ಸಾಹಿತ್ಯದ ಬಗ್ಗೆ ಆಳವಾದ ಚಿಂತನೆ ಅಗತ್ಯ

KannadaprabhaNewsNetwork |  
Published : Nov 19, 2026, 01:15 AM IST
 | Kannada Prabha

ಸಾರಾಂಶ

ಕರ್ನಾಟಕದಲ್ಲಿ ಸಾಹಿತ್ಯವನ್ನು ಗಾಢವಾಗಿ ಪ್ರೀತಿಸುವ, ಓದಿ ಅರಗಿಸಿಕೊಳ್ಳುವ ಹಾಗೂ ಆಳವಾಗಿ ಚರ್ಚಿಸುವ ಯುವ ಜನರು ಮತ್ತು ಸ್ನೇಹಿತರು ಇರುವುದಕ್ಕೆ ಅಪಾರ ಸಂತಸ ತಂದಿದೆ, ದೇಶದ ಬೆರಳೆಣಿಕೆಯಷ್ಟು ಪ್ರಾಂತ್ಯಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಸಾಹಿತ್ಯದ ಬಗ್ಗೆ ಇಂತಹ ಆಳವಾದ ತಿಳುವಳಿಕೆ ಮತ್ತು ಚಿಂತನೆ ಕಂಡು ಬರುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಕರ್ನಾಟಕದಲ್ಲಿ ಸಾಹಿತ್ಯವನ್ನು ಗಾಢವಾಗಿ ಪ್ರೀತಿಸುವ, ಓದಿ ಅರಗಿಸಿಕೊಳ್ಳುವ ಹಾಗೂ ಆಳವಾಗಿ ಚರ್ಚಿಸುವ ಯುವ ಜನರು ಮತ್ತು ಸ್ನೇಹಿತರು ಇರುವುದಕ್ಕೆ ಅಪಾರ ಸಂತಸ ತಂದಿದೆ, ದೇಶದ ಬೆರಳೆಣಿಕೆಯಷ್ಟು ಪ್ರಾಂತ್ಯಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಸಾಹಿತ್ಯದ ಬಗ್ಗೆ ಇಂತಹ ಆಳವಾದ ತಿಳುವಳಿಕೆ ಮತ್ತು ಚಿಂತನೆ ಕಂಡು ಬರುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.

ಡಾ. ಎಚ್.ಎಂ. ಗಂಗಾಧರಯ್ಯನವರ ಸ್ಮರಣಾರ್ಥ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ, ಜನಪದ ಜಾತ್ರೆ ಹಾಗೂ ಜಿಲ್ಲಾ ಮಟ್ಟದ ಭಾವಗೀತೆ, ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು

ಯುವಕರು ಸಾಹಿತ್ಯವನ್ನು ಎದುರಿಸುವಾಗ ಉಂಟಾಗುವ ಸಮಸ್ಯೆಗಳನ್ನು ತಿದ್ದಿ, ಅವರೊಂದಿಗೆ ಚರ್ಚೆ ನಡೆಸುವ ಉದ್ದೇಶದಿಂದ ತಾವು ಬಂದಿದ್ದಾಗಿ ತಿಳಿಸಿದ ಅವರು, ಇಲ್ಲಿನವರ ಸಾಹಿತ್ಯಿಕ ಪ್ರಬುದ್ಧತೆ ಮತ್ತು ಚರ್ಚೆಯ ಗುಣಮಟ್ಟವನ್ನು ಕಂಡು ತಮಗೆ ಮಾತನಾಡಲು ಏನೂ ಉಳಿದಿಲ್ಲವೆನ್ನುವಷ್ಟು ಆಶ್ಚರ್ಯ ಮತ್ತು ಆನಂದವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ​ತಾವು ಹಿಂದೆ ಹಂಪಿಯಲ್ಲಿ ಆರಂಭಿಸಿದ್ದ ಇಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಕಾಲಕ್ರಮೇಣ ಮೊದಲಿನ ಕಳೆಯನ್ನು ಕಳೆದುಕೊಂಡು ನಿಂತುಹೋಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆ ದುಃಖದಲ್ಲಿದ್ದ ತಮಗೆ, ಕರ್ನಾಟಕದ ಈ ಊರಿನಲ್ಲಿ ಇಂತಹ ಅರ್ಥಪೂರ್ಣ ಯೋಜನೆ ಮತ್ತು ಸಾಹಿತ್ಯಿಕ ವಾತಾವರಣ ಕಂಡುಬಂದಿರುವುದು ಅತ್ಯಂತ ಸಮಾಧಾನ ಹಾಗೂ ಸಂತೋಷ ತಂದಿದೆ ಎಂದರು.

ಖ್ಯಾತ ವಾಗ್ಮಿ ಹಾಗೂ ಚಿಂತಕ ಪ್ರೊ. ಕೃಷ್ಣೇಗೌಡ ಮಾತನಾಡಿ, ಇಂದಿನ ಯುವ ಪೀಳಿಗೆಯ ಮನೋಭಾವ, ಉದ್ಯೋಗ ಕ್ಷೇತ್ರದ ಸವಾಲುಗಳು ಹಾಗೂ ಕನ್ನಡ ನಾಡು-ನುಡಿಯ ಯುವ ಜನರಲ್ಲಿ ಕಷ್ಟಪಟ್ಟು ದುಡಿಯುವ ಮನೋಭಾವ ಕಡಿಮೆಯಾಗುತ್ತಿರುವ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಸಾಹಿತ್ಯಿಕ ಕೊಡುಗೆ ಹಾಗೂ ಕನ್ನಡ ಭಾಷೆಯ ಧಾರಣಾ ಸಾಮರ್ಥ್ಯವನ್ನು ಕೊಂಡಾಡಿದ ಪ್ರೊ. ಕೃಷ್ಣೇಗೌಡರು, ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ರಾಜ್ಯ ಕರ್ನಾಟಕ ಎಂಬುದು ನಮ್ಮ ಹೆಮ್ಮೆ ಎಂದರು.

ಸಿದ್ಧಾರ್ಥ ಶಿಕ್ಷಣ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಡಾ. ಬಾಲಗುರುಮೂರ್ತಿ ಅವರು ಮಾತನಾಡಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಯಾವುದೇ ಲಾಭದ ಅಪೇಕ್ಷೆಯಿಲ್ಲದೆ, ಕೇವಲ ಶುಲ್ಕ ಸಂಗ್ರಹಣೆ ಅಥವಾ ವ್ಯಾಪಾರೀಕರಣಕ್ಕೆ ಇಳಿಯದೆ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಮಾಜಮುಖಿ ಸಂಸ್ಥೆಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ಧಲಿಂಗಪ್ಪ, ಕನ್ನಡ ಸಂಸ್ಕೃತಿ ಮಂಡಳಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹೊ.ನ. ನೀಲಕಂಠೇಗೌಡ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಆಶಾ ಬಗ್ಗನಡು, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ವಿನಯ್‌ಕುಮಾರ್, ಡಾ. ಕೆ.ಎಸ್. ಸಿದ್ಧರಾಜು, ಭಾನುಪ್ರಕಾಶ್ ವಿವಿಧ ಕಾಲೇಜ್‌ಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದಿಂದಲೇ ದೇಶದಲ್ಲಿ ಅಭಿವೃದ್ಧಿ ಸಾಧ್ಯ: ಕ್ಯಾ. ಬ್ರಿಜೇಶ್ ಚೌಟಾ
ಹುಬ್ಬಳ್ಳಿ ನಾಗರಿಕ ಧ್ವನಿ ಶೀಘ್ರ ಅಸ್ತಿತ್ವಕ್ಕೆ