ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಅರಣ್ಯ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಮಾತನಾಡಿ, ಸರ್ವೆ ಮಾಡಲು ಇಲಾಖೆಗೆ ಹೆಚ್ಚಿನ ಸಮಯ ಬೇಕು ಎಂದು ಕೇಳಿಕೊಂಡಿದ್ದರು,ಅದಕ್ಕೆ ಸಮಯವನ್ನು ಕೊಟ್ಟಿದ್ದೇನೆ,ಅಲ್ಲದೆ ಕಾರ್ಯದರ್ಶಿಗಳ ಜತೆ ಮಾತನಾಡಿದ್ದೇನೆ ಎಂದು ಹೇಳಿದರು.
ಕೆಲವು ಕಡೆ ಸಿಬ್ಬಂದಿ ಕೊರತೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಉಡುಪಿ ಜಿಲ್ಲೆ ಸೇರಿದಂತೆ ಯಾವ ಯಾವ ಜಿಲ್ಲೆಯಲ್ಲಿ ಸರ್ವೆ ಯಾವ ಹಂತದಲ್ಲಿದೆ ಎಂದು ವರದಿ ಕೊಡಿ ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದರು.ಬಹಳಷ್ಟು ಕಡೆ ಸರ್ವೆ ಶೇ.೭೦,೮೦,೯೦ ಮುಗಿದಿದೆ. ಕೆಲವು ಕಡೆ ಶೇ.೫೦,೬೦ ಮಾತ್ರ ಆಗಿದೆ.ಅಂತಹ ಕಡೆ ಹೆಚ್ಚುವರಿಯಾಗಿ ಸರ್ವೆ ಕೆಲಸವನ್ನು ಮಾಡಲು ಸೂಚನೆ ನೀಡಲಾಗಿದೆ. ಇನ್ನೂ ೩ ತಿಂಗಳು ಸಮಯ ಇದ್ದು, ೪ ತಿಂಗಳೊಳಗೆ ಸರ್ವೆ ಪೂರ್ಣಗೊಳ್ಳುತ್ತದೆ ಎಂದರು.
ಕಳೆದ ನ.೩ ರಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲೂ ಡೀಮ್ಡ್ ಫಾರೆಸ್ಟ್ ಸರ್ವೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ,ಭೂ ಮಂಜೂರಾತಿ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿಯಿಂದ ಮೂವರ ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ,ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನ. ೧ ರೊಳಗೆ ಅಕ್ರಮ ಬಂದೂಕು ಸರೆಂಡರ್ ಮಾಡುವಂತೆ ಮುಖ್ಯಮಂತ್ರಿ ಅರಣ್ಯ ಹುತಾತ್ಮರ ದಿನಾಚರಣೆ ವೇಳೆ ಮುಖ್ಯಮಂತ್ರಿ ಈ ಸೂಚನೆ ನೀಡಿದ್ದಾರೆ. ಅಲ್ಲದೆ ಡಿಜಿಪಿ ಸಲೀಂ ಅವರಿಗೂ ಸೂಚನೆ ನೀಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಟಿಂಗ್ ವಿಚಾರದ ಕುರಿತು ಪ್ರತಿಕ್ರಿಯಿಸಲು ಸಚಿವ ರಾಮಲಿಂಗಾರೆಡ್ಡಿ ನಿರಾಕರಿಸಿದರು.
ಎಸ್‌ಐಆರ್ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರ,ಜಾರ್ಖಂಡ್, ಪಶ್ಚಿಮ ಬಂಗಾಳ ಕಡೆ ಎಸ್‌ಐಆರ್ ಸಮಸ್ಯೆಯಾಗಿತ್ತು. ನಮ್ಮಲ್ಲಿ ಫಾರಂ 7 ಬರುವವರೆಗೂ ಸಮರ್ಪಕವಾಗಿತ್ತು, ಅದಾದ ಮೇಲೆ ಸಮಸ್ಯೆಯಾಯಿತು ಎಂದುರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್, ರೈತಸಂಘದ ಮುಖಂಡರು, ಅಧಿಕಾರಿಗಳು ಇದ್ದರು.
ಬಿಜೆಪಿಗರು ಪ್ರತಿಭಟನೆ ಮಾಡಲಿ, ಸಂತೋಷಹಾಲು, ಮೊಸರು ಜೊತೆ ಬಸ್ ಟಿಕೆಟ್ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ಬಿಜೆಪಿ ವಿರೋಧ ಪಕ್ಷದಲ್ಲಿದೆ, ಪ್ರತಿಭಟನೆ ಮಾಡಲಿ, ಸಂತೋಷ ಎಂದು ಹೇಳಿದರು.
ಅದೇ ರೀತಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಎಲ್ಲದರ ಮೇಲೆ ಮೋದಿ ಟ್ಯಾಕ್ಸ್ ಹಾಕಿದೆ ಎಂದು ಕಿಡಿಕಾರಿದರಲ್ಲದೆ ಗಾಳಿ, ಬೆಳಕು ಎರಡನ್ನೂ ಬಿಟ್ಟು ಬೇರೆ ಎಲ್ಲದರ ಮೇಲೆ ಮೋದಿ ಟ್ಯಾಕ್ಸ್ ಹಾಕಿದ್ದಾರೆ. ಅದರ ವಿರುದ್ಧವೂ ಬಿಜೆಪಿಗರು ಪ್ರತಿಭಟಿಸಬೇಕಿತ್ತು ಎಂದು ಬಿಜೆಪಿಗೆ ತಿರುಗೇಟಯ ನೀಡಿದರು.ಬಿಜೆಪಿಗರು ಪ್ರತಿಭಟನೆ ಮಾಡುವುದು ತಪ್ಪಲ್ಲ, ಆದರೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಮಾತ್ರ ಪ್ರತಿಭಟಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.