಅಧ್ಯಕ್ಷತೆ ಹಾಗೂ ಎಚ್.ಆರ್ ಶಂಕರ್ ಅವರ ನೇತೃತ್ವದಲ್ಲಿ ಶ್ರೀ ಚಂದ್ರಮೌಳೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಾದಿಗಳ ಸಹಕಾರದಿಂದ ಭವ್ಯವಾದ ಶಿಲಾಮಯ ಶಿವ ಮಂದಿರ ನಿರ್ಮಾಣವಾಗಿದೆ.

ಶ್ರೀ ಚಂದ್ರಮೌಳೇಶ್ವರ‌, ಪಾರ್ವತಿ, ಶಕ್ತಿ ಗಣಪತಿ ಪರಿವಾರ ದೇವತೆಗಳ, ಶಿಲಾ ವಿಗ್ರಹ, ಅಷ್ಟಬಂಧ ಪ್ರತಿಷ್ಠೆ, ಶಿಖರ ಪ್ರತಿಷ್ಠೆಯ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವು ಜೂ. 24 ಸೋಮವಾರದಿಂದ 26 ಬುಧವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 24 ಸೋಮವಾರ ಸಂಜೆ ಗುರು ಪ್ರಾರ್ಥನೆ, ಮಹಾ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹವಾಚನ, ಪಂಚಗವ್ಯ ಮೇಳನ, ವಿಕಿರಣ ಕೌತುಕ, ಬಂಧನ ಕಳಶ ಸ್ಥಾಪನೆ, ಅಂಕುರಾರ್ಪಣೆ, ಮಂಡಲ ಆರಾಧನೆ, ರಾಕ್ಷೋಘ್ನ, ಅಘೋರಾಸ್ತ್ರ, ವಾಸ್ತುಹೋಮ ಕಾರ್ಯಕ್ರಮಗಳು ನಡೆಯಲಿದೆ ಎಂದು ಚಂದ್ರ ಮೌಳೀಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹಾರನಹಳ್ಳಿ ನಾಗೇಂದ್ರ ತಿಳಿಸಿದರು.

25ರ ಮಂಗಳವಾರ ದೇವನಾಂದಿ ಅಧಿವಾಸಗಳು, ಪಂಚಗವ್ಯ ಪ್ರಾಯಶ್ಚಿತ್ತ ಹೋಮ, ಸನವಗ್ರಹ ಚರ್ತುದ್ರವ್ಯ, ಗಣಪತಿ ಮಹಾ ಹೋಮ. ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಪರ್ಯಾಯ ತ್ರಯ ಹೋಮ. ಪೂರ್ಣಾಹುತಿ, ನಿದ್ರಾ ಕಲಶ ಸ್ಥಾಪನೆ, ಪುರುಷ ಸೂಕ್ತ ತತ್ಪನ್ಯಾಸ ಕಾರ್ಯಕ್ರಮಗಳು ನಡೆಯಲಿದೆ. 26ರ ಬುಧವಾರ ಬೆಳಿಗ್ಗೆ 6 ರಿಂದ ಸುಪ್ರಭಾತ ಸೇವೆಗಳನ್ನು ಸ್ವಸ್ತಿವಾಚನ, ಪಿಂಡಿಕಾ ಸ್ಥಾಪನೆ, ಅಷ್ಟಬಂಧ ಪ್ರತಿಷ್ಠೆ, ನೇತ್ರೋನ್ ಮಿಲನ, ಪ್ರಾಣ ಪ್ರತಿಷ್ಠೆ, ಗಂಗಾ ಪೂಜೆ, ಗೋಪೂಜೆ, ಮಂಟಪ ಪೂಜೆ ದ್ವಾರಲಕ್ಷ್ಮಿ ಪೂಜೆ ಪೂಜಾಂಗ ಪ್ರತಿಷ್ಠಾಂಗ ಹೋಮ ಬೆಳಿಗ್ಗೆ 9.30 ರಿಂದ 10.30ಕ್ಕೆ ಸಿಂಹ ಲಗ್ನದಲ್ಲಿ ನಿರೀಕ್ಷಣೆ ಶಿಖರ, ಪ್ರತಿಷ್ಠೆ ಕುಂಭಾಭಿಷೇಕ, ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ, ಮಹಾಪೂಜೆ ಕಾರ್ಯಕ್ರಮಗಳನ್ನು ಹಾಸನದ ವೇದ ವಿದ್ಯಾಚಾರ್ಯ ಎಂ.ವಿ.ಕೃಷ್ಣಮೂರ್ತಿ ತಂಡದಿಂದ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿವೆ. 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿವೆ.

ಸಭೆ ನಂತರ ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ 6 ಗಂಟೆಗೆ ಶ್ರೀ ಚಂದ್ರಮೌಳೀಶ್ವಸ್ವಾಮಿ, ಗ್ರಾಮದೇವತೆ ಶ್ರೀ ಕೋಡಮ್ಮ ದೇವಿಯರ ಉತ್ಸವ ಸತ್ಸಂಗ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ಹಾರನಹಳ್ಳಿ ನಾಗೇಂದ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!